ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ಸಲ್ಲಿ ಕವಿ ಸೂಕ್ತಿ , ಜನ ಸಾಮಾನ್ಯರಿಗೆ ಪರಂರಪರೆಯ ಅರಿವು- ಜಿಎಸ್ಸೆಸ್‌

By Staff
|
Google Oneindia Kannada News

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಕನ್ನಡ ಕವಿಗಳ ಉಕ್ತಿಗಳನ್ನು ಬರೆಸುವ ಮೂಲಕ ಜನ ಸಾಮಾನ್ಯರಲ್ಲಿ ಕನ್ನಡ ಪರಂಪರೆಯ ಬಗೆಗೆ ಜಾಗೃತಿ ಮೂಡಿಸಬೇಕೆಂದು ಹಿರಿಯ ಕವಿ ಡಾ. ಜಿ.ಎಸ್‌.ಶಿವರುದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಬಸ್ಸುಗಳಲ್ಲಿ ಕವಿ ಸೂಕ್ತಿ ಬರೆಸುವ ಆಂದೋಲನವನ್ನು ಪಿಜಿಆರ್‌ ಸಿಂಧ್ಯಾ ಸಾರಿಗೆ ಸಚಿವರಾಗಿದ್ದಾಗ ಜಾರಿಗೆ ತಂದಿದ್ದರು. ಈ ನೀತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ್ದ ಕಾರ್ಮಿಕ ಕವಿ ಸಾಹಿತಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಶಿವರುದ್ರಪ್ಪ ಹೇಳಿದರು.

ಸಾಹಿತ್ಯ ರಚನೆ ದೊಡ್ಡ ವಿಚಾರವೇನೂ ಅಲ್ಲ . ಸಾಹಿತ್ಯ ಆಕಾಶದಿಂದೇನೂ ಉದುರುವುದಿಲ್ಲ . ಮನುಷ್ಯ ತಾನು ಕಂಡು- ಕೇಳಿದ್ದನ್ನೇ ಹೊಸ ರೀತಿಯಲ್ಲಿ ಹೇಳಿದಾಗ ಸಾಹಿತ್ಯ ಎನಿಸಿಕೊಳ್ಳುತ್ತದೆ. ಸಾಹಿತ್ಯದ ಹಿಂದಿರುವ ಶಿಲ್ಪ, ಸಂಗೀತ ಮುಂತಾದ ಕಲಾ ಪ್ರಕಾರಗಳ ಪರಂಪರೆಯ ಅರಿವು ನಮಗಿರಬೇಕು ಎಂದು ಜಿಎಸ್‌ಎಸ್‌ ಹೇಳಿದರು.

ಸಮಾವೇಶದಲ್ಲಿ ಸಂಸ್ಥೆಯ ಕಾರ್ಮಿಕರಾದ ಟಿ.ಎಲ್‌.ಗುಂಡಪ್ಪ , ಟಿ.ಎಂ.ಬಾಲಕೃಷ್ಣ , ಮಾಸ್ತಯ್ಯ ಮಾಳೇಪಾಳ್ಯ, ಹೂಜೇನಹಳ್ಳಿ ಗುಜ್ಜಯ್ಯ, ರಮೇಶ್‌ ಸಾತನೂರು, ಮಲ್ಲಪ್ಪ ಬಸವಂತಪ್ಪ ಅರಭಾವಿ, ಅವರೇಹಳ್ಳಿ ಎಚ್‌.ಗೋವಿಂದರಾಜು, ಎಸ್‌.ಕುಸುಮ ಅವರನ್ನು ಸನ್ಮಾನಿಸಲಾಯಿತು. ಕಸಾಪ ಗೌರವ ಕಾರ್ಯದರ್ಶಿ ಪುಂಡಲೀಕ ಹಾಲಂಬಿ, ಸಾಹಿತಿ ಚಂದ್ರಶೇಖರ ಪಾಟೀಲ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X