ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರು ಕುರುಡರು!

By Staff
|
Google Oneindia Kannada News

ಬೆಂಗಳೂರು : ನಮ್ಮಲ್ಲಿ ಇಂಗ್ಲಿಷ್‌ ಬಗೆಗೆ ಇರುವ ದಾಸ್ಯ ಮನೋಭಾವ ತೊಲಗಿ ಕನ್ನಡಪರ ಧೋರಣೆ ಬೆಳೆದಲ್ಲಿ ಮಾತ್ರ ಶಿಕ್ಷಣ ವ್ಯವಸ್ಥೆಯೂ ಸೇರಿದಂತೆ ಎಲ್ಲ ಕಡೆ ಕನ್ನಡಕ್ಕೆ ಮಹತ್ವ ಸಲ್ಲುತ್ತದೆ ಎಂದು ಹಿರಿಯ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ ಅಭಿಪ್ರಾಯ ಪಟ್ಟಿದ್ದಾರೆ.

ಶನಿವಾರ ನಗರದಲ್ಲಿ ಕೆ.ಸತ್ಯನಾರಾಯಣ ಅವರ ‘ಮನೋಧರ್ಮ’ ವಿಮರ್ಶಾ ಸಂಕಲನ ಹಾಗೂ ವೆಂಕಟ್ರಮಣ ಗೌಡರ ‘ತರುವಾಯ’ ಕಾದಂಬರಿ ಬಿಡುಗಡೆ ಮಾಡಿ ಅವರು ಮಾತಾಡುತ್ತಿದ್ದರು. ಕನ್ನಡ ನಾಡಲ್ಲಿ ಪಠ್ಯ ಪುಸ್ತಕಗಳು, ನುಡಿಯ ಬಗೆಗೆ ಬಲ್ಲಾಳರು ಆಡಿದ ಮಾತಿನ ಸಾರ ಇಂತಿದೆ....

