• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನಾವು ಕರ್ನಾಟಕಕ್ಕೆ ಸೇರಿಯೇ ಸಿದ್ಧ...ಅದಕ್ಕೇ ಈ ನಿರಂತರ ಹೋರಾಟ’

By Staff
|

‘ದಶಕಗಳ ಬಳಿಕ ಬರ್ಲಿನ್‌ ಗೋಡೆಯನ್ನು ಕೆಡವಿ ಹಾಕುವುದು ಸಾಧ್ಯವಾಗಲಿಲ್ಲವೇ.. ಹಾಗೆಯೇ ನಮ್ಮ ಹೋರಾಟ ಮುಂದುವರೆಯುತ್ತಲೇ ಇರುತ್ತದೆ. ಒಂದಲ್ಲ ಒಂದು ದಿನ ಕಾಸರಗೋಡು ಜಿಲ್ಲೆ ಕರ್ನಾಟಕಕ್ಕೆ ಸೇರಿಯೇ ತೀರುತ್ತದೆ. ಆ ದಿನಕ್ಕಾಗಿ ಕಾಸರಗೋಡಿನ ಕನ್ನಡಿಗರು ಕಾಯುತ್ತಲೇ ಇದ್ದಾರೆ....’ ಇದು ಸ್ವಾತಂತ್ರ್ಯ ಹೋರಾಟಗಾರ, ಏಕತಾ ಗೀತೆಗಳ ಕವಿ ಕೈಯ್ಯಾರ ಕಿಞಣ್ಣ ರೈಗಳ ಮಾತು. ಕನ್ನಡಕ್ಕಾಗಿ ಉಸಿರಾಡುತ್ತಾ, ಕರ್ನಾಟಕದ ಏಕತೆಗಾಗಿ ಹವಣಿಸುವ ಕಿಞಣ್ಣ ರೈಗಳಂತಹುದೇ ಸಾವಿರ ಮನಸುಗಳು ಕಾಸರಗೋಡಿನಲ್ಲಿ ವೆ.

ಅಲ್ಲಿನ ಕನ್ನಡಿಗರು, ಕನ್ನಡ ಸಾಹಿತ್ಯ, ಕನ್ನಡ ಸಂಘಗಳನ್ನು ಕಟ್ಟಿಕೊಂಡು ಕರ್ನಾಟಕದೊಂದಿಗೇ ಬದುಕುತ್ತಿದ್ದಾರೆ. ಆದರೆ ಅವರಿಗೆ ಕೇರಳದ ಸರಕಾರಿ ಸುತ್ತೋಲೆಗಳನ್ನು ಪಾಲಿಸದೇ ಬೇರೆ ವಿಧಿಯಿಲ್ಲ. ಈ ಕಿರಿಕಿರಿಯಿಂದ ಪಾರಾಗುವ, ಕರ್ನಾಟಕದಲ್ಲಿ ಐಕ್ಯಗೊಳ್ಳುವ ಅವರ ಕನಸು ಹಸಿಯಾಗಿ, ಉಸಿರಾಗಿದೆ.

ಅದಕ್ಕಾಗಿ ಅವರು ಕಾರ್ಯಕ್ರಮಗಳ ಮೂಲಕ ಒಗ್ಗಟ್ಟು ಪ್ರದರ್ಶನ, ಏಕತೆಗಳಿಗೆ ನಿದರ್ಶನಗಳನ್ನು ನಿರಂತರ ಒದಗಿಸುತ್ತಲೇ ಬಂದಿದ್ದಾರೆ. ಆ ನಿಟ್ಟಿನಲ್ಲಿ ನಡೆದ ಹೊಸ ಪ್ರಯತ್ನ - ಪ್ರಥಮ ಬಾರಿಗೆ ರಾಜ್ಯ ಮಟ್ಟದ ಕನ್ನಡ ಮಾಧ್ಯಮ ಶೈಕ್ಷಣಿಕ ಸಮಾವೇಶವನ್ನು ಆಯೋಜಿಸಿರುವುದು.

ಸಮಾವೇಶ ಮಾರ್ಚ್‌ 2ರಂದು ನಡೆಲಿದೆ. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಈ ಸಮಾವೇಶವನ್ನು ಏರ್ಪಡಿಸಿದೆ. ನಗರದ ಟೌನ್‌ ಜಿ.ಯು.ಪಿ. ಶಾಲೆಯಲ್ಲಿ ಸಮಾವೇಶ ನಡೆಯುತ್ತದೆ. ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಂವಿಧಾನಾತ್ಮಕ ಸವಲತ್ತುಗಳನ್ನು ಒದಗಿಸುವಂತೆ ಸರಕಾರವನ್ನು ಒತ್ತಾಯಿಸುವುದು, ಆ ಮೂಲಕ ಕನ್ನಡವನ್ನು ಪ್ರೋತ್ಸಾಹಿಸುವುದು ಸಮಾವೇಶದ ಮುಖ್ಯ ಉದ್ದೇಶ.

ಸಮಾವೇಶವು ಅಧ್ಯಾಪಕರ ಮೆರವಣಿಗೆಯಾಂದಿಗೆ ಬೆಳಗ್ಗೆ 9ಗಂಟೆಗೆ ಆರಂಭವಾಗಲಿದೆ. ಎರಡೂ ರಾಜ್ಯಗಳ ಸಚಿವರು, ಶಿಕ್ಷಣ ತಜ್ಞರು ಹಾಗೂ ವಿಶೇಷ ಅತಿಥಿಗಳು ಭಾಗವಹಿಸುವರು. ಸಮಾವೇಶದಲ್ಲಿ ಸುಮಾರು ಒಂದು ಸಾವಿರ ಮಂದಿ ಪ್ರತಿನಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಯೋಜಕರ ಪ್ರಕಟಣೆ ತಿಳಿಸಿದೆ.

ಭಾಷಾವಾರು ಪ್ರಾಂತ್ಯ ರಚನೆಯ ಬಳಿಕ ನಡೆಯುವ ಪ್ರಥಮ ಶೈಕ್ಷಣಿಕ ಸಮ್ಮೇಳನ ಇದು. ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಸಮಾವೇಶವನ್ನು ಯಶಸ್ವಿಗೊಳಿಸಲು ಸ್ವಾಗತ ಸಮಿತಿ ದುಡಿಯುತ್ತಿದೆ. ಕಾಸರಗೋಡಿನ ವಿವಿಧ ಕನ್ನಡ ಸಂಸ್ಥೆಗಳು, ಸಂಘಟನೆಗಳು, ದಾನಿಗಳು ಸಮಾವೇಶಕ್ಕೆ ನೆರವು ನೀಡಬೇಕು ಎಂದು ಪ್ರಚಾರ ಸಮಿತಿ ಅಧ್ಯಕ್ಷ ಡಿ. ಮಹಾಲಿಂಗೇಶ್ವರ್‌ ರಾಜ್‌ ಮನವಿ ಮಾಡಿಕೊಂಡಿದ್ದಾರೆ.

ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೇ ?

(ಇನ್ಫೋ ವಾರ್ತೆ)

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more