• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪರಿಚಾರಕರೋ ಸೃಷ್ಟಿಕರ್ತರೋ.. ಪರಿಷತ್ತಿನ ಅಧ್ಯಕ್ಷಗಿರಿಗೆ ಗುದ್ದಾಟ..

By Staff
|

*ಸತ್ಯವ್ರತ ಹೊಸಬೆಟ್ಟು

ಸಾಹಿತ್ಯದ ಪರಿಚಾರಕರು ಯಾರಾಗಬೇಕು?
ಸಾಹಿತಿಗಳೇ ಅಥವಾ ಸಾಹಿತ್ಯಪ್ರಿಯರೇ?

Punarurಇಂಥ ಪ್ರಶ್ನೆಗೆ ಉತ್ತರಿಸೋದು ಸುಲಭ ಅಲ್ಲ . ಸಾಹಿತಿಗಳಿಗೆ ಆಡಳಿತ ಮಾಡೋದು ಬರೋಲ್ಲ . ಸ್ವಾಮೀಜಿಗಳು ಏನಿದ್ದರೂ ಆಶೀರ್ವಚನಕ್ಕೆ, ಅಧ್ಯಾತ್ಮಕ್ಕೆ ಸೈ. ಮೇಲ್ವಿಚಾರಣೆ ನೋಡಿಕೊಳ್ಳೋದಕ್ಕೆ ಪಾರುಪತ್ತೆಗಾರರು ಬೇಕು. ಸಾಹಿತ್ಯದಲ್ಲೂ ಅಷ್ಟೇ.. ಕವಿಗಳು, ಲೇಖಕರು ಅಧಿಕಾರ ವಹಿಸಿಕೊಳ್ಳಬಾರದು. ಸಾಹಿತ್ಯ ಪರಿಚಾರಿಕೆ, ಪ್ರೋತ್ಸಾಹದ ಕೆಲಸವನ್ನು ಬೇರೆಯವರು ಮಾಡುತ್ತಾ ಬರಬೇಕು..

ಇವೆಲ್ಲ ವಾದಗಳ ನಡುವೆ ದಕ್ಷಿಣ ಕನ್ನಡದ ಹರಿಕೃಷ್ಣ ಪುನರೂರು ಮತ್ತು ಧಾರವಾಡದ ಮಾಜಿ ಪ್ರತಿಭೆ ಚಂಪಾ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಚಂಪಾ ಅರ್ಹತೆ ಮತ್ತು ಅನರ್ಹತೆಗಳೆರಡೂ ಅಖಿಲ ಕರ್ನಾಟಕಕ್ಕೆ ಗೊತ್ತು . ಹಾಗೇ ಪುನರೂರು ಮಿತಿಗಳನ್ನೂ ಸಾಹಿತ್ಯ ಪ್ರೇಮಿಗಳು ಬಲ್ಲರು. ಆದರೆ ಪರಿಷತ್ತಿನ ಅಧ್ಯಕ್ಷರನ್ನು ಚುನಾಯಿಸುವುದು ಸಾಹಿತ್ಯ ಪ್ರೇಮಿಗಳಲ್ಲ ; ಸಾಹಿತಿಗಳು. ಕೇವಲ ಸಾಹಿತಿಗಳಷ್ಟೇ ಅಲ್ಲ , ಪರಿಷತ್ತಿನ ಸದಸ್ಯರು.

ಪರಿಷತ್ತಿನ ಸದಸ್ಯರೆಲ್ಲ ಸಾಹಿತಿಗಳಲ್ಲ , ಸಾಹಿತಿಗಳೆಲ್ಲ ಸದಸ್ಯರಲ್ಲ ಎಂಬ ಮಾತು ಹಳೆಯದು. ಅಲ್ಲಿ ಜಾತಿ, ಪಂಗಡ, ಊರುಕೇರಿ, ಪ್ರಚಾರ, ಪ್ರಸಾರ, ಒತ್ತಡ ಇವೆಲ್ಲ ಮುಖ್ಯವಾಗಿ ಕೃತಿಯ ಮೌಲ್ಯ ಹಿನ್ನೆಡೆಗೆ ಸರಿಯುತ್ತದೆ. ಹೀಗಾಗಿ ಸಾಹಿತ್ಯ ಪರಿಷತ್‌ ಅಧ್ಯಕ್ಷಗಿರಿ ಕೂಡ ಪ್ರಚಾರ ಮತ್ತು ಆಯಾ ಅಭ್ಯರ್ಥಿಗಳ ವೈಯಕ್ತಿಕ ಪ್ರಭಾವದ ಮೇಲೆ ನಿಂತ ಸಂಗತಿಯೇ ಹೊರತು, ಬರಹದ ಗುಣಮಟ್ಟಕ್ಕೂ ಅದಕ್ಕೂ ನೇರ ಸಂಬಂಧವಿಲ್ಲ . ಉದಾಹರಣೆಗೆ ಈ ಹಿಂದಿನ ಅಧ್ಯಕ್ಷರುಗಳಾದ ಬಸವಾರಾಧ್ಯ, ಮರುಳಯ್ಯ, ಗೊರುಚ, ಜ್ವಾಲನಯ್ಯ ಮುಂತಾದವರು ಹಾಗೂ ಆಡಳಿತಾಧಿಕಾರಿಯಾಗಿದ್ದ ಐ.ಎಂ. ವಿಠಲಮೂರ್ತಿ ಸಭ್ಯಸ್ತರೇನಲ್ಲ .

