• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಟ್ಸ್‌ಕನ್ನಡ ಡಾಟ್‌ ಕಾಂನ ಕಥೆಗಾರನಿಗೆ ಕೈತಪ್ಪಿದ ಮೊದಲ ಬಹುಮಾನ !

By Staff
|

ಕಥೆಗಾರರಿಗೆ ಈ ಪರಿಯಾಗಿ ಬೆನ್ನು ತಟ್ಟುವ ಪ್ರಯತ್ನ ಮುಂಚೆ ನಡೆದಿರಲಿಲ್ಲ- ಪತ್ರಿಕೆಯ ಪ್ರತಿಗಳ ಬಿಕರಿಯಲ್ಲಿ ನಾಗಾಲೋಟದಲ್ಲಿ ಸಾಗುತ್ತಾ, ಸೋದರ ಪತ್ರಿಕೆಗಳ ನಿದ್ದೆ ಕೆಡಿಸಿರುವ ‘ವಿಜಯ ಕರ್ನಾಟಕ’ ಈ ಕೆಲಸವನ್ನೂ ಮಾಡಿದೆ. ಮೊದಲ ಬಹುಮಾನದ ಕಥೆಗೆ 25 ಸಾವಿರ ರುಪಾಯಿ, ಎರಡನೇ ಹಾಗೂ ಮೂರನೇ ಬಹುಮಾನ ಪಡೆದಿರುವ ಕಥೆಗಳಿಗೆ ಕ್ರಮವಾಗಿ 20 ಮತ್ತು 15 ಸಾವಿರ ರುಪಾಯಿ!

ಇಂಥದೊಂದು ಪ್ರತಿಷ್ಠಿತ ಸ್ಫರ್ಧೆಯಲ್ಲಿ ಜಯ ದೊರಕಿಸಿಕೊಂಡ ಸಂತೋಷ ನಮ್ಮ ಪಾಲಿಗಿದೆ. ದಟ್ಸ್‌ಕನ್ನಡ ಡಾಟ್‌ ಕಾಂ ಹಾಗೂ ಸೂಜಿಮಲ್ಲಿಗೆ ಬಳಗದ ಹಿರಿಯ ಉಪಸಂಪಾದಕ ರಘುನಾಥ ಚ.ಹ. ಎರಡನೇ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

‘ಪ್ರಜಾವಾಣಿ’ ನಡೆಸುವ ದೀಪಾವಳಿ ಕಥಾ ಸ್ಪರ್ಧೆ ಹಾಗೂ ‘ಕನ್ನಡ ಪ್ರಭ’ದ ಸಂಕ್ರಾಂತಿ ಕಥಾ ಸ್ಪರ್ಧೆಗೆ ತಮ್ಮವೇ ಆದ ಖದರಿದೆ, ನಿಜ. ಆದರೆ ಅವೆಲ್ಲವನ್ನೂ ಮೀರಿ ದೊಡ್ಡ ಬಹುಮಾನದ ಮೊತ್ತವನ್ನು ಕನ್ನಡ ಕಥಾ ಸ್ಪರ್ಧೆಯಾಂದಕ್ಕೆ ಇದೇ ಮೊದಲ ಬಾರಿಗೆ ವಿನಿಯೋಗಿಸಿರುವ ಅಗ್ಗಳಿಕೆ ವಿಜಯ ಕರ್ನಾಟಕದ್ದು.

ಸ್ಪರ್ಧೆಗೆ ಪತ್ರಿಕೆ ಕಥೆಗಳನ್ನು ಕರೆದಾಗಲೇ ಕನ್ನಡ ಸಾರಸ್ವತ ಲೋಕದಲ್ಲಿ ಮಿಂಚು ಸಂಚಾರವಾಗಿತ್ತು. ಅತಿರಥ ಮಹಾರಥ ಎನಿಸಿಕೊಂಡ ಕಥೆಗಾರರೂ/ಗಾರ್ತಿಯರೂ ಖಂಡಿತ ಒಂದು ಕೈ ನೋಡೇ ನೋಡುತ್ತಾರೆ ಎಂಬ ಮಾತು ಊರೆಲ್ಲ ಸುಳಿದಾಡಿತ್ತು. ಅನಂತ ಮೂರ್ತಿ ಕೂಡ ಕಥೆ ಕಳಿಸ್ತಾರ್ರಿ...ಅಂತ ಸಾಹಿತ್ಯ ಅಕಾಡೆಮಿ ಕಾರಿಡಾರ್ಸ್‌ ನಲ್ಲಿ ಮಾತುಕತೆ ಕೇಳಿಬಂದಿತ್ತು. ಅವರ ಕಥೆಯೂ ಸ್ಪರ್ಧಾಕಣದಲ್ಲಿ ಇತ್ತೋ ಇಲ್ಲವೋ ಗೊತ್ತಾಗಿಲ್ಲ.

