ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಟೆಸ್ಸಾ ಬರಗೂರು ಕೈಲಿ ಬಾರುಗೋಲು !

By Staff
|
Google Oneindia Kannada News
  • ಕನ್ನಡ ಮಾತನಾಡಲು ಬಾರದ ಸರಕಾರಿ ನೌಕರರಿಗೆ ವೇತನ ಭತ್ಯೆ, ಬಡ್ತಿ ಇಲ್ಲ.
  • ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಅಧಿಕಾರಿಗಳೂ ಕನ್ನಡ ಮಾತನಾಡುವುದು ಕಡ್ಡಾಯ.
  • ಕನ್ನಡ ಮಾತಾಡದ ಅಧಿಕಾರಿಗಳಿಗೆ ದಂಡ.
ಈ ಪರಿಯ ಶಿಸ್ತು - ಶಿಕ್ಷೆ ಒಳಗೊಂಡ ಸುತ್ತೋಲೆಯನ್ನು ಸರ್ಕಾರ ಸದ್ಯದಲ್ಲಿಯೇ ಹೊರಡಿಸಲಿದೆ. ಆನಂತರ ಅಲ್ಲಿ ನೋಡು ಕನ್ನಡ, ಇಲ್ಲಿ ನೋಡು ಕನ್ನಡ.. ಎಲ್ಲೆಲ್ಲೂ ಕನ್ನಡ.. !

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ತಮ್ಮ ಕನ್ನಡ ಅನುಧಿಷ್ಠಾನ ನೀತಿಯ ಬಗ್ಗೆ ವಿವರ ನೀಡುವಾಗ ತಮ್ಮ ಎಂದಿನ ಉತ್ಸಾಹದಿಂದಲೇ ಮಾತನಾಡುತ್ತಿದ್ದರು. ಈವರೆಗೂ ಸಲಹೆ-ಸೂಚನೆ ಮಾತ್ರ ನೀಡುತ್ತಿದ್ದ ಬರಗೂರು ಈಗ ಬಾರುಗೋಲು ಕೈಗೆತ್ತಿಕೊಂಡಿದ್ದಾರಂತೆ. ಈ ಬಾರುಗೋಲಿಗೆ ಸರ್ಕಾರದ ಹೊಸ ಸುತ್ತೋಲೆ ಬಲ ಒದಗಿಸುತ್ತದಂತೆ! ಹಾಗಂತ ಬರಗೂರು ಸಿಪಾಯಿಯಂತೆ ತುಟಿಯುಬ್ಬಿಸಿ ಹೇಳಿದರು.
ಸಿರಿಗನ್ನಡಂ ಗೆಲ್ಗೆ !!!

ಅಧಿಕಾರ ಶಾಹಿ ವರ್ಗದವರಿಗೂ ಈ ಸುತ್ತೋಲೆ ಅನ್ವಯವಾಗುತ್ತದೆ. ಕರ್ನಾಟಕ ನಾಗರಿಕ ಕಾಯ್ದೆಯಡಿಯಲ್ಲಿ ಕಚೇರಿಯಲ್ಲಿ ಕನ್ನಡ ಮಾತನಾಡದೇ ಇರುವುದು ಅಪರಾಧವಾಗುತ್ತದೆ. ಆದರೆ ಖಾಸಗಿ ವಲಯದ ಅಧಿಕಾರಿಗಳನ್ನು ಸರ್ಕಾರ ಶಿಕ್ಷಿಸುವಂತಿಲ್ಲ ಎಂದು ಬರಗೂರು ತಮ್ಮ ಶಕ್ತಿ - ನಿಶ್ಯಕ್ತಿ ಎರಡನ್ನೂ ತೋಡಿಕೊಂಡರು.

ಬರಗೂರು ಹೇಳಿದಂತೆ-
ಮುಖ್ಯ ಕಾರ್ಯದರ್ಶಿ ಎ. ರವೀಂದ್ರ ಅವರು ಜೂನ್‌ 13ರಂದು ಹೊರಡಿಸಿರುವ ಸುತ್ತೋಲೆಯ ಪ್ರಕಾರ ನೌಕರರು ಕಚೇರಿ ಅವಧಿಯಲ್ಲಿ ಕನ್ನಡ ಬಳಸದೇ ಇದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕಿದೆ. ಅಲ್ಲದೆ, ನೌಕರನಿಗೆ ನೀಡಲಾಗುವ ಶಿಕ್ಷೆಯನ್ನು ಆತನ ಖಾಸಗಿ ವರದಿಯಲ್ಲಿ ಉಲ್ಲೇಖಿಸಲಾಗುವುದು.

ಕನ್ನಡ ಬಳಕೆ ಕಡ್ಡಾಯ ಎಂದು ಘೋಷಿಸುವ ಸುತ್ತೋಲೆಯಡಿ ರಾಜ್ಯ ಸರಕಾರದ ವಿವಿಧ ವಿಭಾಗೀಯ ಕಚೇರಿಗಳು, ವಿಶ್ವ ವಿದ್ಯಾಲಯಗಳು, ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುವ ಕಚೇರಿಗಳು, ಸರಕಾರಿ ಉದ್ದಿಮೆಗಳು, ವಿವಿಧ ಕಾರ್ಪೊರೇಷನ್‌ ಮಂಡಳಿಗಳು ಬರುತ್ತವೆ. 1963 ರಲ್ಲಿ ಕನ್ನಡವನ್ನು ರಾಜ್ಯದ ಆಡಳಿತ ಭಾಷೆಯನ್ನಾಗಿ ಘೋಷಿಸಿದ ನಂತರ ಪ್ರಪ್ರಥಮ ಬಾರಿಗೆ ಸರಕಾರವು ಕನ್ನಡದ ಅಳವಡಿಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಎಲ್ಲ ಸರಿ. ಕನ್ನಡವನ್ನು ಬಳಸದೇ ಇರುವ ಸಚಿವ ಮಹಾಶಯರ ವಿರುದ್ಧ ಪ್ರಾಧಿಕಾರ ಏನು ಕ್ರಮ ಕೈಗೊಳ್ಳುತ್ತವೆ?

‘ ಸಚಿವರು ಈ ಸುತ್ತೋಲೆಯಡಿಯಲ್ಲಿ ಬರುವುದಿಲ್ಲವಾದ್ದರಿಂದ, ಅವರನ್ನು ಶಿಕ್ಷಿಸುವ ಅಧಿಕಾರ ಪ್ರಾಧಿಕಾರಕ್ಕಿಲ್ಲ. ಆದರೆ ಕನ್ನಡವನ್ನೇ ಬಳಸುವಂತೆ ಅವರಿಗೆ ಸಲಹೆ ಮಾಡುತ್ತೇವೆ ’ ಎಂದರು ಬರಗೂರು.
ಅಲ್ಲಿಗೆ ತಮ್ಮ ಸಲಹೆ ನೀಡುವ ಚಾಳಿಯನ್ನು ಅವರು ಮುಂದುವರಿಸುತ್ತಾರೆ ಎಂದಾಯಿತು!!

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X