• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಡಿಗರ ಕವನಗಳು ನವ್ಯವೋ? ನವೋದಯವೋ?

By Staff
|

ಬೆಂಗಳೂರು : ಡಾ. ಎಂ. ಗೋಪಾಲಕೃಷ್ಣ ಅಡಿಗರ ಕವನಗಳು ಶ್ರೇಷ್ಠ. ಅತಿ ಶ್ರೇಷ್ಠ ಎಂದು ಎಲ್ಲರೂ ಒಪ್ಪಿಕೊಂಡಿರುವಾಗ, ಅವರ ಕಾವ್ಯಗಳು ನವ್ಯವೋ? ನವೋದಯವೋ? ಎಂಬ ಮೂಲಭೂತ ಪ್ರಶ್ನೆ ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಳಗಿತು.

ಖ್ಯಾತ ವಿಮರ್ಶಕ ಡಾ. ಜಿ.ಎಸ್‌. ಆಮೂರರ ಪ್ರಕಾರ ಅಡಿಗರ ಕವನಗಳು ನವ್ಯವೂ ಅಲ್ಲ, ನವೋದಯವೂ ಅಲ್ಲ. ಹಾಗಾದರೆ, ಅಡಿಗರ ಕವನಗಳು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತವೆ? ಆಮೂರರೇ ಇದಕ್ಕೂ ಉತ್ತರ ನೀಡಿದರು. ಈ ಎರಡೂ ಪಂಥಗಳ ಎಲ್ಲೆಗಳನ್ನು ಮೀರಿಬೆಳೆದ ಮಹಾನ್‌ ಕಾವ್ಯಗಳು ಅವು.

ಭಾನುವಾರ ಬೆಂಗಳೂರಿನಲ್ಲಿ ಏರ್ಪಡಿಸಿಲಾಗಿದ್ದ ‘ಅಡಿಗ : ಪರಂಪರೆ - ಪ್ರಭಾವ’ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಆಮೂರರು, ಮಹಾನ್‌ ಸಾಹಿತಿಯಾಬ್ಬರ ಕುರಿತು ಅರ್ಥೈಸುವಾಗ ಅವರ ಸಮಗ್ರ ಕೃತಿಗಳನ್ನು ಇಡಿಯಾಗಿ ನೋಡಬೇಕೇ ವಿನಾ ಬಿಡಿ ಬಿಡಿಯಾಗಿ ಅಲ್ಲ. ಇಡಿಯಾಗಿ ನೋಡಿದಾಗ ಮಾತ್ರ ಆ ಕಾವ್ಯಗಳಲ್ಲಿರುವ ಪರಿಪಕ್ವತೆಯನ್ನು ಮನಗಾಣಲು ಸಾಧ್ಯ ಎಂದರು.

ಅಡಿಗರು ಮತ್ತು ಶಿವರಾಮ ಕಾರಂತರು ವ್ಯಕ್ತಿತ್ವವಾದವನ್ನು ಪ್ರತಿಪಾದಿಸಿದವರು. ಈ ಕಾರಣಕ್ಕಾಗಿಯೇ ಆ ಇಬ್ಬರು ಶ್ರೇಷ್ಠರಾಗಿ ಹಾಗೂ ಅವರ ಕಾವ್ಯಗಳು ಶ್ರೇಷ್ಠಾತಿಶ್ರೇಷ್ಠವಾಗಿ ಬೆಳದವು ಎಂದು ಖ್ಯಾತ ಲೇಖಕ ಸಿ.ಎನ್‌. ರಾಮಚಂದ್ರನ್‌ ಅಭಿಪ್ರಾಯಪಟ್ಟರು. ಇದನ್ನು ಹನುಮದ್ವಿಕಾಸ ಎಂದು ಬಣ್ಣಿಸಿದ ಅವರು, ಈ ಹಂತದಲ್ಲಿ ಅದು ಸಾಮುದಾಯಿಕ ಹಿತವನ್ನು ಅಲ್ಪಮಟ್ಟಿಗೆ ಕಡೆಗಣಿಸಿತು ಎಂದೂ ಹೇಳಿದರು.