Champaಈ ನಡುವೆ ಇನ್ನೊಂದು ವಾದವೂ ಕೇಳಿಬರುತ್ತಿದೆ. ಪ್ರಜಾವಾಣಿಯ ಸಂಪಾದಕರಾಗಿ ವೈಯನ್ಕೆ ಇದ್ದಾಗ ನವ್ಯ ಸಾಹಿತ್ಯಕ್ಕೆ ಸಿಕ್ಕಷ್ಟು ಪ್ರೋತ್ಸಾಹ ಬೇರೆಲ್ಲೂ ಸಿಗಲಿಲ್ಲ . ವೈಯನ್ಕೆ ಅವರಿಗಿದ್ದ ಸಾಹಿತ್ಯಾಸಕ್ತಿಯೇ ಅದಕ್ಕೆ ಕಾರಣ. ಆದ್ದರಿಂದ ಸಾಹಿತ್ಯದ ಸೇವೆ ಮಾಡಲು ಕೇವಲ ಆಸಕ್ತಿ ಇದ್ದರೆ ಸಾಕು. ಆತ ಸಾಹಿತಿ ಆಗಿರಬೇಕಿಲ್ಲ . ಒಬ್ಬ ಒಳ್ಳೆಯ ಓದುಗನಿಗೆ ಇರುವ ಪರಿಜ್ಞಾನ ಒಬ್ಬ ಸಾಹಿತಿಗೆ ಇರುವುದಿಲ್ಲ . ಸಾಹಿತಿ ತನ್ನ ಸಿದ್ಧಾಂತಕ್ಕೆ, ತತ್ವಕ್ಕೆ ಗಂಟು ಬಿದ್ದ ಕೂಪ ಮಂಡೂಕ. ಆದರೆ ಓದುಗ ಎಲ್ಲರನ್ನೂ ಓದಿ ಬೆಳೆದ ಸಮಕಾಲೀನ ಪ್ರಜ್ಞೆಯುಳ್ಳ ವ್ಯಕ್ತಿ .

ಈ ವಾದದ ಹಿನ್ನೆಲೆಯಲ್ಲಿ ಪುನರೂರು ಅವರಿಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿರಿ ಕೊಡೋದು ವಾಸಿ ಎಂದು ಅವರ ಅಭಿಮಾನಿಗಳು ವಾದಿಸುತ್ತಿದ್ದರೆ, ಕಳೆದ ಅರುವತ್ತು ವರ್ಷಗಳಲ್ಲಿ ಬ್ರಾಹ್ಮಣರದೇ ಮೇಲುಗೈಯಾಗಿತ್ತು , ಒಮ್ಮೆ ಲಿಂಗಾಯತರಿಗೇಕೆ ಅವಕಾಶ ಕೊಡಬಾರದು ಎಂಬ ಜಾತಿ ಆಧಾರದ ಮತವನ್ನು ಕೀಳಲು ಚಂಪಾ ಯತ್ನಿಸಿದ್ದಾರೆ ಎಂಬ ಸುದ್ದಿಯೂ ಇದೆ. ಸಾಹಿತ್ಯಿಕವಾಗಿ ಮಾತನಾಡುವುದಾದರೆ, ಚಂಪಾ ಸಂಕ್ರಮಣದಂಥ ಪತ್ರಿಕೆ ನಡೆಸಿದವರು. ಅವರಿಗೆ ಸಾಹಿತ್ಯ ಲೋಕ ಗೊತ್ತು . ಅವರು ಅಧ್ಯಕ್ಷರಾದರೆ ಸಾಧನೆ ನಡೆದೀತು ಎಂಬ ಇನ್ನೊಂದು ವಾದವೂ ಕೇಳಿ ಬರುತ್ತಿದೆ.

ಈ ಬಗ್ಗೆ ಒಂದು ಮುಕ್ತ ಚರ್ಚೆ ನಡೆಯಬೇಕಿದೆ. ಪ್ರಶ್ನೆ ಇದು-
ಪರಿಷತ್ತಿನ ಅಧ್ಯಕ್ಷಗಿರಿಗೆ ಯಾರು ಅರ್ಹರು ?
1. ಸಾಹಿತಿಗಳು
2. ಸಾಹಿತ್ಯ ಪರಿಚಾರಕರು.


ಯಾಕೆ?

What do you think about this story ?

ಚಂಪಾ ಹೊಸಗನ್ನಡದ ಪಂಪ

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more