• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಗೀತಗಾರನ ಮಾನವೀಯತೆ

By Staff
|

*ಎಂ. ವಿ. ನಾಗರಾಜ ರಾವ್‌

M.V. Nagaraja Raoಪಂಡಿತ ನಾರಾಯಣ ರಾವ್‌ ಅಪ್ರತಿಮ ಸಂಗೀತ ವಿದ್ವಾಂಸರು. ಅವರ ಸಂಗೀತ ಮಾಧುರ್ಯ, ಕಲೆಗಾರಿಕೆಯ ಬಗ್ಗೆ ಎಲ್ಲರೂ ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದರು. ಸಂಗೀತ ಪ್ರೇಮಿಗಳು ಅವರನ್ನು ಸಾಕ್ಷಾತ್‌ ‘ಗಾನ ಸರಸ್ವತಿ’ ಎಂದೇ ಕರೆಯುತ್ತಿದ್ದರು. ಶಾಸ್ತ್ರೀಯ ಗಾಯನದಲ್ಲಿ ಅವರು ಅದ್ವಿತೀಯರಾಗಿದ್ದರು.

ಒಮ್ಮೆ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಬಂದರು. ಅವರು ಒಂದು ದೊಡ್ಡ ಹೊಟೇಲಿನಲ್ಲಿ ತಂಗಿದರು. ಒಂದೆರಡು ದಿನ ಕಳೆಯಿತು. ಅವರಿಗೆ ಕೆಲವೊಂದು ಅಗತ್ಯವಾದ ವಸ್ತುಗಳು ಬೇಕಾಯಿತು. ಅವರು ಪೇಟೆಗೆ ಹೋಗಿ ವಸ್ತುಗಳನ್ನು ಖರೀಸಿದರು. ಒಬ್ಬ ಕೂಲಿಯಿಂದ ಹೊರಿಸಿಕೊಂಡು ಹೊಟೇಲಿಗೆ ಬಂದರು.

‘ಸ್ವಾಮಿ... ಈ ಹೊಟೇಲಿನಲ್ಲಿ ಪ್ರಸಿದ್ಧ ಗಾಯಕ ನಾರಾಯಣ ರಾವ್‌ ತಂಗಿದ್ದಾರೆಂದು ಕೇಳಿದ್ದೇನೆ. ಅವರನ್ನು ನೀವು ಬಲ್ಲಿರಾ ?’ ಕೂಲಿ ಅವರ ಕೊಠಡಿಯಲ್ಲಿ ಸಾಮಾನು ಇಳಿಸುತ್ತಾ ಕೇಳಿದ. ಕೂಲಿ ಸಂಗೀತ ಪ್ರೇಮಿಯಾಗಿದ್ದ . ಅವನಿಗೆ ನಾರಾಯಣ ರಾವ್‌ ಅವರ ಸಂಗೀತದ ಬಗ್ಗೆ ಹೆಮ್ಮೆಯಿತ್ತು. ಟಿಕೀಟು ನೀಡಿ ಅವರ ಸಂಗೀತ ಕಛೇರಿಗಳಿಗೆ ಹೋಗುವುದು ಅವನಿಗೆ ಸಾಧ್ಯವಿರಲಿಲ್ಲ.

ಹೌದು. ಅವರು ಇಲ್ಲಿಯೇ ತಂಗಿದ್ದಾರೆ. ಏಕೆ ?’ ನಾರಾಯಣ ರಾವ್‌ ಹುಸಿನಗುತ್ತಾ ಕೇಳಿದರು.

‘ಅವರ ದರ್ಶನ ಮಾಡುವ ಆಸೆ’

‘ಅವರನ್ನು ಕಂಡು ಏನು ಮಾಡುವುದಿದೆ ?’

‘ನನ್ನಂಥ ಕೂಲಿಗೆ ಅವರ ಸಂಗೀತ ಕೇಳುವ ಭಾಗ್ಯವಂತೂ ಇಲ್ಲ. ಅವರ ದರ್ಶನ ಭಾಗ್ಯವಾದರೂ ದೊರೆತರೆ ನಾನು ಧನ್ಯ.’

