ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘103 ಖುಷಿಯಿಂದ ಕಳೆದ ಮೂರ್ತಿರಾಯರೊಂದಿಗೆ ಮಾತುಕತೆ’

By Staff
|
Google Oneindia Kannada News

Good is God A.N. Murthy Raoದೇವರು ಅಂದಾಕ್ಷಣ ನೆನಪಿಗೆ ಬರುವವರೇ ಎ.ಎನ್‌.ಮೂರ್ತಿರಾವ್‌. ದಶಕಗಳ ಹಿಂದೆ ಎಲ್ಲರೂ ದೈವಭಕ್ತಿಯ ಬಗ್ಗೆ ಪುಂಖಾನುಪುಂಖವಾಗಿ ಚರ್ಚೆಗಿಳಿದಿದ್ದಾಗಲೇ ‘ದೇವರು’ ಎಂಬ ವೈಚಾರಿಕ ನೆಲೆಗಟ್ಟಿನ ಪುಸ್ತಕ ಬರೆದು ದೇವರ ಅಸ್ತಿತ್ವವನ್ನೇ ಪ್ರಶ್ನಿಸಿದವರು ಮೂರ್ತಿರಾವ್‌. ‘ತುಂಬಿದ ಕೊಡ’ ಮೂರ್ತಿರಾಯರು 103 ವರ್ಷಕ್ಕೆ ಕಾಲಿಟ್ಟ (ಜೂನ್‌ 16)ಸಂದರ್ಭದಲ್ಲಿ ಅವರೊಂದಿಗೆ ಪುಟ್ಟ ಮಾತುಕತೆ ; ನಾಲ್ಕೇ ನಾಲ್ಕು.

ನಿಮ್ಮ ಪ್ರಕಾರ ದೇವರು ಅಂದರೆ ಏನು?
ಯಾರಾದರೂ ತುಂಬ ಸಂಕಟದಲ್ಲಿರುವಾಗ ಅವರ ಬಳಿ ಹೋಗಿ ಸುಖ-ದುಃಖ ವಿಚಾರಿಸುವಂತಹ ಒಳ್ಳೆಯ ಯೋಚನೆಯೇ ದೇವರು.

ಅಂದರೆ ನಿಮ್ಮ ಕಲ್ಪನೇಲಿ ದೇವರು ಇದ್ದಾನೆ ಅಂತ ಅರ್ಥವಾ? ದೇವರಿದ್ದಾನೆ ಅಂದರೆ ಆತ ಏನು ಮಾಡ್ತಿದ್ದ ಅಂತೀರಿ?
ದೇವರು ಇದ್ದಾನಾ ಇಲ್ಲವಾ ಅನ್ನೋದರ ಬಗ್ಗೆ ಚರ್ಚೆ ಬೇಡ. ನಂಬಿದವರ ಪಾಲಿಗೆ ಇದ್ದಾನೆ. ನಂಬದವರ ಪಾಲಿಗೆ ಇಲ್ಲ . ನನಗನ್ನಿಸಿದಂತೆ ದೇವರು ನಿಜಕ್ಕೂ ಇದ್ದಿದ್ರೆ ಭೂಮಿಯ ಮೇಲೆ ಉಂಟಾಗೋ ಅನಾಹುತಗಳನ್ನು ತಡೀತಿದ್ದ .

ಭಯೋತ್ಪಾದನೆ, ಕೋಮು ಅಟ್ಟಹಾಸದ ನೆಪದಲ್ಲಿ ನಿತ್ಯವೂ ತೀರಾ ಸಾಮಾನ್ಯ ಅನನೋ ಹಾಗೆ ಈಗ ಅನಾಹುತಗಳು ನಡೀತಾನೇ ಇವೆ. ಈ ಸಂದರ್ಭದಲ್ಲಿ ಸಾಹಿತಿಯ ಜವಾಬ್ದಾರಿ ಏನು?
ಭಯೋತ್ಪಾದನೆಯನ್ನು ಸಾಹಿತಿ ಖಂಡಿಸಬೇಕು. ಅನಾಹುತಗಳನ್ನ ನೋಡಿಯೂ ನೋಡದವನಂತೆ ಕೂರಬಾರದು.

103 ವರ್ಷಗಳ ಬದುಕಿನತ್ತ ಒಮ್ಮೆ ಹಿಂತಿರುಗಿ ನೋಡಿದರೆ ಏನನ್ನಿಸುತ್ತೆ ?
ಈವರೆಗೂ ಸಂಭ್ರಮದಿಂದಲೇ ಕಳೆದಿದ್ದೀನಿ. ಮುಂದಿನ ದಿನಗಳನ್ನೂ ಹೀಗೇ ಕಳೀಬೇಕು ಅನ್ನಿಸುತ್ತೆ .
(ವಿಜಯ ಕರ್ನಾಟಕ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X