• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ಲಾರಿಡಾ ಎಲೆಕ್ಷನ್‌(ಕುವೆಂಪು ಅವರ ಕ್ಷಮೆ ಕೋರಿ)

By Staff
|

* ಪ್ರೊ. ವೈ. ಆರ್‌. ಮೋಹನ್‌

ಸಿಎನೆನ್‌ ವಾರ್ತೆಯ ಕೇಳಿದೆನೆಂದರೆ

ಅಲಬಾಮ ಪ್ಲಾರಿಡಾ ಆಗುವುದು

ಆ ಓಟಿನ ಕದನವು ಕಾಣುವುದು

ಆ ರಾಜಕೀಯ ರಣರಂಗದಲಿ

ಆ ಪಕ್ಷಗಳ ಪರದಾಟದಲಿ

ಪಕ್ಷದ ಜನರಾರ್ಭಟ ಕೇಳುವುದು

ಮೈ ನವಿರೇಳುವುದು !

ಹೊಳೆಯುವ ಭಿತ್ತಿಗಳಾಟದಲ್ಲಿ

ಪಕ್ಷಗಳೆರಡರ ಜಿದ್ದಿನಲಿ

ಕೂಗುವ ಜನಸಂಘಟನೆಯಲಿ

ಸೈರನ್‌ಗಳ ಚೀತ್ಕಾರದಲಿ

ಸೋಲ್ವರ ಶಾಪದಲಿ

ಮತ ಎಣಿಸುವರ ತಾಪದಲಿ

ನಸು ಸೋತವರ ಕೋಪದಲಿ

ನೆರೆಗೆದ್ದಿ ಹರಾಟೋಪದಲಿ

ನುಗ್ಗುವ ಜನರ ಹಾಹಾಕಾರದಿ

ಕೆರಳಿದ ಜನರ ರೋಷಾರವದಲಿ

ಕಿವಿ ಬಿರಿಯುವುದು !

ಎದೆ ಮುರಿಯುವುದು !

ಬಸಿಯುವ ಬೆವರಿನ ಸ್ನಾನದೊಳೂಡಿ

ಚಿಮ್ಮುವ ಉತ್ಸಾಹ ಹರಿಯಿತು ಕೋಡಿ

ನೋಡುವರ ಕಣ್ಣೊಡೆಯುವುದು !

ಹೇಸಿಗೆಯಲಿ ಮೈ ನಡುಗುವುದು !

ಕೇಳಿರಿ ಬುಷ್‌ ಪ್ರತಿನಿಧಿ ಬೇಕರನ

ಎಲೆಕ್ಷನ್‌ ರೀತಿಯನು

ಎಲೆಕ್ಷನ್‌ ನೀತಿಯನು

ಬೋಧಿಸುವನು ನಿರ್ಭೀತಿಯನು !

ವೈಟ್‌ ಹೌಸಿನ ಲಿಂಕನ್‌ ಮಂಚದಲಿ

ಕ್ಲಿನ್‌ಟನ್‌ ಮಲಗಿಹನು

ಮುಗಿಯದ ಮತಗಳ ಎಣಿಕೆಯಲಿ

ಗೋರನು ಬಿದ್ದಿಹನು !

ತಂದೆಯ ನೆರಳಲಿ ಸುಖದಿಂದಿರುವನು

ಬುಷ್‌ನು ನೋಡಲ್ಲಿ !

ಅಧ್ಯಕ್ಷ ಪೀಠದಿಂದುರುಳುತಲಿರುವನು ಗೋರನು

ಹಾ ! ಹಾ ! ನೋಡಿಲ್ಲಿ !

ಈ ರಾಷ್ಟ್ರದ ಮೊದಲಿನ ಮಹಿಳೆ

ಹೆಣ್ಣಿನ ರೂಪದ ಡೆಮೊಕ್ರಾಟಿಕ್‌ ಕಹಳೆ

ಮುಗುಳನಗೆ ಬೀರುತ ನೋಡಲ್ಲಿ

ನಿಂತಿರುವಳು ನ್ಯೂಯಾರ್ಕಿನಲಿ

ಹಿಲರಿ ಹೊಸ ಸೆನೆಟರಳಾಗಿ !

ಪಾಟೋಮಾಕ್‌ ನದಿ ತೀರದಿ

ತೋರುವರಾರಲ್ಲಿ ?

ಗೋರನು ಸಿಡಿಲಾಗಿರುವನು

ಬುಷ್‌ನ ಸವಾಲಿನಲಿ

ವಿರೋಧಿಯ ಎದೆಯನು

ಬಿರಿಯುವ ಭಾಷಣ

ಮಾಡುತ್ತಿರುವನು ನೋಡಲ್ಲಿ !

ಗೋರನು ಬಿದ್ದನೆ ?

ಬುಶ್‌ನು ಗೆದ್ದನೆ ?

ಮಂದಾಗುವುದನು ಕಾಣಲ್ಲಿ !

ಇದಾವ ನ್ಯಾಯ ?

ಏನನ್ಯಾಯ ?

ಚೀನಿಯ ಕುಹಕವ ನೋಡಲ್ಲಿ !

ಎನನು ನೋಡುವೆ ತಡೆಯುವೆ ಏಕೆ ?

ಆಲ್‌ ಗೋರನು ಸೋಲಲೆಬೇಕೆ ?

ಯುವಕನೆ ಹುಡುಕು ಕಂಪ್ಯೂಟರನು

ಕೂಡಲೆ ಕಳುಹಿಸು ಈ ಮೇಲ್ಗಳನು !

ಹೊಡೆ ಮರು ಚುನಾವಣೆ ಭೇರಿಯನು

ನಡೆ ನಡೆ ಊದು ತುತೂರಿಯನು

ಕರೆ ರಿಪಬ್ಲಿಕನ್‌ ರಣ ಹೇಡಿಗಳನು !

(ವಿ. ಸೂ. ಕುವೆಂಪು ಅವರ ಕುಮಾರವ್ಯಾಸನು ಹಾಡಿದನೆಂದರೆ ಕವನದ ವಿಡಂಬನೆ)

- ಪ್ರೊ. ವೈ. ಆರ್‌. ಮೋಹನ್‌

1826, 37ನೇ ಬೀದಿ, ಎನ್‌ಇ,

ಟಿಸ್ಕಲೂಸ, ಅಲಬಾಮ - 35406 -1533

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more