ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೀತ ವಿದ್ವಾಂಸರ 33ನೇ ಸಮ್ಮೇಳನಾಧ್ಯಕ್ಷರಾಗಿ ಆರ್‌.ಕೆ.ಪದ್ಮನಾಭ

By Staff
|
Google Oneindia Kannada News

R.K.Padmanabhaಬೆಂಗಳೂರು : ಸಂಗೀತ ವಿದ್ವಾಂಸರ 33ನೇ ಸಮ್ಮೇಳನಾಧ್ಯಕ್ಷರಾಗಿ ವಿದ್ವಾನ್‌ ಆರ್‌.ಕೆ.ಪದ್ಮನಾಭ ಅವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಗಾನಕಲಾ ಪರಿಷತ್‌ ಮತ್ತು ಗಾನಭಾರತಿಯ ಸಹಭಾಗಿತ್ವದಲ್ಲಿ ಮೈಸೂರಿನ ವೀಣೆ ಶೇಷಣ್ಣ ಭವನದಲ್ಲಿ ನವೆಂಬರ್‌ 2ರಿಂದ 6ರವರೆಗೆ 5 ದಿನಗಳ ಕಾಲ ಈ ಸಮ್ಮೇಳನ ನಡೆಯಲಿದೆ.

ಆರ್‌.ಕೆ.ಪದ್ಮನಾಭ : ಒಂದು ಟಿಪ್ಪಣಿ

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಸಂಗೀತಕ್ಕೇ ಮೀಸಲಾದ ವಾದಿರಾಜ ಧ್ಯಾನಮಂದಿರ ಮತ್ತು ಕಲಾಭವನದ ನಿರ್ಮಾಣದ ರೂವಾರಿಯಾದ ಆರ್‌.ಕೆ.ಪದ್ಮನಾಭ, ತ್ಯಾಗರಾಜರ ಕೃತಿಗಳಿಗೆ ರಾಗ ಹಾಕಿ 7 ಕೆಸೆಟ್ಟುಗಳನ್ನು ತಂದಿದ್ದಾರೆ. ಹೊಸ ಜಾವಳಿಗಳನ್ನು ಹೊಸೆದಿರುವ ಇವರು ಕೆಲವು ಪ್ರೇಮಗೀತೆಗಳಿಗೆ ಹಿಂದೂಸ್ತಾನಿ ರಾಗಗಳನ್ನು ಎರವಲು ಪಡೆದು ಸಂಗೀತಕ್ಕೆ ಹೊಸ ವೇಗ ದಕ್ಕಿಸಿಕೊಟ್ಟಿದ್ದಾರೆ. ಕಳೆದ ಬೇಸಗೆಯಲ್ಲಿ ಸಂಗೀತದ ಬಗ್ಗೆ ಆಸಕ್ತಿಯಿರುವ ಮಕ್ಕಳಿಗೆ ವಿಶೇಷ ಬೇಸಗೆ ಶಿಬಿರವನ್ನೂ ಶುರು ಮಾಡಿರುವ ಇವರದ್ದು ಸಂಗೀತ ಕ್ಷೇತ್ರದಲ್ಲಿ ಮರೆಯಬಾರದ ಹೆಸರು.

ಗಾನಕಲಾ ಪರಿಷತ್‌ ತಜ್ಞ ಸಮಿತಿಗೆ ಹೊಸ ಅಧ್ಯಕ್ಷೆ
ಒಂದು ವರ್ಷ ಕಾಲದ ಅವಧಿಗೆ, ಗಾನಕಲಾ ಪರಿಷತ್‌ ಅಧ್ಯಕ್ಷರಾಗಿ ವಿದುಷಿ ರಾಜಲಕ್ಷ್ಮಿ ತಿರುನಾರಾಯಣನ್‌ ಆಯ್ಕೆಯಾಗಿದ್ದಾರೆ. ಮೈಸೂರು ಬಾನಿಯ ವೈಣಿಕರಾಗಿ ಸಂಗೀತಾರಾಧನೆ ಮಾಡಿರುವ ಇವರು ಬೆಂಗಳೂರು ವಿವಿಯ ಸಂಗೀತ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X