ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಬೆಂಗಳೂರಿಗರ ಮೇಲುಗೈ

By Staff
|
Google Oneindia Kannada News

ಬೆಂಗಳೂರು: ಹೊರನಾಡ ಕನ್ನಡಿಗ ಲತೀಫ್‌ ದುಬೈ ಹಾಗೂ ಬಹರೈನ್‌ ಕನ್ನಡ ಸಂಘಟನೆ ಸೇರಿದಂತೆ ಒಟ್ಟು 56 ಮಂದಿ ಗಣ್ಯರಿಗೆ ಹಾಗೂ ಮೂರು ಸಂಸ್ಥೆ ಗಳಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ಖ್ಯಾತ ಶಿಕ್ಷಣ ತಜ್ಞ ಡಾ. ಡಿ.ಎಂ. ನಂಜುಂಡಪ್ಪ, ಉದ್ಯಮಿ ನಂದನ್‌ ನಿಲೇಕಣಿ, ನಟ- ನಿರ್ಮಾಪಕ ಎಂ.ಪಿ.ಶಂಕರ್‌, ನಿರ್ದೇ ಶಕ ಗಿರೀಶ್‌ ಕಾಸರವಳ್ಳಿ ಮತ್ತು ಅಂತಾರಾಷ್ಟ್ರೀಯ ಈಜುಗಾರ್ತಿ ನಿಶಾ ಮಿಲ್ಲೆಟ್‌, ಸಾಹಿತಿ ಗಿರಡ್ಡಿ ಗೋವಿಂದ ರಾಜ, ನಿವೃತ್ತ ನ್ಯಾಯ ಮೂರ್ತಿ ಎಚ್‌.ಜೆ. ಬಾಲ ಕೃಷ್ಣ ಮತ್ತಿತರ ಪ್ರಶಸ್ತಿ ವಿಜೇತರಿಗೆ ನವೆಂಬರ್‌ 1ರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಯು 20 ಗ್ರಾಂ ಚಿನ್ನದ ಪದಕ, ಶಾಲು, ಗಂಧದ ಹಾರ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಬೆಂಗಳೂರು ಜಿಲ್ಲೆಗೆ ಅತಿ ಹೆಚ್ಚು ಅಂದರೆ 13 ಪ್ರಶಸ್ತಿಗಳನ್ನು ನೀಡಲಾಗಿದೆ. ಧಾರವಾಡ ಜಿಲ್ಲೆಗೆ ಐದು ಪ್ರಶಸ್ತಿಗಳು ಸಂದಿವೆ. ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಪ್ರಶಸ್ತಿ ನೀಡಲಾಗಿಲ್ಲ.

ಪ್ರಶಸ್ತಿ ವಿಜೇತರು :
M. P. Shankar, Girish Kasaravalli, Shridhar ಚಲನಚಿತ್ರ:
ಕೆ.ಸಿ.ಎನ್‌.ಗೌಡ- ಬೆಂಗಳೂರು, ಗಿರೀಶ್‌ ಕಾಸರವಳ್ಳಿ- ಶಿವಮೊಗ್ಗ, ಎಂ.ಪಿ.ಶಂಕರ್‌- ಮೈಸೂರು.

ಜಾನಪದ-ಯಕ್ಷಗಾನ:
ಕೋಳ್ಯೂರು ರಾಮಚಂದ್ರರಾವ್‌-ದಕ್ಷಿಣ ಕನ್ನಡ ಜಿಲ್ಲೆ, ಪ್ರೊ। ಜ್ಯೋತಿ ಹೊಸೂರು- ಬೆಳಗಾವಿ, ದರೋಜಿ ಈರಮ್ಮ-ಬಳ್ಳಾರಿ, ಪ್ರಭಾಕರ ಭಂಡಾರಿ- ಉತ್ತರ ಕನ್ನಡ ಜಿಲ್ಲೆ, ಬಾಬು ನಲ್ಕೆ- ಉಡುಪಿ, ಮತಿಘಟ್ಟ ಕೃಷ್ಣಮೂರ್ತಿ- ಹಾಸನ, ಸೋಬಾನೆ ಕೃಷ್ಣೇಗೌಡ- ಮಂಡ್ಯ.

ಸಮಾಜಸೇವೆ:
ನಂದನ ನಿಲೇಕಣಿ- ಉತ್ತರ ಕನ್ನಡ ಜಿಲ್ಲೆ, ಶ್ರೀನಿವಾಸ ಶ್ರೇಷ್ಠಿ- ಚಿಕ್ಕಮಗಳೂರು.

ಕನ್ನಡ ಸೇವೆ:
ಅನಿಲ್‌ ಕಮ್ಮತಿ- ಬೆಳಗಾವಿ, ಜೆ.ಆರ್‌.ಫೆರೇರಾ- ಬೆಂಗಳೂರು, ಮಹಮದ್‌ ಜಲಾಲುದ್ದೀನ್‌- ಗುಲ್ಬರ್ಗ.

ಕ್ರೀಡೆ:
ಚೆರ್ರಿ ಸುರೇಂದ್ರ-ಕೊಡಗು, ನಿಶಾ ಮಿಲ್ಲೆಟ್‌- ಬೆಂಗಳೂರು.

ನೃತ್ಯ:
ಚಿತ್ರ ನಟ ಶ್ರೀಧರ- ಬೆಂಗಳೂರು.