ವಿಜಯ ಕರ್ನಾಟಕ ಈ ಯುಗಾದಿಗೆ ಕೊಟ್ಟದ್ದು ಅಕ್ಷರಶಃ ಶಾಕ್‌. ಕಥಾ ಸ್ಪರ್ಧೆಯ ಫಲಿತಾಂಶ ಗೊತ್ತಾಗಿದ್ದು ಅಂದಿನ ಪತ್ರಿಕೆ ಓದಿದವರಿಗೆ ಮಾತ್ರ. ಅದಕ್ಕೆ ಮುಂಚೆ ಪ್ರಶಸ್ತಿ ಪಡೆದವರಿಗೂ ಸುದ್ದಿ ಮುಟ್ಟಿಸಲಿಲ್ಲ. ಸ್ಪರ್ಧೆಯಲ್ಲಿ ಬಹುಮಾನ ಗೆದ್ದವರಿಗೆ ಇದು ಮರೆಯಲಾಗದ ಯುಗಾದಿ; ನಮಗೂ. ಕವಿ ಎಚ್‌.ಎಸ್‌.ವೆಂಕಟೇಶ ಮೂರ್ತಿ ಹಾಗೂ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ತೀರ್ಪುಗಾರರು. ಕಥಾ ಸ್ಪರ್ಧೆಗೆ ಸುಮಾರು 1200 ಕತೆಗಳು ಬಂದಿದ್ದವು. ಇದು ಅಭೂತಪೂರ್ವವಾದ ಉತ್ಸಾಹ ಎನ್ನುತ್ತಾರೆ ಸಂಪಾದಕ ವಿಶ್ವೇಶ್ವರ ಭಟ್‌. ಬಹುಮಾನ ವಿಜೇತರಿಗೆ ಅಂಚೆ ಮೂಲಕ ಚೆಕ್‌ ಕಳಿಸಿ ಅಲ್ಲಿಗೆ ಮುಗಿಯಿತು ಎನ್ನುವುದು ನಮಗೆ ಇಷ್ಟವಾಗುವುದಿಲ್ಲ. ಸದ್ಯದಲ್ಲೇ ಒಂದು ಸಮಾರಂಭ ಏರ್ಪಡಿಸಿ ವಿಜೇತರಿಗೆ ಬಹುಮಾನ -ಸಮ್ಮಾನ ಮಾಡುವ ಕಾರ್ಯಕ್ರಮವಿದೆ ಎನ್ನುತ್ತಾರೆ ಸಂಪಾದಕರು. ಅಂದಹಾಗೆ, ತೀರ್ಪುಗಾರರ ಮೆಚ್ಚುಗೆಗೆ ಅರ್ಹವಾದ ಕಥೆಗಾರ, ಕಥೆಗಾರ್ತಿಯರಿಗೆ ಒಂದು ಸಾವಿರ ರೂ ಬಹುಮಾನವನ್ನೂ ನೀಡುವ ಉದ್ದೇಶ ಪತ್ರಿಕೆಯದು.

ಬಹುಮಾನಿತ ಕಥೆಗಳು ಹೀಗಿವೆ...

ಪ್ರಥಮ ಬಹುಮಾನ : ಸುಮಂಗಲಾ ಬಾದರದಿನ್ನಿ, ವಿಜಾಪುರ (ಚೌಕಟ್ಟಿನಿಂದ ಹೊರಬಂದ ಚಿತ್ರ)- 25 ಸಾವಿರ ರುಪಾಯಿ.
ದ್ವಿತೀಯ ಬಹುಮಾನ : ರಘುನಾಥ ಚ.ಹ., ಶಿರಾ (ಕಾಡ ನಡುವಿನ ಮಳೆ)- 20 ಸಾವಿರ ರುಪಾಯಿ.
ತೃತೀಯ ಬಹುಮಾನ : ಮೊಗಳ್ಳಿ ಗಣೇಶ್‌, ಹಂಪಿ (ಪ್ರಾಣ ಪಕ್ಷಿಯ ತೊಟ್ಟಿಲು)- 15 ಸಾವಿರ ರುಪಾಯಿ.

