ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಮೆಲ್‌ನ ಅಪ್ರಮೇಯರಿಗೆ ರಾಜ್ಯೋತ್ಸವದ ಬೀಳ್ಕೊಡುಗೆ

By Staff
|
Google Oneindia Kannada News

ಬೆಂಗಳೂರು : ಆರ್ಥಿಕ ದಿಗ್ಬಂಧನ, ಜಾಗತೀಕರಣ, ಖಾಸಗೀಕರಣ- ತ್ರಿಕರಣಗಳ ದಾಳಿಯಿಂದ ಭಾರತೀಯ ಸಾರ್ವಜನಿಕ ವಲಯದ ಉದ್ದಿಮೆಗಳ ಜಂಘಾಬಲವೇ ಉಡುಗಿಹೋಯಿತು. ಸಾರ್ವಜನಿಕ ವಲಯದ ಉದ್ದಿಮೆ ಎಂದೊಡನೆ, ವ್ಯಾಪಾರಿ ಕುಬೇರರು ಹೇವರಿಸುವಂಥಾ ಪರಿಸ್ಥಿತಿಯೂ ನಿರ್ಮಾಣವಾಯಿತು. ಆಗ ಪರಿಸ್ಥಿತಿಗೆ ಎದೆಗೊಟ್ಟು ಸೆಟೆದು ನಿಂತ ಕಂಪನಿಗಳಲ್ಲೊಂದು ಬೆಮೆಲ್‌.

ಕರ್ನಾಟಕದಲ್ಲಿ ಈ ಕಂಪನಿಗೆ ಮೂರು ನೆಲೆಗಳು- ಕೆ.ಜಿ.ಎಫ್‌, ಮೈಸೂರು ಮತ್ತು ಬೆಂಗಳೂರಿನ ಬಳಿಯ ತಿಪ್ಪಸಂದ್ರದಲ್ಲಿರುವ ರೈಲ್ವೆ ಕೋಚ್‌ ಮತ್ತು ರಕ್ಷಣಾ ಉಪಕರಣಗಳ ತಯಾರಿಕಾ ಕಾರ್ಖಾನೆ. ಇನ್ಫೋಸಿಸ್‌ ನಾರಾಯಣ ಮೂರ್ತಿ ಅಂಥವರೇ ಸಾರ್ವಜನಿಕ ವಲಯದ ಉದ್ದಿಮೆಗಳ ಟಾಪ್‌ ಮೇನೇಜ್‌ಮೆಂಟಿನ ಕಾರ್ಯವೈಖರಿಯನ್ನು ಅಲ್ಲಗಳೆದಿರುವ ಹೊತ್ತಲ್ಲೂ ಅಪ್ರತಿಮರೆಂದು ಗುರ್ತಿಸಿಕೊಂಡಿರುವವರು ಬೆಮೆಲ್‌ನ ಚೇರ್‌ಮನ್‌ ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್‌ ಡಾ. ಕೆ. ಅಪ್ರಮೇಯನ್‌. ಸಾರ್ವಜನಿಕ ಉದ್ದಿಮೆಗಳ ದೊಡ್ಡ ಹುದ್ದರಿ ಕನ್ನಡಿಗರಿಗೆ ಗಿಟ್ಟುವುದೇ ಇಲ್ಲ ಅನ್ನುವ ಮಾತಿಗೆ ಇವರು ಆಪಾದನೆ.

ಅಪ್ರಮೇಯನ್‌ ಹೆಸರೆತ್ತಿದರೆ ಸಾಕು, ಕಾರ್ಖಾನೆಯ ದುಡಿಯುವ ಜೀವಗಳ ಕಣ್ಣರಳುತ್ತದೆ. ಜಾಗತಿಕ ಪೋಟಿಯಲ್ಲೂ ಸೆಣೆಸಿ ಕಂಪನಿಯು ಲಾಭ ಮಾಡಲು ಕಾರಣರಾದವರ ಪೈಕಿ ಅಪ್ರಮೇಯನ್‌ ಪ್ರಮುಖರು.

ಇಷ್ಟೆಲ್ಲ ಹೇಳಲು ಕಾರಣ- ನವೆಂಬರ್‌ 30ನೇ ತಾರೀಕಿಗೆ ಸರಿಯಾಗಿ ಅಪ್ರಮೇಯನ್‌ ನಿವೃತ್ತರಾಗುತ್ತಿದ್ದಾರೆ. ಅವರಿಗೆ ಮರೆಯಬಾರದಂಥ ಬೀಳ್ಕೊಡುಗೆ ಕೊಡಲು ಬೆಮೆಲ್‌ ಕನ್ನಡ ಸಾಹಿತ್ಯ ಸಂಘ ಸಜ್ಜಾಗಿದೆ. ನವೆಂಬರ್‌ 29ನೇ ತಾರೀಕು ಸಂಜೆ ಬೆಂಗಳೂರಿನ ಬೆಮೆಲ್‌ ಕಾರ್ಪೊರೇಟ್‌ ಕಚೇರಿಯಲ್ಲಿ ನಡೆಯಲಿರುವ ರಾಜ್ಯೋತ್ಸವ ಸಮಾರಂಭ ಅಪ್ರಮೇಯನ್‌ ಅವರನ್ನು ಬೀಳ್ಕೊಡುವ ಸಮಾರಂಭವೂ ಹೌದು. ಸಮಾರಂಭದ ಅಧ್ಯಕ್ಷ ಗಾದಿಗೆ ಅಪ್ರಮೇಯನ್‌ ಅವರನ್ನೇ ಕೂರಿಸುತ್ತಿರುವುದು ಔಚಿತ್ಯಪೂರ್ಣ. ಕಾರ್ಖಾನೆಯ ಸಕಲ ಸಂಘಟನೆಗಳೂ ಸಮಾರಂಭದಲ್ಲಿ ಸೇರಿ, ಅಪ್ರಮೇಯನ್‌ ಅವರಿಗೆ ಸುಂದರ ವಿಶ್ರಾಂತ ಜೀವನವನ್ನು ಹಾರೈಸಲಿದ್ದಾರೆ.

ಅಂದಹಾಗೆ, ಈ ಸಮಾರಂಭದಲ್ಲಿ ದಟ್ಸ್‌ಕನ್ನಡ ಡಾಟ್‌ಕಾಂ ಸಂಪಾದಕ ಎಸ್‌.ಕೆ.ಶಾಮಸುಂದರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾಜು ಅನಂತಸ್ವಾಮಿ ಅವರಿಂದ ಸುಗಮ ಸಂಗೀತ ಸಮಾರಂಭದ ಬೋನಸ್ಸು.

ಇನ್ನೊಂದು ಮಾತು : ಬೆಮೆಲ್‌ ಕನ್ನಡ ಸಾಹಿತ್ಯ ಸಂಘಕ್ಕೆ 25 ವರ್ಷ ತುಂಬಿದೆ. ಡಿಸೆಂಬರ್‌ 2002 ಅಥವಾ ಜನವರಿ 2003ರಲ್ಲಿ ಸಂಘ ಅದ್ಧೂರಿಯ ಬೆಳ್ಳಿ ಹಬ್ಬ ಮಾಡಲು ಅಣಿಯಾಗುತ್ತಿದೆ. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ತರುವ ಕೆಲಸ ಈಗಾಗಲೇ ಚುರುಕಾಗಿ ಸಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X