For Daily Alerts
ತೆಪ್ಪಗೆ ಬದುಕೋದಕ್ಕೆ ಯಾವ ವಾದವೂ ಬೇಡ : ಪೂರ್ಣಚಂದ್ರ ತೇಜಸ್ವಿ
ಪ್ರಶಸ್ತಿ ಸ್ವೀಕರಿಸಿ ಅಂದ್ರೆ ನೀವು ಮುಖ ಸಿಂಡರಿಸೋದು ಯಾಕೆ?
ಪ್ರಶಸ್ತಿ ಕೊಡೋವಾಗ ಮಂಗಳಾರತಿ ಬೆಳಗೋದು, ಹಣೆಗೆ ಕುಂಕುಮ ಇಡೋದು ಮಾಡ್ತಾರಲ್ಲ, ಅದೆಲ್ಲ ನಂಗೆ ಹಿಡಿಸಲ್ಲ. ಹಾಗಾಗಿ ನಾನು ಪ್ರಶಸ್ತಿ ಸ್ವೀಕರಿಸೋ ತಾಪತ್ರಯದಿಂದ ದೂರವೇ ಇರ್ತೀನಿ.
ಜಾಗತೀಕರಣದ ಪರಿಣಾಮ ನಿಮ್ಮ ದೃಷ್ಟೀಲಿ ಏನು?
ಈ ಸಂಬಂಧ ನಾನು ಒಂದೇ ಮಾತಲ್ಲಿ ಹೇಳುವುದಿಷ್ಟು: ಜಾಗತೀಕರಣದ ಪರಿಣಾಮದಿಂದ ಸ್ವಾಯತ್ತ ಗ್ರಾಮಗಳ ಕಲ್ಪನೆ ನಶಿಸಿ ಹೋಗ್ತದೆ.
ನಿಮಗೆ ತುಂಬ ಇಷ್ಟವಾದ, ನಿಮ್ಮ ಬದುಕಿನ ಮೇಲೆ ಗಾಢ ಪ್ರಭಾವ ಬೀರಿದ ವ್ಯಕ್ತಿ ಯಾರು?
ಕುವೆಂಪು
ಟೀಕೆ-ಮೆಚ್ಚುಗೆ ಎರಡೂ ಸಂದರ್ಭದಲ್ಲಿ ಸ್ಥಿತಪ್ರಜ್ಞರ ಹಾಗಿರ್ತೀರಲ್ಲ. ನೀವು ಆಶಾವಾದಿಯೇ?
ತೆಪ್ಪಗೆ ಬದುಕೋದಕ್ಕೆ ಆಶಾವಾದವೂ ಬೇಡ, ನಿರಾಶಾವಾದವೂ ಬೇಡ. ಬದುಕು ಬಂದ ಹಾಗೆ ಬರಲಿ ಅಂತನ್ನೋ ಧೈರ್ಯ ನಮಗಿದ್ರೆ ಅಷ್ಟೇ ಸಾಕು.
(ವಿಜಯ ಕರ್ನಾಟಕ)
ತೇಜಸ್ವಿ ಇರೋದೇ ಹೀಗೆ...
ಮುಖಪುಟ / ಸಾಹಿತ್ಯ ಸೊಗಡು