ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಕೋರಿಯ ಕಂಬಾರ ಸೇರಿದಂತೆ ಕನ್ನಡದ ಎಂಟು ಗಣ್ಯರಿಗೆ ಪದ್ಮಶ್ರೀ

By Oneindia Staff
|
Google Oneindia Kannada News

ಬೆಂಗಳೂರು : ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಡಾ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ ದೇ. ಜವರೇಗೌಡ, ವಿಶ್ವ ಪ್ರಸಿದ್ಧ ಟೆನ್ನಿಸ್‌ ಆಟಗಾರ ಮಹೇಶ್‌ ಭೂಪತಿ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಎಂಟು ಮಂದಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿದೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿರುವ ಚಂದ್ರಶೇಖರ ಕಂಬಾರರು ಜಾನಪದ ಕಸುವಿನ ಅನೇಕ ಶಕ್ತ ಕವನ ಸಂಕಲನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಚಕೋರಿ- ಕಂಬಾರರ ಇತ್ತೀಚಿನ ಮಹಾಕಾವ್ಯ ಪ್ರಕಾರದ ಕೃತಿ. ನಾಟಕಕಾರರಾಗಿಯೂ ಪ್ರಸಿದ್ಧರಾಗಿರುವ ಕಂಬಾರರು ಹರಕೆಯ ಕುರಿ, ನಾಗಮಂಡಲ, ಅಂಗಿ ಮ್ಯಾಲಂಗಿ, ಸಂಪಿಗೆ ರಾಣಿ ಮುಂತಾದ ಜನಪ್ರಿಯ ನಾಟಕಗಳನ್ನು ರಚಿಸಿದ್ದಾರೆ. ಕಂಬಾರರೊಂದಿಗೆ ಪದ್ಮಶ್ರೀ ಪಡೆದಿರುವ ಮತ್ತೊಬ್ಬ ಹಿರಿಯರಾದ ದೇಜಗೌ ಮೈಸೂರು ವಿಶ್ವ ವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದವರು, ಸದ್ಯಕ್ಕೆ ವಿಶ್ರಾಂತರು.

ಪದ್ಮಶ್ರೀ ಪ್ರಶಸ್ತಿ ಪಡೆದ ಕನ್ನಡಿಗರು : ಚಂದ್ರಶೇಖರ ಕಂಬಾರ ಹಾಗೂ ದೇಜಗೌ(ಸಾಹಿತ್ಯ ಮತ್ತು ಶಿಕ್ಷಣ) ಮಹೇಶ್‌ ಭೂಪತಿ (ಟೆನ್ನಿಸ್‌), ಮಾಲತಿ ಕೃಷ್ಣಮೂರ್ತಿ ಹೊಳ್ಳ(ಅಥ್ಲೆಟಿಕ್ಸ್‌) ಮತ್ತು ಡಾ. ಸಿ.ಜಿ. ಕೃಷ್ಣದಾಸ ನಾಯರ್‌, ಪ್ರೊ. ಗೋವರ್ಧನ್‌ ಮೆಹ್ತಾ , ಡಾ. ಪಿ.ಎಸ್‌. ಗೋಯಲ್‌, ಪ್ರೊ. ರಾಮಕೃಷ್ಣನ್‌, ತಿರುಪತ್ತೂರ್‌ ವೆಂಕಟಾಚಲಮೂರ್ತಿ(ಎಲ್ಲರೂ ವಿಜ್ಞಾನ ಮತ್ತು ಇಂಜಿನಿಯರಿಂಗ್‌).

ಸಾಹಸ ಮೆರೆದ ರಾಜ್ಯದ 14 ಪೊಲೀಸರಿಗೆ ರಾಷ್ಟ್ರಪತಿ ಪದಕ

ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ ) ಎಂ.ಡಿ. ಸಿಂಗ್‌, ಬೆಂಗಳೂರಿನ ಫ್ರೇಜರ್‌ಟೌನ್‌ ಉಪವಿಭಾಗದ ಸಹಾಯಕ ಆಯುಕ್ತ ಎಂ.ಕೆ. ಗಣಪತಿ ಹಾಗೂ ವೀರಪ್ಪನ್‌ ಶಿಕಾರಿಯಲ್ಲಿ ರಾಜ್ಯ ಎಸ್‌ಟಿಎಫ್‌ನ ಮುಖ್ಯಸ್ಥರಾಗಿರುವ ಹರ್ಷವರ್ಧನರಾಜು ಸೇರಿದಂತೆ 15 ಪೊಲೀಸ್‌ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ಪುರಸ್ಕಾರ ಘೋಷಿಸಲಾಗಿದೆ.

ಪ್ರಶಸ್ತಿ ಪಡೆದವರು : ಹರ್ಷವರ್ಧನ ರಾಜು, ಮೈಸೂರು ನಗರ ಪೊಲೀಸ್‌ ಆಯುಕ್ತ ಸಿ. ಚಂದ್ರಶೇಖರ್‌, ಕೆಪಿಟಿಸಿ ಡಿವೈಎಸ್ಪಿ ಎಲ್‌.ಟಿ. ಪೂರ್ಣಚಂದ್ರ, ಚಿಕ್ಕಬಳ್ಳಾಪುರ ಡಿವೈಎಸ್ಪಿ ಎಸ್‌.ಕೆ. ಹೆಗಡೆ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿವೈಎಸ್ಪಿ ಎಸ್‌.ಬಿ. ನಾಯ್ಡು , ಬೆಂಗಳೂರಿನ ಇನ್ಸ್‌ಪೆಕ್ಟರ್‌ ಯು.ಪಿ. ಶಿವರಾಮರೆಡ್ಡಿ , ಹೈಕೋರ್ಟ್‌ ವಿಜಿಲೆನ್ಸ್‌ನ ಇನ್ಸ್‌ಪೆಕ್ಟರ್‌ ಬಿ.ಕೆ. ಶಿವರಾಮ್‌, ಸಿಓಡಿ ಇನ್ಸ್‌ಪೆಕ್ಟರ್‌ ಆರ್‌.ಎನ್‌. ನಟರಾಜು, ಬೆಂಗಳೂರಿನ ಭಾರತೀನಗರ ಇನ್ಸ್‌ಪೆಕ್ಟರ್‌ ಇ.ಎಂ. ಇಸ್ಮಾಯಿಲ್‌, ಮಂಗಳೂರಿನ ಇನ್ಸ್‌ಪೆಕ್ಟರ್‌ ಪಿ.ವಿ. ಕುನ್ಹಿರಾಮನ್‌ ಮತ್ತು ಉಪ್ಪಾರಪೇಟೆ ಪೊಲೀಸ್‌ಠಾಣೆಯ ಮುಖ್ಯಪೇದೆ ಲಕ್ಕಣ್ಣ .

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X