‘ಅವರ ಸಂಗೀತ ಕೇಳುವ ಆಸೆ ಇದೆಯೇ ?’

‘ಅಂಥ ಅದೃಷ್ಟ ನನ್ನದಾಗುವುದು ಸಾಧ್ಯವೇ ?.. ಕೇವಲ ಅವರನ್ನೊಮ್ಮೆ ನೋಡಿ ಧನ್ಯನಾಗುತ್ತೇನೆ.’

ನಾರಾಯಣ ರಾವ್‌ ಅವನ ಸಂಗೀತ ಪ್ರೇಮವನ್ನು ಕಂಡು ಮೂಕರಾದರು.

‘ನಾನೇ ನಾರಾಯಣ ರಾವ್‌. ಕುಳಿತುಕೊ. ನಾನು ಹಾಡುತ್ತೇನೆ. ನೀನು ಕೇಳಬಹುದು’

ಎಂದು ನಾರಾಯಣ ರಾವ್‌ ತಾನ್‌ಪುರಿಯನ್ನು ಹಿಡಿದು ಅವನ ಮುಂದೆ ಕುಳಿತರು. ಸುಮಾರು ಒಂದು ಗಂಟೆಗಿಂತಲೂ ಹೆಚ್ಚು ಹೊತ್ತು ಹೃದಯ ತುಂಬಿ ಹಾಡಿದರು. ಕೂಲಿ ಮಂತ್ರಮುಗ್ಧನಾಗಿ ಕಣ್ಮುಚ್ಚಿ ಅವರ ಸಂಗೀತಧಾರೆಯನ್ನು ಕೇಳುತ್ತಾ ಕುಳಿತಿದ್ದ.

ಸಂಗೀತ ಮುಗಿದ ಕೂಡಲೇ ಅವರ ಪಾದಗಳನ್ನು ಹಿಡಿದು ನಮಸ್ಕರಿಸಿದ. ಅವನ ಕಣ್ಣುಗಳಲ್ಲಿ ಆನಂದಬಾಷ್ಪವಿತ್ತು.

ಅವನು ಗದ್ಗದಿತನಾಗಿದ್ದ.

‘ಮೇಲೇಳು ನನಗೇಕೆ ನಮಸ್ಕರಿಸುತ್ತೀಯೆ ?’

‘ನೀವು ಮಹಾನ್‌ ಸಂಗೀತಗಾರರು. ಕೇವಲ ಸಂಗೀತಗಾರರು ಕಲಾರಾಧಕರು ಮಾತ್ರವಲ್ಲ, ಮಾನವೀಯ ಗುಣ ಉಳ್ಳವರು. ನನ್ನಂಥ ಸಾಮಾನ್ಯ ಕೂಲಿಯೆದುರು ಒಂದು ಗಂಟೆ ಸಂಗೀತ ಹೇಳುವುದೆಂದರೆ ನನ್ನ ಸೌಭಾಗ್ಯ. ತಮ್ಮಂಥವರ ಹತ್ತಿರ ಕೂಡುವುದೇ ಒಂದು ಪುಣ್ಯ.’

‘ಬೇರೆಯವರನ್ನು ಸಾಮಾನ್ಯ, ಸಾಧಾರಣ, ಮಾಮೂಲಿ ಎಂದು ಯೋಚಿಸುವವರು ಮಹಾನ್‌ ಆಗಲು ಹೇಗೆ ಸಾಧ್ಯ ?’ ಪಂಡಿತ ನಾರಾಯಣ ರಾವ್‌ ಅವನ ಭುಜ ಹಿಡಿದು ಕೇಳಿದರು.

ನೀತಿ: ಎಲ್ಲರನ್ನೂ ಸಮಾನವಾಗಿ ಕಾಣುವವ ಮಹಾನ್‌ ವ್ಯಕ್ತಿಯಾಗಬಲ್ಲ.

Post your views

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X