ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ಮ್ಯಾಕ್ಬೆತ್‌ : ಪ್ರತಿಕ್ರಿಯೆ

By Staff
|
Google Oneindia Kannada News

*ನಾಡಿಗೇರ್‌ ಚೇತನ್‌

ವೇದಿಕೆ ಫೌಂಡೇಷನ್‌ ತನ್ನ ವೇದಿಕೆ ರಂಗಮಾಲಿಕೆ ವಾರಂತ್ಯ ರಂಗಮಂದಿರದಡಿ ಜಗತ್ತಿನ ಸುಪ್ರಸಿದ್ಧ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್‌ನ ನಾಟಕ ‘ಮ್ಯಾಕ್ಬೆತ್‌’ನ್ನು ಹೊಸದಾಗಿ ಆಯ್ದುಕೊಂಡಿದೆ.

‘ಮ್ಯಾಕ್ಬೆತ್‌’ ಒಬ್ಬ ಕ್ರೂರ ಸರ್ವಾಧಿಕಾರಿ. ಆತನ ದಬ್ಬಾಳಿಕೆಯಲ್ಲಿ ತೊಳಲಾಡುವ ಒಂದು ದೇಶದ ಕಥೆಯನ್ನು ನಾಟಕ ಹೇಳುತ್ತದೆ. ವಿಲಿಯಂ ಶೇಕ್ಸ್‌ಪಿಯರ್‌ನ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿರುವವರು ರಾಮಚಂದ್ರ ದೇವ.

ಜಸ್ಲೀನ್‌ ಋತ್ವಿಕ್‌ ಸಿಂಹರವರ ಉಡುಪು ವಿನ್ಯಾಸ, ಮಾಲತೇಶ ಬಡಿಗೇರರ ರಂಗವಿನ್ಯಾಸ, ಪುಟ್ಟಯ್ಯನವರ ಬೆಳಕು ನಿರ್ವಹಣೆ, ಶಾರದ ಸಿಂಹರ ಧ್ವನಿ ನಾಟಕಕ್ಕೆ ಒಳ್ಳೆ ಮೆರುಗು ನೀಡಿದೆ. ನಾಟಕ ಅಲ್ಲಲ್ಲಿ ಸ್ವಲ್ಪ ಹೆಚ್ಚು ನಾಟಕೀಯ ಅನಿಸಿದರೂ, ಅಂತಿಮವಾಗಿ ತನ್ನದೇ ಆದ ಛಾಪು ಒತ್ತುವಲ್ಲಿ ಯಶಸ್ವಿಯಾಗುತ್ತದೆ. ದೆವ್ವಗಳ ಚೀರಾಟ ಸ್ವಲ್ಪ ಅತಿಯಾಯಿತೇನೋ?

ಮ್ಯಾಕ್ಬೆತ್‌ ಪಾತ್ರದಲ್ಲಿ ಸಿ. ಆರ್‌. ಸಿಂಹ, ಮ್ಯಾಕ್ಡಫ್‌ ಪಾತ್ರದಲ್ಲಿ ಡಾ. ಬಿ. ವಿ. ರಾಜಾರಾಂ ರವರ ಅಭಿನಯ ಸೊಗಸಾಗಿದೆ. ವೇದಿಕೆ ತಂಡ ಈ ನಾಟಕವನ್ನು ಬೆಂಗಳೂರಿನ ಎಚ್‌. ಎನ್‌. ಕಲಾಕ್ಷೇತ್ರದಲ್ಲಿ ನವಂಬರ್‌ 23ರಿಂದ 26ನೇ ತಾರೀಕಿನವರೆಗೆ ಸಂಜೆ 7.00 ಗಂಟೆಗೆ ಪ್ರದರ್ಶಿಸಿತು.

ಇದುವರೆಗೂ 3 ನಾಟಕಗಳನ್ನು ನಿರ್ದೇಶಿಸಿರುವ ಋತ್ವಿಕ್‌ ಸಿಂಹ ಈ ನಾಟಕದ ದಿಗ್ದರ್ಶನದ ಹೊಣೆ ಹೊರುವ ಮೂಲಕ ಒಂದು ಭಾರೀ ಸವಾಲನ್ನೇ ಎದುರಿಸಿದ್ದಾರೆ. ಈ ಸವಾಲಿನಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಸಿ. ಆರ್‌. ಸಿಂಹ, ಡಾ. ಬಿ. ವಿ. ರಾಜಾರಾಂ, ಪದ್ಮಜಾ ಶ್ರೀನಿವಾಸ್‌ ಮುಂತಾದ ಘಟಾನುಘಟಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ರಂಗ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X