ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಪು ಅಧ್ಯಕ್ಷತೆಯ ಬೆಳಗಾವಿ ಸಮ್ಮೇಳನ ಮುಂದಕ್ಕೆ

By Staff
|
Google Oneindia Kannada News

ಹಾಸನ: 2003 ನೇ ಇಸವಿ, ಫೆಬ್ರವರಿ 14ರಿಂದ 16ರವರೆಗೆ ಬೆಳಗಾವಿಯಲ್ಲಿ ನಡೆಯಬೇಕಿದ್ದ 70 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಒಂದು ವಾರ ಕಾಲ ಮುಂದೂಡಲಾಗಿದೆ.

ಫೆಬ್ರವರಿ 21ಕ್ಕೆ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ. ಫೆಬ್ರವರಿ 28ರಂದು ಶಿವರಾತ್ರಿ. ಅದಕ್ಕೆ ಮುನ್ನ ಸಾಹಿತ್ಯ ಸಮ್ಮೇಳನವನ್ನು ಮುಗಿಸಬೇಕು. ಮಕ್ಕಳ ಪರೀಕ್ಷೆ, ಪಂಚಾಂಗ ಇತ್ಯಾದಿಗಳನ್ನು ಅನುಸರಿಸಿ ಸಮ್ಮೇಳನವನ್ನು ಫೆ.21 ರಿಂದ 23ರವರೆಗೆ ನಡೆಸಲಾಗುವುದು. ಸುಮಾರು ಒಂದು ಕೋಟಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮ್ಮೇಳನ ನಡೆಯಲಿದೆ ಎಂದು ಪುನರೂರು ತಿಳಿಸಿದರು.

ಶ್ರವಣಬೆಳಗೊಳದಲ್ಲಿ ಜರುಗಿದ ಕಸಾಪ ಪ್ರತಿನಿಧಿಗಳ ಸಭೆ ಪಾಪು ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿದ ಸಂದರ್ಭದಲ್ಲೇ, ಸಮ್ಮೇಳನವನ್ನು ವಾರ ಕಾಲ ಮುಂದೂಡುವ ನಿರ್ಣಯ ಕೈಗೊಳ್ಳಲಾಯಿತು.

ಸಮ್ಮೇಳನದ ಅಂದಾಜು ವೆಚ್ಚದ ಹಣದಲ್ಲಿ ಸುಮಾರು 20 ಲಕ್ಷ ರೂಪಾಯಿಗಳನ್ನು ಉಳಿತಾಯ ಮಾಡುವ ಯೋಜನೆಯಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಣ ಕ್ರೋಢೀಕರಣದ ಬಗ್ಗೆ ಭರವಸೆ ನೀಡಿದ್ದು, 18 ಮಂದಿ ಶಾಸಕರು ಹಾಗೂ 5 ಮಂದಿ ಸಂಸದರಿಂದ ಹಣ ಸಂಗ್ರಹಿಸಲಾಗುವುದು. ಸರಕಾರಿ ನೌಕರರ ಒಂದು ದಿನದ ಸಂಬಳವನ್ನು ಸಮ್ಮೇಳನಕ್ಕಾಗಿ ಸಂಗ್ರಹಿಸಲಾಗುವುದು ಎಂದು ಪುನರೂರು ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಎಸ್‌. ಎಂ. ಹರಳಗಟ್ಟಿ ತಿಳಿಸಿದರು.

ಸಮ್ಮೇಳನದ ಸವಿ ನೆನಪಿಗಾಗಿ ಎರಡು ಸ್ಮರಣ ಸಂಚಿಕೆಗಳನ್ನು ಹೊರತರಲಾಗುವುದು. ಒಂದು ಜಾಹೀರಾತು ಸಹಿತ ಸ್ಮರಣ ಸಂಚಿಕೆ. ಇನ್ನೊಂದು ಬೆಳಗಾವಿ ಜಿಲ್ಲೆಯ ವಿಶೇಷತೆಯನ್ನು ವಿವರಿಸುವ, ಪ್ರಬುದ್ಧರ ಲೇಖನಗಳನ್ನೊಳಗೊಂಡ ಕೈಪಿಡಿ. ಇದಕ್ಕಾಗಿ ಲೇಖನಗಳನ್ನು ತರಿಸಿಕೊಳ್ಳುವ ಮತ್ತು ಆಯ್ಕೆ ಮಾಡುವ ಕೆಲಸಗಳು ಈಗಾಗಲೇ ಆರಂಭವಾಗಿವೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X