• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕನ ವಿಚಾರಗಳಿಂದ ನಾನು ಪ್ರಭಾವಿತಳಾಗಿದ್ದೇನೆ : ಇಂದಿರಾ ಗೋಸ್ವಾಮಿ

By Staff
|

I am benefited with Akkas thoughts : Indira Goswamy ಬೆಂಗಳೂರು : ನನ್ನ ಮೇಲೆ ಅಕ್ಕ ಮಹಾದೇವಿಯ ವಿಚಾರಗಳು ಸಾಕಷ್ಟು ಪ್ರಭಾವ ಬೀರಿವೆ. ಆಕೆಯ ಚಿಂತನೆಗಳ ಅನುವಾದವನ್ನು ಸಾಕಷ್ಟು ಓದಿಕೊಂಡಿದ್ದೇನೆ. ನೂರಾರು ವರ್ಷಗಳ ಹಿಂದೆಯೇ ಪ್ರಗತಿ ಪರ ವಿಚಾರಗಳಿಗೆ ಮಹಿಳಾ ದನಿ ಹೊಮ್ಮಿದ್ದರೂ, ಮಹಿಳೆಯರು ಕಷ್ಟ ಎದುರಿಸುವುದು ಮಾತ್ರ ಇಂದಿಗೂ ತಪ್ಪಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತೆ, ಅಸ್ಸಾಂ ಲೇಖಕಿ ಇಂದಿರಾ ಗೋಸ್ವಾಮಿ ವಿಷಾದಿಸಿದ್ದಾರೆ.

ಕರ್ನಾಟಕ ಲೇಖಕಿಯರ ಸಂಘ ಹಾಗೂ ಮಾಸ್ತಿ ಅಧ್ಯಯನ ಪೀಠದ ಸಹಯೋಗದಲ್ಲಿ ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ. ನಿರುಪಮಾ ಅವರಿಗೆ ಅನುಪಮಾ ಪ್ರಶಸ್ತಿ ಪ್ರದಾನ ಮಾಡಿ, ಅವರು ಮಾತಾಡುತ್ತಿದ್ದರು. ದೇಶದಲ್ಲಿ ಕೋಮುವಾದ ತಾಂಡವವಾಡುತ್ತಿದೆ. ಇದರಿಂದ ಸೃಜನ ಕೆಲಸಗಳಿಗೆ ಅಡಚಣೆಯಾಗಿದೆ. ಸಾಲದ್ದಕ್ಕೆ ಭ್ರಷ್ಟಾಚಾರದ ಭೂತ. ಇದರಲ್ಲಿ ಮಹಿಳೆಯರ ಪಾಲೂ ಇದೆ ಎಂದರು.

ನಲವತ್ತು ವರ್ಷಗಳಿಂದ ನಾನು ಬರೆಯುತ್ತಿದ್ದೇನೆ. ನನ್ನ ಗಂಡನ ಸಾವಿನ ನಂತರ ಬರವಣಿಗೆ ತೀವ್ರವಾಯಿತು, ಗಾಢವಾಯಿತು. ಅಸ್ಸಾಂನ ಪರಿಸರ ಹಾಗೂ ಬ್ರಹ್ಮಪುತ್ರ ನದಿ ನನಗೆ ಸ್ಫೂರ್ತಿ. ನಾನು ಮದುವೆಯಾಗಿದ್ದು ಒಬ್ಬ ಕನ್ನಡಿಗನನ್ನು. ಕರ್ನಾಟಕ ಸಂಘ ನನ್ನನ್ನು 9 ವರ್ಷಗಳ ಹಿಂದೆ ಸನ್ಮಾನಿಸಿತ್ತು. ಆಗ ತುಂಬಾ ಖುಷಿಯಾಗಿತ್ತು ಎಂದು ಸಂತೋಷ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ. ಆದರೆ ಈ ಗೌರವ ಸಂದಿರುವ ಎಲ್ಲರೂ ಪುರುಷರು. ಮಹಿಳಾ ಸಾಹಿತಿಗಳನ್ನು ಗುರ್ತಿಸುವ ಕೆಲಸ ಇವತ್ತಿನ ಪರಿಸ್ಥಿತಿಯಲ್ಲಿ ಬಹು ಮುಖ್ಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗುರುಲಿಂಗ ಕಾಪಸೆ ಅಭಿಪ್ರಾಯ ಪಟ್ಟರು.

ದತ್ತಿ ನಿಧಿ ಪ್ರಶಸ್ತಿ ಪ್ರದಾನ

ಇದೇ ಸಮಾರಂಭದಲ್ಲಿ ವಿವಿಧ ದತ್ತಿ ನಿಧಿ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಯಿತು. ದತ್ತಿ ನಿಧಿ ಪ್ರಶಸ್ತಿಗೆ ಭಾಜನರಾದವರು- ಸಾವಿತ್ರಮ್ಮ ಬಹುಮಾನ : ಜಯಶ್ರೀ ಕಾಸರವಳ್ಳಿ (ಕೃತಿ- ತಂತಿ ಬೇಲಿಯ ಕಾಗೆ), ಗೀತಾ ದೇಸಾಯಿ ಬಹುಮಾನ : ಬಾ.ಹ.ರಮಾಕುಮಾರಿ (ಕನಸಿನಾಳದ ಕಣ್ಣು), ಪ್ರೇಮಾಭಟ್‌ ಬಹುಮಾನ : ಸುಮತಿ ಕೆ.ಸಿ.ಭಟ್‌ (ತೆಕ್ಕೆ), ಗುಡಿಬಂಡೆ ಪೂರ್ಣಿಮಾ ಬಹುಮಾನ : ಬಿ.ಜಿ.ನಳಿನಿ ವಿಜಯಕುಮಾರ್‌, ಎಲ್‌.ಜಿ.ಮೀರಾ, ರೋಹಿಣಿ ಕಟಪಾಡಿ, ಪದ್ಮಾ ಅಚ್ಯುತ ರಾವ್‌ ಹಾಗೂ ಎ.ಪ್ರಮೀಳಾ ಕರುಂಬಯ್ಯ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more