ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಕನ್ನಡಿಗರ ಕೂಟದಿಂದ ಕೇಫ ಸ್ಮಾರಕಹಾಸ್ಯ ಲೇಖನ ಸ್ಪರ್ಧೆ

By Staff
|
Google Oneindia Kannada News

ಚೆನ್ನೈ: ಇಲ್ಲಿನ ಕನ್ನಡಿಗರ ಕೂಟವು ಕೇಫ ಸ್ಮಾರಕ ಹಾಸ್ಯ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ.

ಹಾಸ್ಯ ಲೇಖನಗಳು ಸಾಧಾರಣ ಕೈ ಬರಹದ ಎಂಟು ಪುಟಗಳನ್ನು ಮೀರಿರಬಾರದು. ಇತರೆಡೆಗಳಲ್ಲಿ ಪ್ರಕಟವಾಗದೇ ಇರುವ ಬರಹಗಳು ಸ್ಪರ್ಧೆಗೆ ಅರ್ಹ. ಹಾಸ್ಯ ಕವಿತೆ ಮತ್ತು ಚುಟುಕ ಸ್ಪರ್ಧೆಗಳೂ ಪ್ರತ್ಯೇಕವಾಗಿವೆ. ನವೆಂಬರ್‌ ತಿಂಗಳ 20ನೇ ತಾರೀಕಿನೊಳಗೆ ಲೇಖನಗಳು ಸಂಘಟಕರ ಕೈ ಸೇರಬೇಕು. ಪ್ರತಿ ಲೇಖನ, ಕವಿತೆ ಮತ್ತು ಚುಟುಕಕ್ಕೆ 30 ರೂಪಾಯಿ ಪ್ರವೇಶ ಶುಲ್ಕವನ್ನೂ ತುಂಬಬೇಕು.

ಸಂಪರ್ಕ ವಿಳಾಸ: ಕನ್ನಡಿಗರ ಕೂಟ (ರಿ), ಎಂ. 46 /2, ಒಂದನೇ ಮುಖ್ಯ ರಸ್ತೆ, ಬೆಸಂಟ್‌ನಗರ್‌, ಚೆನ್ನೈ- 600 090. ವಿಳಾಸವನ್ನು ಇಂಗ್ಲಿಷ್‌ನಲ್ಲಿ ಬರೆಯಬೇಕು. ಲೇಖನ ಸ್ಪರ್ಧೆಯ ಬಹುಮಾನಗಳು ಕ್ರಮವಾಗಿ ಎರಡು ಸಾವಿರ, ಒಂದುವರೆ ಹಾಗೂ ಒಂದು ಸಾವಿರ ರೂಪಾಯಿಗಳಾಗಿರುತ್ತವೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X