• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕೇಂದ್ರಸಾಹಿತ್ಯಅಕಾಡೆಮಿ ಪ್ರಶಸ್ತಿ ಗುರು-ದೈವ ಕೃಪೆ’

By Staff
|

ನವದೆಹಲಿ : ರಾಷ್ಟ್ರಕವಿ ಕುವೆಂಪು ಅವರ ಮೆಚ್ಚಿನ ಶಿಷ್ಯರಲ್ಲೊಬ್ಬರು ಹಾಗೂ ಕನ್ನಡದ ಹಿರಿಯ ಲೇಖಕರಾದ ಸುಜನಾ ಅವರ ‘ಯುಗಸಂಧ್ಯಾ’ ಮಹಾಕಾವ್ಯಕ್ಕೆ 2002 ನೇ ಇಸವಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅನುವಾದ ಕಾರ್ಯಕ್ಕೆ ನೀಡುವ ಪ್ರಶಸ್ತಿಯು ಲೇಖಕಿ ವೀಣಾ ಶಾಂತೇಶ್ವರ ಅವರಿಗೆ ದೊರೆತಿದೆ.

22 ಭಾರತೀಯ ಭಾಷೆಗಳಲ್ಲಿ ಅಕಾಡೆಮಿಯು ಪ್ರಶಸ್ತಿ ಪ್ರಕಟಿಸಿದ್ದು, ಕನ್ನಡ ವಿಭಾಗದಲ್ಲಿ ಸುಜನಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 40 ಸಾವಿರ ರುಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣ ಫಲಕವನ್ನು ಪ್ರಶಸ್ತಿ ಒಳಗೊಂಡಿದೆ. ಫೆಬ್ರವರಿ 17 ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಡಾ.ವೀಣಾ ಶಾಂತೇಶ್ವರ ಅವರ ‘ನದೀದ್ವೀಪಗಳು’ ಅನುವಾದಿತ ಕೃತಿಗೆ (ಆಜ್ಞೇಯ ಮೂಲಕೃತಿ ಅನುವಾದ) ಭಾಷಾಂತರ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ.

ಭಯವಾಗುತ್ತಿದೆ, ಗುರು ನೆನಪಾಗುತ್ತಿದ್ದಾರೆ

ಕೇಂದ್ರ ಸಾಹಿತ್ಯ ಪ್ರಶಸ್ತಿ ದೊರೆತ ಬಗೆಗೆ ಸಂತೋಷವೂ ಆಗಿದೆ ಹಾಗೂ ಅದೇಕಾಲದಲ್ಲಿ ಭಯವೂ ಆಗುತ್ತಿದೆ ಎಂದು ಸುಜನಾ ಎಂದೇ ಹೇಸರಾದ ಪ್ರೊ.ಎಸ್‌.ನಾರಾಯಣಶೆಟ್ಟಿ ಪ್ರಶಸ್ತಿ ದೊರೆತ ಕುರಿತು ಪ್ರತಿಕ್ರಿಯಿಸಿದರು.

ಎಲ್ಲಾ ಭಗವಂತನ ಕೃಪೆ. ಪ್ರಶಸ್ತಿ ದೊರೆತ ಸಂದರ್ಭದಲ್ಲಿ ನನ್ನ ಗುರು ಕುವೆಂಪು ನೆನಪಾಗುತ್ತಿದ್ದಾರೆ. ಅವರಿಗೆ ದೊರೆತ ಪ್ರಶಸ್ತಿಯಾಂದು ನನಗೂ ದೊರೆತಿದೆ. ಯುಗಸಂಧ್ಯಾ ಮಹಾಕಾವ್ಯ 1999 ರಲ್ಲಿ ಪ್ರಕಟವಾಗಿರಬೇಕು. ಅದನ್ನು ಯಾರೂ ಗುರ್ತಿಸಿರಲಿಲ್ಲ . ಈಗ ಪ್ರಶಸ್ತಿ ಬಂದಿದೆ. ಅಂದಮೇಲೆ ಕೃತಿಯಲ್ಲಿ ಒಳ್ಳೆಯ ಅಂಶಗಳಿರಬೇಕು ಎಂದು ಸುಜನಾ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more