• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಬೆಳಗಾವಿ ಸಮ್ಮೇಳನ : ಪುನರೂರು ಭ್ರಮ ನಿರಸನಗೊಳಿಸದಿರಲಿ’

By Staff
|

ಬೆಳಗಾವಿ : ಎಪ್ಪತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೆಳಗಾವಿಯಲ್ಲಿ ನಡೆಸಲು ಎಲ್ಲ ಸಿದ್ಧತೆಗಳು ನಡೆಯುತ್ತಿದ್ದು , ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸಮ್ಮೇಳನದ ಬಗ್ಗೆ ಆಸಕ್ತಿ ವಹಿಸಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಸ್‌.ಎಂ.ಹರದಗಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಸಮ್ಮೇಳನದ ಬಗ್ಗೆ ಸಿದ್ಧತೆಗಳು ತೃಪ್ತಿಕರವಾಗಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಉಡುಪಿಯಲ್ಲಿ ವ್ಯಕ್ತಪಡಿಸಿದ ಅಸಮಾಧಾನಕ್ಕೆ ಪ್ರತಿಕ್ರಿಯೆ ನೀಡಿದ ಹರದಗಟ್ಟಿ ಈ ಸ್ಪಷ್ಟನೆ ನೀಡಿದರು.

ರಾಜ್ಯದ ಗಡಿಭಾಗದಲ್ಲಿ ಕನ್ನಡ ಸಮ್ಮೇಳನವನ್ನು ನಡೆಸಲು ದೊರೆತ ಅವಕಾಶವನ್ನು ಬಳಸಿಕೊಳ್ಳಲು ಈ ಭಾಗದ ಜನತೆ ಕಾತರರಾಗಿದ್ದಾರೆ. ಸಚಿವರ ಬದಲಾವಣೆಯಿಂದ ಉಂಟಾದ ವಿಳಂಬವನ್ನು ನಿರಾಸಕ್ತಿ ಎಂದು ಪರಿಗಣಿಸಬಾರದು. ಈ ಮುನ್ನ ಸಚಿವ ಡಿ.ಬಿ. ಇನಾಂದಾರ್‌ ಅವರೊಂದಿಗೆ ಸಮ್ಮೇಳನದ ಬಗ್ಗೆ ಚರ್ಚಿಸಲಾಗಿತ್ತು . ಅವರು ಕೂಡ ಸಮ್ಮೇಳನದ ಬಗ್ಗೆ ಮುತುವರ್ಜಿ ವ್ಯಕ್ತಪಡಿಸಿದ್ದರು. ಆದರೆ ಉಸ್ತುವಾರಿ ಸಚಿವರ ಬದಲಾವಣೆ ಸ್ವಲ್ಪ ಗೊಂದಲ ತಂದಿದೆ. ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್‌.ಕೌಜಲಗಿ ಜುಲೈ 30 ರ ನಂತರ ಸ್ವಾಗತ ಸಮಿತಿ ರಚಿಸುವ ಸಂಬಂಧ ದಿನ ನಿಗದಿ ಪಡಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಹರದಗಟ್ಟಿ ಹೇಳಿದರು.

ಪುನರೂರು ಅವರ ಹೇಳಿಕೆಯಿಂದ ಈ ಭಾಗದ ಜನತೆಗೆ ತೀವ್ರ ನೋವಾಗಿದೆ. ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಜನತೆಗೆ ಭ್ರಮ ನಿರಸನ ಉಂಟು ಮಾಡಬಾರದು ಎಂದ ಹರದಗಟ್ಟಿ - ಜನ ಪ್ರತಿನಿಧಿಗಳನ್ನು ದೂರವಿಟ್ಟು ಸಮ್ಮೇಳನ ಸಮಿತಿಗಳನ್ನು ರಚಿಸುವುದು ಸರಿಯಲ್ಲ ಎಂದರು.

(ಇನ್ಫೋ ವಾರ್ತೆ)

ಸಮ್ಮೇಳನ ಸಂಚಯ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more