• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆಯಂಗಳದಲ್ಲಿ ಕಾವೇರಿ ವಿವಾದದ ಬಗ್ಗೆ ಜಿಎಸ್‌ಎಸ್‌ ವಿಷಾದ

By Staff
|

ಬೆಂಗಳೂರು : ಅತ್ತ ನೋಡಿದರೆ ಕಾವೇರಿ ನೀರಿಗಾಗಿ ಗಲಾಟೆ, ಆ ಮೂಲಕ ಭಾಷೆಯ ವಿವಾದಗಳು...ಈ ಎರಡೂ ಸಮಸ್ಯೆಗಳು ಮನುಷ್ಯ-ಮನುಷ್ಯನ ನಡುವೆ ಸಂವಾದವೇ ಸಾಧ್ಯವಿಲ್ಲ ಎನ್ನುಷ್ಟರ ಮಟ್ಟಿಗೆ ಹೆದರಿಕೆ ಹುಟ್ಟಿಸುತ್ತಿದೆ. ಇದರಿಂದ ಯಾರಿಗೂ ನೆಮ್ಮದಿ ಇಲ್ಲ. ಈ ತಲ್ಲಣಗಳು ಕಂಗೆಡುವಂತೆ ಮಾಡುತ್ತಿವೆ ಎಂದು ಪ್ರಸ್ತುತ ಸ್ಥಿತಿ ಗತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದವರು ಕವಿ, ಡಾ. ಜಿ. ಎಸ್‌. ಶಿವರುದ್ರಪ್ಪ.

ಅದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’. ಶನಿವಾರದ ಮಾತುಕತೆಯಲ್ಲಿ ರಾಜ್ಯವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕಾವೇರಿ ಸಮಸ್ಯೆ ಸಾಹಿತ್ಯಿಕ ಚಿಂತನೆಗಳನ್ನು ತಳ್ಳಿಕೊಂಡು ಬಂತು.

ಕಾವೇರಿ ನದಿ ನೀರು ವಿಷಯದಲ್ಲಿ ಆರಂಭದಿಂದಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ನಮ್ಮ ಹಕ್ಕಿನ ನೀರನ್ನು ಬಳಸಿಕೊಳ್ಳುವುದಕ್ಕೂ ತಮಿಳುನಾಡು ತೊಡರುಗಾಲು ಹಾಕುತ್ತಿದೆ. ಕೋರ್ಟು, ಸರಕಾರಗಳ ಆಚೆಗೆ ಮೀರಿ ನಿಂತ ಈ ಸಮಸ್ಯೆಗೆ ನಾವೇ ಪರಿಹಾರ ಕಂಡುಕೋಬೇಕು ಅಂತ ರೈತರು ನಿರ್ಧರಿಸಿದ್ದಾರೆ. ಉರಿಯುತ್ತಿರುವ ಈ ಸಮಸ್ಯೆಗೆ ಪರಿಹಾರ ರೂಪವಾಗಿ ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕು ಎಂದು ಜಿಎಸ್‌ಎಸ್‌ ಆಗ್ರಹಿಸಿದರು.

ದೇವರು, ಪ್ರಶಸ್ತಿ, ಹೊಸ ಪೀಳಿಗೆಯ ಬರಹಗಾರರ ಕುರಿತ ಪ್ರಶ್ನೆಗಳು ಜಿಎಸ್‌ಎಸ್‌ ಮೇಲೆ ದಾಳಿಯಿಟ್ಟವು. ಹಿಂದೆಲ್ಲ ಪ್ರಶಸ್ತಿ ಸಿಕ್ಕರೆ ಹೆಮ್ಮೆಪಡುತ್ತಿದ್ದ ಕಾಲ. ಆದರೆ ಈಗ ಪ್ರಶಸ್ತಿಗಳದೇ ಸುಗ್ಗಿ. ಆದ್ದರಿಂದ ಪ್ರಶಸ್ತಿಗಳು ಸಂಭ್ರಮ ತರುವುದಿಲ್ಲ. ಹೊಸ ಪೀಳಿಗೆಯ ಬರಹಗಾರರ ಬಗ್ಗೆ ಏನೂ ಹೇಳುವುದಕ್ಕಾಗುವುದಿಲ್ಲ. ಯಾಕೆಂದರೆ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಗರ ಕೇಂದ್ರೀಕೃತವಾಗಿದ್ದು, ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯೇ ಸಿಗುತ್ತಿಲ್ಲ. ಆದ್ದರಿಂದ ಹೊಸ ಬರಗಾರರ ಬಗ್ಗೆ ತಿಳಿದುಕೊಳ್ಳಲಾಗುತ್ತಿಲ್ಲ ಎಂದು ಜಿಎಸ್‌ಎಸ್‌ಸಾಹಿತ್ಯದ ಮುಂದಿನ ದಿನಗಳ ಬಗ್ಗೆ ಭವಿಷ್ಯ ನುಡಿಯಲು ನಿರಾಕರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more