ರಂಗಭೂಮಿ:
ಬಿ.ಜಯಶ್ರೀ- ಬೆಂಗಳೂರು, ಮುನಿರೆಡ್ಡಿ-ಕೋಲಾರ, ವಜ್ರಪ್ಪ- ಬೆಂಗಳೂರು ಗ್ರಾಮಾಂತರ ಜಿಲ್ಲೆ, ಶಾಂತಾಬಾಯಿ ಪತ್ತಾರ-ಬಾಗಲಕೋಟೆ.

ಪತ್ರಿಕೋದ್ಯಮ:
ಎನ್‌.ಕೆ. ಕುಲಕರ್ಣಿ- ರಾಯಚೂರು, ಕಮಲಾಕರ್‌ ಜೋಶಿ- ಬೀದರ್‌, ರಾಜಾ ಶೈಲೇಶ್‌ಚಂದ್ರ ಗುಪ್ತ- ಬೆಂಗಳೂರು, ರಾಜ್‌ ಚೆಂಗಪ್ಪ- ಕೊಡಗು.

A. J. Balakrishna,Nandan nilekani and Nisha Milletವೈದ್ಯಕೀಯ ಸೇವೆ:
ಡಾ.ದೇವಿ ಪ್ರಸಾದ್‌ ಶೆಟ್ಟಿ- ದಕ್ಷಿಣ ಕನ್ನಡ ಜಿಲ್ಲೆ, ಡಾ। ಕೆ.ಟಿ.ರಾಜಮ್ಮ- ಕೋಲಾರ.

ಶಿಕ್ಷಣ:
ಡಾ. ಡಿ.ಎಂ.ನಂಜುಂಡಪ್ಪ- ದಾವಣಗೆರೆ, ಪ್ರೊ. ಬಿ. ಯಲ್ಲಪ್ಪ ಭೂತಯ್ಯ- ಮೈಸೂರು, ಡಾ। ಜಿ.ರಾಮಕೃಷ್ಣ- ಬೆಂಗಳೂರು.

ಸಂಕೀರ್ಣ:
ಎಚ್‌.ಎಸ್‌. ಅರುಣ- ಬೆಂಗಳೂರು, ಓಂಕಾರ್‌- ಬೆಂಗಳೂರು, ಕಿರಣ್‌ ಮಜುಂದಾರ್‌- ಬೆಂಗಳೂರು,

ಸಾಹಿತ್ಯ:
ಗವಿಸಿದ್ದಪ್ಪ ಬಳ್ಳಾರಿ- ಕೊಪ್ಪಳ, ಗಿರಡ್ಡಿ ಗೋವಿಂದರಾಜ- ಧಾರವಾಡ, ಜಂಬಣ್ಣ ಅಮರಚಿಂತ- ರಾಯಚೂರು, ಬಾನು ಮುಷ್ತಾಕ್‌- ಹಾಸನ. ಡಾ.ವಿ.ಆರ್‌.ಪಂಚಮುಖಿ- ಧಾರವಾಡ, ಪ್ರೊ।ಪ್ರಭಂಜನಾಚಾರ್ಯ- ಬೆಂಗಳೂರು, ನಿವೃತ್ತ ನ್ಯಾಯಮೂರ್ತಿ ಎಚ್‌.ಜೆ. ಬಾಲಕೃಷ್ಣ- ಬೆಂಗಳೂರು, ಕರ್ನಲ್‌ ವೇಕ್‌ಫೀಲ್ಡ್‌- ಮೈಸೂರು, ಶಶಿ ಸಾಲಿ- ದಾವಣಗೆರೆ, ಶಿವನೇಗೌಡ- ಚಾಮರಾಜ ನಗರ, ಡಾ। ಸರೋಜಿನಿ ಶಿಂತ್ರಿ- ಧಾರವಾಡ.

ಸಂಗೀತ:
ಎಚ್‌.ಆರ್‌. ಕೇಶವಮೂರ್ತಿ- ಶಿವಮೊಗ್ಗ, ರವೀಂದ್ರ ಹಂದಿಗನೂರು- ಗದಗ, ರೇವಣಪ್ಪ ಕುಂಕುಮಗಾರ್‌- ಗುಲ್ಬರ್ಗಾ, ಡಿ. ಶಶಿಕಲಾ- ಬೆಂಗಳೂರು.

ಸ್ವಾತಂತ್ರ ಹೋರಾಟಗಾರರು:
ಬಸವಣ್ಣ ಶಿರೂರ್‌- ವಿಜಾಪುರ ಮತ್ತು ರೇವಣ್ಣ-ತುಮಕೂರು.

ಹೊರನಾಡ ಕನ್ನಡಿಗರು:
ಲತೀಫ್‌- ದುಬೈ.

ಸಂಸ್ಥೆಗಳು:
ಬಹರೈನ್‌ ಕನ್ನಡ ಸಂಘ- ಬಹರೈನ್‌, ಕರ್ನಾಟಕ ವಿದ್ಯಾವರ್ಧಕ ಸಂಘ- ಧಾರವಾಡ, ಮತ್ತು ಸೋಫಿಯಾ ಬುದ್ಧಿಮಾಂದ್ಯರ ಶಾಲೆ-ಬೆಂಗಳೂರು.ಪ್ರಶಸ್ತಿಗಾಗಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅರ್ಜಿಗಳನ್ನಷ್ಟೇ ಅಲ್ಲದೆ ವಿವಿಧ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರನ್ನು ಪರಿಗಣಿಸಿ ಈ ಪ್ರಶಸ್ತಿ ಪಟ್ಟಿ ಅಂತಿಮ ಗೊಳಿಸಲಾಯಿತು ಎಂದು ರಾಣಿ ಸತೀಶ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X