• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ.1: ಕಾಸರಗೋಡು ಕನ್ನಡಿಗರಿಂದ ತಲಪಾಡಿಯಲ್ಲಿ ಕನ್ನಡ ಮೇಳ

By Staff
|

ಕಾಸರಗೋಡು : ಕೇರಳ ಮತ್ತು ಕರ್ನಾಟಕದ ಅಫೀಶಿಯಲ್‌ ಗಡಿಯಾಗಿರುವ ತಲಪಾಡಿಯಲ್ಲಿ ನವೆಂಬರ್‌ 1ರ ಕನ್ನಡ ರಾಜ್ಯೋತ್ಸವ ದಿನದಂದು ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಸಮ್ಮೇಳನದ ಮುಖ್ಯ ಉದ್ದೇಶ :

  • ಮಹಾಜನ ಆಯೋಗದ ವರದಿ ಜಾರಿಯ ಬಗ್ಗೆ ಕೇರಳ, ಕರ್ನಾಟಕ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯುವುದು.
  • ಕಾಸರಗೋಡು ಪ್ರದೇಶದ ಕನ್ನಡಿಗರ ಅಭಿವೃದ್ಧಿಗೆ ಸಂವಿಧಾನಾತ್ಮಕವಾದ ಸವಲತ್ತುಗಳನ್ನು ಒದಗಿಸುವಂತೆ ಆಗ್ರಹ.
  • ಜಿಲ್ಲೆಯ ಕನ್ನಡಿಗರ ಅಸ್ತಿತ್ವವನ್ನೇ ಹಂತಹಂತವಾಗಿ ಹತ್ತಿಕ್ಕುತ್ತಿರುವ ಕೇರಳ ಸರಕಾರಕ್ಕೆ ಕನ್ನಡ ಭಾಷೆ, ಇತಿಹಾಸ ಮತ್ತು ಪರಂಪರೆಯ ಮನವರಿಕೆ ಮಾಡಿಕೊಡುವುದು ಹಾಗೂ ರಾಜ್ಯಾದ್ಯಂತ ಈ ಕುರಿತು ಜಾಗೃತಿ ಮೂಡಿಸುವುದು.
  • ಕಾಸರಗೋಡು ಜಿಲ್ಲೆಯ ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಸರಗೋಡು ಜಿಲ್ಲೆಯ ಶಾಲೆ, ಕಾಲೇಜು, ಕನ್ನಡ ಸಂಘಗಳಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ದಿನಾಚರಣೆ ಆಚರಿಸಿ, ಮೆರವಣಿಗೆ ನಡೆಸುವುದರೊಂದಿಗೆ ಕನ್ನಡ ಸಮ್ಮೇಳನದ ಮೂಲಕ ಜಾಗೃತಿ ಮೂಡಿಸುವುದು.

ಈ ಸಮ್ಮೇಳನಕ್ಕೆ ಪೂರ್ವಬಾವಿಯಾಗಿ ಆಯೋಜಕರ ಸಭೆ ನಡೆಯಿತು. ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಕಾಸರಗೋಡು ಕರ್ನಾಟಕ ಪಬ್ಲಿಕೇಷನ್ಸ್‌ ಹಾಗೂ ಕಾಸರಗೋಡು ಜಿಲ್ಲೆ ಕನ್ನಡ ಸಂಘಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಕಾಸರಗೋಡಿನ ಕನ್ನಡ ಹೋರಾಟಗಾರ ಲಲಿತಕಲಾ ಸದನದ ಕಾರ್ಯದರ್ಶಿ ಕೆ. ಶಿವರಾಮ ಶೆಟ್ಟಿ ವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more