ನವ್ಯ ಕಾವ್ಯದ ಮೇಲೆ ಪಾಶ್ಚಾತ್ಯ ಸಾಹಿತ್ಯದ ಪ್ರಭಾವ ಹಾಗೂ ಸಂಸ್ಕೃತ ಕಾವ್ಯಗಳ ಪ್ರೇರಣೆಯೂ ವಿಚಾರ ಸಂಕಿರಣದಲ್ಲಿ ಆರೋಗ್ಯಕರ ಚರ್ಚೆಗೆ ಗ್ರಾಸವಾಯಿತು. ಪರಂಪರೆಯ ಬಗ್ಗೆ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವ್ಯಾಖ್ಯಾನ ನೀಡಿದ ರಾಮಚಂದ್ರನ್‌ ಭಾರತದ ಸಾವಿರಾರು ವರ್ಷಗಳ ಪರಂಪರೆಯನ್ನು ಒಂದೇ ಪರಂಪರೆ ಎಂದು ಗುರುತಿಸುವುದು ಸಲ್ಲ. ಯಾವುದೇ ಒಂದು ಪರಂಪರೆ ಘನರೂಪಿ ಮಾದರಿಯಲ್ಲ. ಅದು ಸಾಪೇಕ್ಷ ರಚನೆ. ಓದುಗ ಹಾಗೂ ವಿಮರ್ಶಕನ ಗ್ರಹಿಕೆಗನುಗುಣವಾಗಿ ಅದು ನಿರಂತರವಾಗಿ ಬದಲಾಗುತ್ತಿರುತ್ತದೆ ಎಂದರು.

ಅಡಿಗರು ಹಾಗೂ ನವೋದಯ ಕಾರ್ಯ ಪರಂಪರೆ ವಿಷಯದ ಬಗ್ಗೆ ಮಾತನಾಡಿದ ಸುಮತೀಂದ್ರ ನಾಡಿಗರು ನವೋದಯ ಕಾವ್ಯ ಭಾವಪೂರ್ಣ ಭಾವಗೀತಾತ್ಮಕ ಮಾರ್ಗದಲ್ಲಿದ್ದರೆ, ನವ್ಯ ನಾಟಕೀಯ ಮಾರ್ಗ ಅನುಸರಿಸಿದೆ ಎಂದರು. ಭಾಷೆ ಹಾಗೂ ಭಂಗಿಯನ್ನು ಕಾವ್ಯದಿ ಹೊರಹೊಮ್ಮಿಸಿದ್ದು ಅಡಿಗರ ಸಾಧನೆ ಎಂದರು.

ನವ್ಯ ಕಾವ್ಯ ಆರಂಭದ ದಿನಗಳಲ್ಲಿ ಅಡಿಗರ ಸುತ್ತಲೇ ಕೇಂದ್ರೀಕೃತವಾಗಿದ್ದ ಕಾರಣ ವಿಮರ್ಶೆಯೂ ಅಡಿಗರನ್ನೇ ಸುತ್ತಿಕೊಂಡಿತ್ತು. ಆ ಕಾರಣಕ್ಕಾಗಿಯೇ ಆಗ ಇತರ ಕವಿಗಳ ಬಗ್ಗೆ ಚರ್ಚೆ ನಡೆಯಲಿಲ್ಲ ಎಂದವರು ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ. ಜಾನಪದ ಪ್ರತಿಮೆಗಳನ್ನು ಚಂದ್ರಶೇಖರ ಕಂಬಾರರು ದುಡಿಸಿಕೊಂಡ ವಿಷಯವೂ ಈ ಪರಂಪರೆಯ ಚರ್ಚೆಯಲ್ಲಿ ಚರ್ಚೆಯ ವಸ್ತುವಾಯಿತು.

ಎಂ. ಗೋಪಾಲಕೃಷ್ಣ ಅಡಿಗ ಟ್ರಸ್ಟ್‌ ಕುಮಾರ ಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ ಬೆಳಗ್ಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಜಿ.ಎಸ್‌. ಶಿವರುದ್ರಪ್ಪ ಅವರು, ತಮ್ಮ ಸಾಹಿತ್ಯ ಹಾಗೂ ಚಿಂತನೆಗಳಿಂದ ಕನ್ನಡ ಸಾಹಿತ್ಯ ಪರಂಪರೆಗೆ ಹೊಸ ಆಯಾಮ ನೀಡಿದ ಅಡಿಗರು ಭಾರತೀಯ ಪರಂಪರೆಯಲ್ಲಿನ ಅವೈಚಾರಿಕ ವಿಷಯಗಳನ್ನು ಟೀಕಿಸುವ ಪ್ರಯತ್ನ ಮಾಡಲಿಲ್ಲ ಎಂದರು.

ಪ್ರೊ. ಕೆ. ಇ. ರಾಧಾಕೃಷ್ಣ, ಲಲಿತಾ ಅಡಿಗ, ಟಿ.ವಿ. ಮಾರುತಿ ಅವರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಅಡಿಗರ ಕವನಗಳನ್ನು ಹಾಡಿದರು.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more