ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಖಜಾನೆಗೆ ತಿಂಗಳಿಗೆ 130 ಶಬ್ದ ಸೇರ್ಪಡೆ

By Staff
|
Google Oneindia Kannada News

ಬೆಂಗಳೂರು : ಇಂಗ್ಲಿಷ್‌ ಭಾಷೆಯಂತೆ ಪ್ರತಿ ವರ್ಷ ಹೆಚ್ಚು ಹೆಚ್ಚು ಶಬ್ದಗಳನ್ನು ತನ್ನ ಪದಕೋಶಕ್ಕೆ ಸೇರಿಸಿಕೊಂಡಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ ಕಬೀರ್‌ ಸನ್ಮಾನ್‌ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.

ಆಕ್ಸ್‌ಫರ್ಡ್‌ ವಿಶ್ವ ವಿದ್ಯಾಲಯ ಪ್ರಕಟಿಸುವ ಇಂಗ್ಲಿಷ್‌ ಶಬ್ದಕೋಶಕ್ಕೆ ಪ್ರತಿವರ್ಷ ಕನಿಷ್ಠ 15 ಸಾವಿರ ಪದಗಳು ಸೇರ್ಪಡೆಗೊಳ್ಳುತ್ತವೆ. ಆದರೆ ಕನ್ನಡಕ್ಕೆ ಸೇರ್ಪಡೆಗೊಳ್ಳುವುದು ತಿಂಗಳಿಗೆ 130 ಮಾತ್ರ. ಬೆಳೆಯುವ ಭಾಷೆಗೆ ಈ ಸಂಖ್ಯೆ ಏನೇನೂ ಸಾಲದು ಎಂದು ಕಂಬಾರ ಹೇಳಿದರು. ಭಾರತೀಯ ಸ್ಟೇಟ್‌ ಬ್ಯಾಂಕ್‌ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಕಂಬಾರ ಮಾತನಾಡುತ್ತಿದ್ದರು.

ಜಾಗತಿಕ ಮಟ್ಟಕ್ಕೆ ಕನ್ನಡವನ್ನು ಒಯ್ಯುವ ಛಲವನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕು. ಒಂದು ಕಾಲಕ್ಕೆ ಪ್ರಾಂತೀಯ ಭಾಷೆಯಾಗಿದ್ದ ಇಂಗ್ಲಿಷ್‌ ಇಂದು ಜಗತ್ತನ್ನೇ ಆಳುವ ಭಾಷೆಯಾಗಿದೆ. ಕನ್ನಡವನ್ನೂ ನಾವು ಆ ಮಟ್ಟಕ್ಕೆ ಒಯ್ಯಬೇಕಾಗಿದೆ ಎಂದು ಕಂಬಾರ ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸನ್ಮಾನಿತರ ಪಟ್ಟಿ :
ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರಿಗೆ ಸಾಮಾಜಿಕ ಕಾರ್ಯಾಸಕ್ತ ಚಿಂತಾಮಣಿ ಪ್ರಶಸ್ತಿ
ಹಿರಿಯ ಕಲಾವಿದೆ ಶ್ಯಾಮಲಾ ಜಿ.ಭಾವೆ ಅವರಿಗೆ ಸಂಗೀತ ಕಲಾ ಚೂಡಾಮಣಿ ಪ್ರಶಸ್ತಿ
ಹಿರಿಯ ನಟ ಎಚ್‌.ಜಿ.ಸೋಮಶೇಖರ ರಾವ್‌ ಅವರಿಗೆ ಪೋಷಕ ನಟ ಪ್ರಚಂಡ ಪ್ರಶಸ್ತಿ
ಕವಿ ಡಾ.ಚಂದ್ರಶೇಖರ ಕಂಬಾರರಿಗೆ ಜಾನಪದ ನಾಟಕ ಪ್ರವೀಣ ಪ್ರಶಸ್ತಿ
ಉದಯ ಟೀವಿಯ ಶೈಲಜಾ ಸಂತೋಷ್‌ ಅವರಿಗೆ ಮಾಧ್ಯಮ ಸಂವಹನಾ ಪ್ರಶಸ್ತಿ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X