ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುದ್ಧ ಪೂರ್ಣಿಮೆಯಲ್ಲಿ ಕಾವ್ಯೋದಯ..ಆಹಾ ಕಾವ್ಯ ಬದುಕಿದೆ!

By Staff
|
Google Oneindia Kannada News

*ತೇಜಸ್ವಿ

H.S.Venkatesha murthy‘ಕಾವ್ಯ ಸಾಯುತ್ತಿದೆ ಎಂದು ಹೇಳುವವರು ಬುರುಡೆ ಬಿಡುತ್ತಿದ್ದಾರೆ.’

ಕನ್ನಡ ಕಾವ್ಯ ಸತ್ತಿಲ್ಲ . ಅದು ಇನ್ನಷ್ಟು ಜೀವಂತಿಕೆಯನ್ನು , ಕವಲುಗಳನ್ನು ಕೂಡಿಸಿಕೊಂಡು ನಳನಳಿಸುತ್ತಿದೆ. ಆದರೂ ಕಾವ್ಯ ಸತ್ತಿದೆ ಅಂತಾರೆ. ಕಾವ್ಯ ಸತ್ತಿರುವುದು ನಿಸ್ಸತ್ವ ಪ್ರಾಣಿಗಳಲ್ಲಿ .’

ಕಾವ್ಯದ ಜೀವಗರ್ಭದ ಬಗ್ಗೆ ಅಪಾರ ಭರವಸೆ ವ್ಯಕ್ತಪಡಿಸಿದ ಸಮಾಧಾನಿ ‘ಮೂವತ್ತು ಮಳೆಗಾಲ’ದ ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ. ತರಳಬಾಳು ಕೇಂದ್ರದ ಹೊರಗೆ ಆಕಾಶ ಹನಿಯುತ್ತಿತ್ತು . ಒಳಗೆ ಕಾವ್ಯ ಧಾರಾಕಾರ.

ಅದು ಹುಣ್ಣಿಮೆ ಕವಿಗೋಷ್ಠಿ ; ಕಾವ್ಯ ಪೂರ್ಣಿಮಾ! ಬೆಂಗಳೂರಿನ ರವೀಂದ್ರನಾಥ ಠಾಗೋರ್‌ ನಗರದ ತರಳಬಾಳು ಕೇಂದ್ರದಲ್ಲಿ ಶನಿವಾರ ರಾತ್ರಿ ಹೊಳೆಯಾದ ಕಾವ್ಯ ಸಂಭ್ರಮ. ಮಳೆ ಹನಿಯುತ್ತಿತ್ತು . ಆ ಕಾರಣದಿಂದಾಗಿ ಬಯಲಿನಲ್ಲಿ ನಡೆಯಬೇಕಿದ್ದ ಕವಿಗೋಷ್ಠಿ ಸಭಾಂಗಣಕ್ಕೆ ಷಿಫ್ಟಾಯಿತು. ಬದಲಾದದ್ದು ವೇದಿಕೆ ಮಾತ್ರ ; ಕವಿಗಳ ಉತ್ಸಾಹ ಹುಚ್ಚುಕೋಡಿಯಾಗಿತ್ತು . ಮಳೆಗೆ ಕಾವ್ಯಧಾರೆಯ ಸವಾಲು!

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿಗೆ ಕಾವ್ಯದ ಜೀವಂತಿಕೆಯ ಕುರಿತು ಇನ್ನಿಲ್ಲದ ಭರವಸೆ. ಕಾವ್ಯ ಸಾಯುತ್ತಿದೆ ಎಂದು ಆತಂಕ ವ್ಯಕ್ತಪಡಿಸುವವರ ಕುರಿತು ಮೂರ್ತಿ ಕಾರಿದ್ದು ವಾತಾವರಣಕ್ಕೆ ವಿರುದ್ಧವಾಗಿ ಅಕ್ಷರಶಃ ಕೆಂಡ. ‘ಕಾವ್ಯ ಎಂದೂ ಸಾಯುವುದಿಲ್ಲ ; ಕಾವ್ಯಕ್ಕೆ ಸಾವಿಲ್ಲ . ಹೊಸ ಕವಿತೆ, ಅಂತೆಯೇ ಹೊಸ ಕವಿಗಳ ಸೃಷ್ಟಿ ನಿರಂತರ’ ಎಂದು ಎಚ್ಚೆಸ್ವಿ ಸಹೃದಯ ಲೋಕಕ್ಕೆ ಸಮಾಧಾನ ಹೇಳಿದರು.

Vaidehiಕಾವ್ಯ ಜೀವಂತವಾಗಿದೆ ಎನ್ನುವ ತಮ್ಮ ತರ್ಕಕ್ಕೆ ಎಚ್ಚೆಸ್ವಿ ಉದಾಹರಣೆ ಕೊಟ್ಟಿದ್ದು - ಕವಿಗೋಷ್ಠಿಗಳನ್ನು . ಹತ್ತು ವರ್ಷದ ಹಿಂದಿನ ಕವಿಗೋಷ್ಠಿಗಳಲ್ಲಿ ಎಲ್ಲ ಕವಿತೆಗಳೂ ಒಂದೇ ರೀತಿ ಇರುತ್ತಿದ್ದವು. ಕವಿಗಳೆಲ್ಲರ ಕವನ ರಚನಾ ಕ್ರಮ, ಚಿಂತನೆ, ವಾಚನ ವಿಧಾನ ಬಹುತೇಕ ಒಂದೇ ರೀತಿ ಇರುತ್ತಿತ್ತು . ಆದರೆ ಈಗ ನೋಡಿ- ಒಂದು ಕವಿತೆಯಂತೆ ಇನ್ನೊಂದಿಲ್ಲ . ಕಾವ್ಯದ ವಸ್ತುವೂ ವಿಸ್ತಾರವಾಗಿದೆ. ಚಿಂತನೆಗಳೂ ಬದಲಾಗಿವೆ.

ಶರ್ಮರ ಭಯವಿಲ್ಲ !
ಕಾವ್ಯದಲ್ಲಿ ಎಲ್ಲ ರೀತಿಯ ದನಿಗಳೂ ಕೇಳಿಬರುತ್ತಿವೆ. ಕಾವ್ಯ ಹಿಂದೆಂದೂ ಇಷ್ಟೊಂದು ವೈವಿಧ್ಯತೆ ಹೊಂದಿರಲಿಲ್ಲ . ಕವಿತೆಯನ್ನು ಓದುವ ಕ್ರಮ, ಹಾಡುವ ಪ್ರವೃತ್ತಿಗೆ ಹೊಸತನ ಬೆರೆತಿದೆ ಎಂದ ವೆಂಕಟೇಶಮೂರ್ತಿ- ಕವಿತೆಯನ್ನು ಹಾಡುವವರಿಗೆ ಈಗ ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X