  • ಇವತ್ತಿನ ಅಗತ್ಯಗಳಿಗೆ ಸ್ಪಂದಿಸದೆ ಹಿಂದಿನದನ್ನೇ ಕುರುಡಾಗಿ ಅನುಕರಿಸುತ್ತಿರುವುದರಿಂದ ನಮ್ಮ ಪಠ್ಯಕ್ರಮ ಸರಿಯಾಗಿಲ್ಲ. ಪರಿಣಾಮ ಶಿಕ್ಷಣ ಕ್ಷೇತ್ರ ಅಧೋಗತಿಗೆ ಇಳಿದಿದೆ.
  • ಶಿಕ್ಷಣ ಹಾಗೂ ಪಠ್ಯಕ್ರಮ ಸುಧಾರಣೆಗೆ ತಜ್ಞರ ಸಮಿತಿಯಾಂದನ್ನು ರಚಿಸಬೇಕು. ಅವರ ಸಲಹೆ ಪಡೆದು ಶಿಕ್ಷಣ ನೀತಿಯನ್ನೂ ರೂಪಿಸಬೇಕು.
  • ನೆರೆರಾಜ್ಯಗಳ ಪಠ್ಯ ಕ್ರಮ ಹಾಗೂ ಪಠ್ಯಪುಸ್ತಕಗಳ ಗುಣಮಟ್ಟಕ್ಕೆ ನಮ್ಮದನ್ನು ಹೋಲಿಸಲೂ ನನಗೆ ನಾಚಿಕೆಯಾಗುತ್ತದೆ.
  • ಬೇರೆ ರಾಜ್ಯಗಳ ಸಚಿವರು ಟಿವಿ ಚಾನೆಲ್‌ಗಳಿಗೆ ಅವರವರ ಭಾಷೆಗಳಲ್ಲಿಯೇ ಹೇಳಿಕೆ ಕೊಡುತ್ತಾರೆ. ನಮ್ಮ ಸಚಿವರು ಮಾತ್ರ ಇಂಗ್ಲೀಷಿನಲ್ಲಿಯೇ ಮಾತಾಡೋದು. ಅದೂ ತಪ್ಪ ತಪ್ಪು ಇಂಗ್ಲೀಷು.
  • ಕನ್ನಡದಲ್ಲಿ ವಿಮರ್ಶೆ ಹಾಗೂ ವಿಮರ್ಶಕರಿಗೆ ಸೂಕ್ತ ವೇದಿಕೆಯೇ ಇಲ್ಲವಾಗಿದೆ. ಪತ್ರಿಕೆಗಳೂ ಈ ನಿಟ್ಟಿನಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕನ್ನಡದ ಓದುಗರ ಪಾಲೂ ಇದಕ್ಕಿದೆ.
  • ಪತ್ರಿಕೆಗಳ ಓದುಗರ ಸಂಖ್ಯೆ ಕನ್ನಡದಲ್ಲಿ ಮಾತ್ರ ಕುಸಿಯುತ್ತಿದೆ. ನ್ಯಾಷನಲ್‌ ರೀಡರ್‌ಷಿಪ್‌ ಸರ್ವೆ ಪಟ್ಟಿ ಮಾಡಿರುವ 14 ಪ್ರಧಾನ ಪತ್ರಿಕೆಗಳ ಪೈಕಿ ಒಂದೇ ಒಂದೂ ಕನ್ನಡದ್ದಿಲ್ಲ. ಕೇರಳ, ಗುಜರಾತ್‌ನಂಥ ಪುಟ್ಟ ರಾಜ್ಯಗಳ ಪತ್ರಿಕೆಗಳು ಈ ಪಟ್ಟಿಯಲ್ಲಿವೆ. ನಮ್ಮಲ್ಲಿ ಸ್ವಾಭಿಮಾನ ಶೂನ್ಯತೆ ಇರುವುದೇ ಇದಕ್ಕೆ ಕಾರಣ.
  • ಸಾಹಿತ್ಯಾಸಕ್ತರನ್ನು ತಲುಪುವುದು ಹೇಗೆ ಎಂಬುದೇ ಇಂದು ನಾವು ಎದುರಿಸುತ್ತಿರುವ ಪ್ರಶ್ನೆ.
ಓದುಗನೇ ನಿಜವಾದ ವಿಮರ್ಶಕ. ಎಲ್ಲ ಓದುಗರನ್ನು ವಿಮರ್ಶಕರನ್ನಾಗಿಸುವುದೇ ಬಹು ಮುಖ್ಯ ಪ್ರಕ್ರಿಯೆ ಎಂದು ಸಮಾರಂಭದಲ್ಲಿ ಮಾತನಾಡಿದ ಕಿ.ರಂ.ನಾಗರಾಜ ಹೇಳಿದರು. ಪ್ರಸ್ತುತ ಸಾಹಿತ್ಯಿಕ ಪರಿಸ್ಥಿತಿ ಬದಲಾಗಿದೆ. ಓದುಗರು ಬಯಸೋದು ಮಾಹಿತಿಯನ್ನು. ಹೀಗಾಗಿ ವಿಮರ್ಶೆ ಯಾವ ಸ್ವರೂಪದಲ್ಲಿರಬೇಕು ಎಂಬುದನ್ನು ಕಂಡುಕೊಳ್ಳಬೇಕಾಗಿದೆ ಎಂದು ಕೆ.ಸತ್ಯನಾರಾಯಣ ಕರೆ ಕೊಟ್ಟರು.

(ಇನ್ಫೋ ವಾರ್ತೆ)

Post your views

ಇದನ್ನೂ ಓದಿ...
ಕಾದಂಬರಿ ಲೋಕದ ಹಿರಿಯಣ್ಣ ವ್ಯಾಸರಾಯ ಬಲ್ಲಾಳರೊಂದಿಗೆ ಮಾತುಕತೆ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X