ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ.ಎಸ್‌.ಶಿವರುದ್ರಪ್ಪನವರ ವಿಶ್ರಾಂತ ಜೀವನ .. ಅವರ ಮಾತುಗಳಲ್ಲೇ..

By Staff
|
Google Oneindia Kannada News

*ದಿನೇಶ್‌ ಕೆ. ಕಾರ್ಯಪ್ಪ

G.S. Shivarudrappa‘ಮೊದಲನೆಯದಾಗಿ ಟೈಂಪಾಸ್‌ ಮಾಡಲು ಟೈಮೇ ಸಿಗುತ್ತಿಲ್ಲ. really there is no time to spend’ ಎಂದೇ ಮಾತಿಗಾರಂಭಿಸುತ್ತಾರೆ ಕವಿ ಡಾ. ಜಿ. ಎಸ್‌. ಶಿವರುದ್ರಪ್ಪ.

‘ನಿವೃತ್ತನಾದ ಮೇಲೆ ಕೆಲಸವೇ ಇರೊಲ್ಲ. ಸಮಯವನ್ನು ಆರಾಮವಾಗಿ ಕಳೆಯಬಹುದು ಅನ್ನೋದು ಎಲ್ಲರ ಸಾಮಾನ್ಯ ಭಾವನೆ. ಆದರೆ ಸಾಹಿತಿಗಳ ಮಟ್ಟಿಗೆ ಇದು ಸುಳ್ಳು. ಅವರಿಗೆ ಸದಾ ಓದೋದು, ಬರೆಯೋದು ಇದ್ದೇ ಇರುತ್ತೆ’ ಎನ್ನುತ್ತಾರೆ.

ಓದು ಬರಹದ ಹುಚ್ಚಿರೋದರಿಂದ ಹೊಸ ಪುಸ್ತಕ ಬರೆದವರು ಅಭಿಪ್ರಾಯ ತಿಳಿಸಿ ಎಂದು ಪುಸ್ತಕ ಕಳಿಸ್ತಾನೇ ಇರ್ತಾರೆ. ಆದ್ದರಿಂದ ಜವಾಬ್ದಾರಿ ಇರುತ್ತದೆ. ಇದಿಷ್ಟೇ ಸಾಲದು ಅನ್ನೋ ಹಾಗೆ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು, ಭಾಷಣ ಮಾಡುವುದು ಪುಸ್ತಕ ಬಿಡುಗಡೆ ಮಾಡುವುದು ಇದ್ದದ್ದೇ ಎನ್ನುವ ಜಿಎಸ್ಸೆಸ್‌ಗೆ ಪ್ರವಾಸ ಮಾಡುವುದು ಬಹಳ ಇಷ್ಟ.

‘ಆರೋಗ್ಯ ಚೆನ್ನಾಗಿ ಇರುವಾಗ ರಾಷ್ಟ್ರ ಮತ್ತು ವಿದೇಶ ಪ್ರವಾಸ ಕೈಗೊಳ್ಳುತ್ತೇನೆ. ಹೊಸ ಸ್ಥಳ ವೀಕ್ಷಣೆ, ಹೊಸ ಜನರ ಪರಿಚಯ ಮನಸ್ಸಿಗೆ ಖುಷಿ ಕೊಡುತ್ತದೆ’ ಎಂದು ಶಿವರುದ್ರಪ್ಪ ಹೇಳುತ್ತಾರೆ.

‘ಚಲನ ಚಿತ್ರ ನೋಡುವ ಹವ್ಯಾಸ ಇಲ್ಲ. ಒಮ್ಮೊಮ್ಮೆ ನೋಡೋಣ ಅನಿಸಿದರೂ, ಈ ಊರಿನಲ್ಲಿ ನೋಡೋದು ಹೇಗೆ ಅಂತ ಭಯವಾಗುತ್ತದೆ. ಈ ಊರಿನಲ್ಲಿ ಸಿನೆಮಾ ನೋಡೋದು ದೊಡ್ಡ ಹಿಂಸೆ. ಇದು ಪ್ರಯಾಸದ ಕೆಲಸ. ಏನನ್ನುತ್ತೀರಿ’ ಪ್ರಶ್ನಿಸುತ್ತಾರೆ.

‘ಬಿಡುವು ದೊರೆತಾಗ ಸಂಗೀತ ಕಾರ್ಯಕ್ರಮಗಳಿಗೆ ಹೋಗುತ್ತೇನೆ. ‘ಈ ಟೀವಿ’ ಯ ‘ಗರ್ವ’ ಧಾರಾವಾಹಿಯನ್ನು ತಪ್ಪದೇ ನೋಡುತ್ತಿದ್ದೆ. ಅದೀಗ ಮುಗಿಯಿತು. ಮೊಮ್ಮಕ್ಕಳೊಂದಿಗೆ ಕಾಲ ಕಳೆಯೋಣ ಎಂದರೆ ಮಕ್ಕಳೆಲ್ಲರೂ ವಿದೇಶದಲ್ಲಿದ್ದಾರೆ. ಜಾಗತೀಕರಣದ ಪ್ರಭಾವದಿಂದ ಪರಿತಪಿಸುತ್ತಿರುವ ಪೋಷಕರಲ್ಲಿ ನಾನೂ ಒಬ್ಬನಾಗಿದ್ದೇನೆ’ ಎಂದು ನೋವು ತೋಡಿಕೊಳ್ಳುತ್ತಾರೆ. ಎಲ್ಲದರಲ್ಲಿಯೂ ಸರಳತೆಯನ್ನು ಇಷ್ಟಪಡುವ ಜಿಎಸ್ಸೆಸ್‌ ಅವರಿಗೆ ಸರಳವಾದ ಊಟ ರುಚಿಯೋ ರುಚಿ.
(ವಿಜಯಕರ್ನಾಟಕ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X