ಮನಸ್ಸಿಗೆ ಬಂದರೆ ಬರೆಯುತ್ತೇನೆ, ಬೇಕಾದ್ರೆ ಓದಿ ಬೇಡದಿದ್ರೆಬಿಡಿ : ತೇಜಸ್ವಿ

Posted By:
Subscribe to Oneindia Kannada

*ಇನ್ಫೋ ಇನ್‌ಸೈಟ್‌

ಬೆಂಗಳೂರು : ‘ದಿವ್ಯ’ ಕಾದಂಬರಿಯಲ್ಲಿ ಡಾ. ಯು.ಆರ್‌. ಅನಂತ ಮೂರ್ತಿ ಅವರು ಬರೆಯ ಬ್ರಾಹ್ಮಣ್ಯವನ್ನೇ ಮೆರೆದಿದ್ದಾರೆ ಎಂದು ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಅವರು ಆಪಾದಿಸಿದ್ದಾರೆ.

ಭಾರತ ಯಾತ್ರಾಕೇಂದ್ರ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕುವೆಂಪು ಅವರ ಕಾದಂಬರಿಯಲ್ಲಿ ಬ್ರಾಹ್ಮಣ್ಯ ಎದ್ದು ಕಾಣುತ್ತಿದೆ ಎಂದು ಇತ್ತೀಚೆಗೆ ಅನಂತ ಮೂರ್ತಿ ಲೇಖಕರೊಬ್ಬರಿಗೆ ಬರೆದ ಖಾಸಗಿ ಪತ್ರದಲ್ಲಿ ಹೇಳಿದ್ದಾರೆ. ಆ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಸಭಿಕರೊಬ್ಬರು ಪ್ರಶ್ನಿಸಿದಾಗ, ಅನಂತಮೂರ್ತಿಯವರ ಸಣ್ಣತನದ ಬಗ್ಗೆ ತೇಜಸ್ವಿ ಬೇಜಾರು ಮಾಡಿಕೊಂಡರು.

ಕುವೆಂಪು ಅವರ ವಿಶ್ವಮಾನವ ತತ್ವವನ್ನು ಎಷ್ಟು ಅಷ್ಟಮಠಗಳ ಜಗದ್ಗುರುಗಳು ಒಪ್ಪಿದ್ದಾರೆ ಹೇಳಿ. ಬೀಡಿ ಸಿಗರೇಟು ಸೇದದೇ ಇರುವುದೇ ಬ್ರಾಹ್ಮಣಿಕೆಯೇ ? ಎಂದು ತೇಜಸ್ವಿ ಪ್ರಶ್ನಿಸಿದರು. ಇತ್ತೀಚೆಗೆ ನಿಮ್ಮಿಂದ ಕಡಿಮೆ ಬರಹಗಳು ಬರುತ್ತಿವೆಯೆನ್ನುವ ಪ್ರಶ್ನೆಗೆ ಮತ್ತೊಮ್ಮೆ ಕೋಪ ಮಾಡಿಕೊಂಡ ತೇಜಸ್ವಿ, ಹಿಂದೆಯೂ ಸಾಹಿತ್ಯ ಅಂತ ನಾನು ಕುಣಿದಿಲ್ಲ. ಮನಸ್ಸಿಗೆ ಬಂದರೆ ಬರೆಯುತ್ತೇನೆ, ಇಲ್ಲಾಂದ್ರೆ, ಇಲ್ಲ. ನೀವು ಬೇಕಿದ್ದರೆ ಓದಿ, ಇಲ್ಲದೇ ಇದ್ರೆ ಬಿಡಿ ಎಂದು ಖಾರವಾಗಿ ನುಡಿದರು. ಪ್ರಸ್ತುತ ರಾಜಕೀಯದತ್ತ ಮಾತು ಹೊರಳಿದಾಗ, ತಮ್ಮ ಅಭಿಪ್ರಾಯಗಳನ್ನು ತೇಜಸ್ವಿ ಸಭಿಕರೊಂದಿಗೆ ಹಂಚಿಕೊಂಡರು :