ಮೆಚ್ಚುಗೆ ಪಡೆದ ಹತ್ತು ಕಥೆಗಳು-
ಮೆಂಕಟ್ರಮಣ ಮೋಂಟಡ್ಕ, ಸುಳ್ಯ (ಸೊ ೖರನೂ ಈ ನಾಯಿನೂ)
ಕೃಷ್ಣಮೂರ್ತಿ ಹನೂರು, ಮೈಸೂರು (ಉರಿವ ಜ್ಯೋತಿಗೆ ಅರ್ಧ)
ಉಮಾರಾವ್‌, ಬೆಂಗಳೂರು (ಅಂತರ್ಜಾಲ)
ಶಾಂತಾ ನಾಗರಾಜ್‌, ಬೆಂಗಳೂರು (ಗೊಂದಲ)
ಗಂಗಾಧರ ಬೀಚನಹಳ್ಳಿ, ತುಮಕೂರು (ಪಟಾಸ)
ಜಯಶ್ರೀ ಕಾಸರವಳ್ಳಿ, ಚೆನ್ನೈ (ಕಿರೀಟ)
ಡಾ। ಟಿ.ಗೋವಿಂದರಾಜು, ಬೆಂಗಳೂರು (ಇನ್ನೇನು ಸಾಯುವವನು)
ಎಸ್‌.ದಿವಾಕರ್‌, ಚೆನ್ನೈ (ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು)
ಗಣೇಶ್‌ ಯಲ್ಲಾಪುರ, ಬೆಂಗಳೂರು (ಅಪೂರ್ಣಮಿದಂ)
ವಿನಾಯಕ ಭಟ್‌ ತದ್ದಲಸೆ, ಬೆಂಗಳೂರು (ಪಿಂಡ)









ದಟ್ಸ್‌ಕನ್ನಡ ಡಾಟ್‌ ಕಾಂನ ರಘುನಾಥ

ಈ ತುರುಸಿನ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಪಡೆದಿರುವ ರಘುನಾಥ ಚ.ಹ. ನಮ್ಮ ಬಳಗದವರೆಂಬ ಹೆಮ್ಮೆ ನಮ್ಮದು. ಕಳೆದೊಂದು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಸೃಜನಶೀಲ ರಚನೆಯಲ್ಲಿ ಸೈ ಎನಿಸಿಕೊಂಡವರು. ವಿಕ್ರಮ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ‘ಹಕ್ಕು’, ಗುಲ್ಬರ್ಗಾ ವಿವಿಯ ಚಿನ್ನದ ಪದಕ ಬ-ಹು-ಮಾ-ನ ಪಡೆದ ಕಥೆ ‘ಬಯಲು ಆಲಯದೊಳಗೆ’ ರಘುನಾಥ್‌ಗೆ ಹೆಸರು ತಂದುಕೊಟ್ಟವು. ಪತ್ರಿಕೋದ್ಯಮದಲ್ಲೂ ಪಳಗಿರುವ ಇವರದ್ದು ಕವಿ ಹೃದಯ. ‘ಹೊಳೆಯಲ್ಲಿ ಹರಿದ ನೀರು’ ಕವನ ಸಂಕಲನ ಇದಕ್ಕೆ ಸಾಕ್ಷಿ. ಸಾಹಿತ್ಯ ಕೃಷಿಯಲ್ಲಿ ಇವರು ಇನ್ನಷ್ಟು ಹುಲುಸಾದ ಫಲಸನ್ನು ತೆಗೆಯಲಿ ಎಂಬುದು ನಮ್ಮ ಬಳಗದೆಲ್ಲರ ಹಾರೈಕೆ. ನೀವೂ ಹಾರೈಸುವಿರಲ್ಲವೆ?

(ಇನ್ಫೋ ವಾರ್ತೆ)

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more