• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೆಹಲಿ ರಾಷ್ಟ್ರೀಯ ಕನ್ನಡ ಸಮ್ಮೇಳನಾಧ್ಯಕ್ಷ ಡಾ. ಎಂ. ಮಹಾದೇವಪ್ಪ

By Staff
|

ನವದೆಹಲಿ : ಏಪ್ರಿಲ್‌ 6 ಮತ್ತು 7ರಂದು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ‘ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನು ಸೂಚಿಸಿ’ ಎಂಬ ಸಂದೇಶ ಬಹುಶಃ ನಿಮಗೂ ತಲುಪಿತ್ತು. ಆದರೆ, ಸಂಘಟಕರು ಇ-ಮೇಲ್‌ ವಿಳಾಸ ಒದಗಿಸದಿದ್ದ ಕಾರಣ ಅಧ್ಯಕ್ಷರ ಸ್ಥಾನಕ್ಕೆ ಹೆಸರು ಸೂಚಿಸುವ ಮನಸ್ಸಿದ್ದರೂ, ಹಲವರಿಗೆ ಅದು ಸಾಧ್ಯವಾಗಲಿಲ್ಲ.

ಅದೆಲ್ಲಾ ಹಾಗಿರಲಿ, ಈಗ ಸಮ್ಮೇಳನಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮುಗಿದಿದೆ. ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಮಾಜಿ ಕುಲಪತಿ ಡಾ. ಎಂ. ಮಹಾದೇವಪ್ಪ ಅವರನ್ನು 19 ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಏಪ್ರಿಲ್‌ 6ರಂದು ಈ ಸಮ್ಮೇಳನವನ್ನು ರಾಜ್ಯದ ಸಚಿವರಾದ ಸುಮಾ ವಸಂತ್‌ ಉದ್ಘಾಟಿಸಲಿದ್ದಾರೆ.

ಕೇಂದ್ರ ಜಾಗೃತ ಆಯೋಗದ ಆಯುಕ್ತ (ಸಿವಿಸಿ) ಎನ್‌. ವಿಠಲ್‌ ಅವರು ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಈ ವಿಷಯವನ್ನು ಸಮ್ಮೇಳನದ ಸಂಘಟಕರಾದ ದೆಹಲಿ ಕನ್ನಡಿಗ ಮಾಸ ಪತ್ರಿಕೆಯ ಸಂಪಾದಕ ಬಾ. ಸಾಮಗ ಅವರು ತಿಳಿಸಿದ್ದಾರೆ.

ಎರಡು ದಿನಗಳ ಸಮ್ಮೇಳನದಲ್ಲಿ ವಿಚಾರ ಸಂಕಿರಣ, ಮಹಿಳಾ ಉತ್ಸವ, ಕರ್ನಾಟಕ ವೈಭವ ಉತ್ಸವ, ಸಮಾಜಾಭಿವೃದ್ಧಿ ಉತ್ಸವ, ಸಾಹಿತ್ಯೋತ್ಸವ, ಸಾಂಸ್ಕೃತಿಕೋತ್ಸವ, ಭಾಷಾ ಬಾಂಧವ್ಯೋತ್ಸವ, ಸಂಗೀತ ಮತ್ತು ನೃತ್ಯೋತ್ಸವಗಳು ಜರುಗಲಿವೆ. ಈ ಉತ್ಸವಗಳನ್ನು ಬೆಂಗಳೂರಿನ ಮೇಯರ್‌ ಚಂದ್ರಶೇಖರ್‌, ನಿಡುಮಾಮಿಡಿಯ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿಗಳು, ಸಂಸ್ಕೃತ ವಿವಿಯ ಕುಲಾಧಿಪತಿ ವಿ.ಆರ್‌. ಪಂಚಮುಖಿ, ಪ್ರಸಾರ ಭಾರತಿ ಸಲಹೆಗಾರ ಐ. ರಾಮಮೋಹನರಾವ್‌, ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌, ಕರ್ನಾಟಕ ಭವನದ ಆಯುಕ್ತ ಸುಧಾಕರ್‌ರಾವ್‌ ಉದ್ಘಾಟಿಸಲಿದ್ದಾರೆ.

ವಿವಿಧ ಕನ್ನಡ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕರ್ನಾಟಕದ ಸಾಹಿತಿಗಳು, ಗಣ್ಯರು ಸೇರಿದಂತೆ ಸುಮಾರು 2 ಸಾವಿರ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಈ ಸಂದರ್ಭದಲ್ಲಿ ಸನ್ಮಾನಿಸುವ ಕಾರ್ಯಕ್ರಮವೂ ಇದೆ.

(ಇನ್‌ಫೋ ವಾರ್ತೆ)

ವಾರ್ತಾಸಂಚಯ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X