  • ರೈತರ ಆತ್ಮಹತ್ಯೆಗೂ ಸಾಲಕ್ಕೂ ಸಂಬಂಧ ಇಲ್ಲ. ಸಾಲದ ತೊಂದರೆಯಾದರೆ, ಸಾಲ ಕೊಟ್ಟವನು ಸಾಯಬೇಕೇ ವಿನಃ ಇಸ್ಕೊಂಡವನು ಸಾಯಬೇಕಿಲ್ಲ.
  • ಸಾಧುಗಳು, ಸಂತರು, ಬೈರಾಗಿಗಳು, ಅಧಿಕಾರಕ್ಕೆ ಬಂದರೆ ನಮ್ಮ ದೇಶಕ್ಕೂ ಅಫ್ಘಾನಿಸ್ತಾನದ ಸ್ಥಿತಿ ಬಂದೀತು. ಹಿಂದೂವಾದವಾಗಲೀ, ಇಸ್ಲಾಂವಾದವಾಗಲೀ ಈಗಿರುವ ಕೋಮುವಾದಕ್ಕೆ ಪರಿಹಾರವಲ್ಲ. ಜಾತ್ಯತೀತ ಚಳವಳಿಯಾಂದೇ ಶಾಂತಿ ಹರಡಬಲ್ಲುದು.
  • ಧರ್ಮ ಶ್ರದ್ಧೆಯೆಂಬುದು ಆಧುನಿಕ ಸಂಸ್ಕೃತಿಗೆ ಸವಾಲಾಗಿದೆ. ಈ ಧರ್ಮ ಶ್ರದ್ಧೆಯನ್ನು ಉಳಿಸಬೇಕಾದರೆ ಧರ್ಮ ದ್ವೇಷಿಗಳಾಗಬೇಕು.
  • ಧಾರ್ಮಿಕ ಹಿಂಸಾಚಾರದ ವಿರುದ್ಧ ಜಾತ್ಯತೀತವಾದಿಗಳು ಮತಾಂತರದ ಬೆದರಿಕೆ ಹಾಕಬೇಕು. ಇನ್ನೊಬ್ಬರಿಗೆ ಚೂರಿ ಹಾಕಬಾರದು, ಹಿಂಸೆ ಮಾಡಬಾರದು ಎಂಬುದನ್ನು ಬೈಬಲ್‌ ಅಥವಾ ಭಗವದ್ಗೀತೆ ಓದಿ ತಿಳಿಯಬೇಕಿಲ್ಲ. ಮಾನವೀಯತೆ ಗೊತ್ತಿದ್ದರೆ ಸಾಕು.
  • ನನ್ನದು ನಾಚಿಕೆ ಸ್ವಭಾವ. ಹಾರ ಹಾಕುವುದು, ಆರತಿ ಎತ್ತುವುದು ಎಲ್ಲ ನಂಗೆ ಮುಜುಗರವಾಗುತ್ತದೆ. ಅದಕ್ಕೇ ರಾಜಕಾರಣಿಗಳಿಂದ ಪಂಪ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದೆ.
ಏಳೆಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ತೇಜಸ್ವಿಯವರು ಭಾಗವಹಿಸಿರಲಿಲ್ಲ. ಭಾನುವಾರದ ಸಂವಾದ ಕಾರ್ಯಕ್ರಮದಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ವೇದಿಕೆಯಲ್ಲಿ ಮನ್ವಂತರ ಧಾರಾವಾಹಿ ನಿರ್ದೇಶಕ ಟಿ.ಎನ್‌. ಸೀತಾರಾಂ, ವಿಧಾನ ಪರಿಷತ್‌ನ ಸಭಾಪತಿ ಬಿ.ಎಲ್‌. ಶಂಕರ್‌ ಇದ್ದರು.

ತೇಜಸ್ವಿಯವರ ಅಭಿಪ್ರಾಯಗಳನ್ನು ನೀವು ಒಪ್ಪುವಿರಾ?

ವಾರ್ತಾ ಸಂಚಯ
ವಿಮರ್ಶಕರಿಗೆ ದಕ್ಕದ, ಓದುಗರಿಗೆ ಮಿಕ್ಕುವ ಅಪ್ಪನಿಗೆ ತಕ್ಕ ಮಗ !
ಪಂಪ ಪ್ರಶಸ್ತಿಗೆ ಪೂರ್ಣಚಂದ್ರ ತೇಜಸ್ವಿ ಅರ್ಧಚಂದ್ರ
ಅತ್ಯಂತ ದುಬಾರಿ ಕಾದಂಬರಿಕಾರ....
ಈ ಸಾರಿನೋಟು ನಕಲಿಯಲ್ಲ!

Click here to go to top
ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