• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಚ್ಚಿಡಲಾರದ ಭಾವಗಳ ಬಿಡುಗಡೆಯೇ ಕವಿತೆ -ಎಚ್‌.ಎಲ್‌. ಪುಷ್ಪ

By Staff
|

*ಮಣೀ

ಉಳಿದೆಲ್ಲ ಕವಯತ್ರಿಯರು ನಾಲ್ಕು ಕವನ ಸಂಕಲನ ತಂದು ಪಡೆವ ಜನಪ್ರಿಯತೆಯನ್ನು ‘ಅಮೃತಮತಿ ಸ್ವಗತ’ ಹಾಗೂ ‘ರಾತ್ರಿರಾಣಿ’ ಎಂಬೆರಡು ಕವನ ಸಂಕಲನಗಳಿಂದಲೇ ಪಡೆದವರು ಎಚ್‌.ಎಲ್‌.ಪುಷ್ಪ . ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಪುಷ್ಪರಿಗೆ ಕವಿತೆಯೆಂಬುದು ಪದವಲ್ಲ, ಹಾಡಲ್ಲ , ಸಂಗೀತದ ‘ತನನ’ವೂ ಅಲ್ಲ . ಅವರ ಪಾಲಿಗೆ ಕವಿತೆಯೆಂಬುದು ಮುದ್ದು ಮಗು.
ಪುಷ್ಟ ಅವರೊಂದಿಗೆ ಪುಟ್ಟ ಮಾತುಕತೆ:

ನಿಮ್ಮ ಪ್ರಕಾರ ಕವಿತೆ ಎಂದರೆ?
ಹಲವು ರೀತಿಯ ಯಾತನೆಗಳನ್ನು ಅನುಭವಿಸಿದ ನಂತರ ಕತ್ತಲೆಯ ಗರ್ಭದಿಂದ ಹೊರಜಗತ್ತಿಗೆ ಬಂದು ಬೆಳಕನ್ನು ಅರಗಿಸಿಕೊಳ್ಳಲಾರದ ಎಳೆ ಕೂಸಿನ ಕಸಿವಿಸಿ ಹಾಗೂ ನಿಟ್ಟುಸಿರು ಬಿಡುವ ತಾಯ್ತನದ ಹೆಮ್ಮೆಯೇ ಕವಿತೆ. ಒಂದು ರೀತಿಯ ಒಳಗಿನ ಒತ್ತಡ. ಬಚ್ಚಿಡಲಾರದ ಭಾವಗಳ ಬಿಡುಗಡೆಯೇ ಕವಿತೆ.

ಕವಿತೆಗಳಿಗೆ ನವೋದಯ, ನವ್ಯ, ಬಂಡಾಯ ಅಂತೆಲ್ಲ ವಿಂಗಡಣೆ ಮಾಡ್ತಾರಲ್ಲ , ಅದು ಅಗತ್ಯವಿದೆಯೇ?
ನವೋದಯ, ನವ್ಯ, ಬಂಡಾಯ ಅನ್ನುವ ವಿಂಗಡಣೆ ಸಲ್ಲದು. ಆದರೆ ಆಯಾ ಕಾಲದ ಸಾಮಾಜಿಕ, ರಾಜಕೀಯ, ಒತ್ತಡಗಳಿಗೆ ಕವಿ ಸಹಜವಾಗಿಯೇ ಸ್ಪಂದಿಸುವುದರಿಂದ ಆಯಾ ಸಂದರ್ಭದ ಒತ್ತಡ, ಸಂಭ್ರಮ, ವಿಷಾದ ಕವಿತೆಗಳಲ್ಲಿ ಕಾಣಿಸಿಕೊಳ್ಳಲೇಬೇಕಾಗುತ್ತದೆ.

ಉದಯಭಾರತಿ ರಾಷ್ಟ್ರೀಯ ಪುರಸ್ಕಾರ ಪಡೆದ ಸಂದರ್ಭದ ಸ್ಮರಣೀಯ ಘಟನೆ ಹೇಳಿ?
‘ರಾತ್ರಿ ರಾಣಿ’ ಇಂಗ್ಲೀಷ್‌ ರೂಪದ ಅನುವಾದಕ್ಕೆ ಒರಿಸ್ಸಾದ ಭುವನೇಶ್ವರದಲ್ಲಿ ಈ ಪ್ರಶಸ್ತಿ ಸ್ವೀಕರಿಸಿ ಅಂದಿನ ಒರಿಸ್ಸಾ ರಾಜ್ಯಪಾಲ ಸತ್ಯನಾರಾಯಣ ರೆಡ್ಡಿ ಅವರಿಂದ ಪುರಸ್ಕಾರ ಪಡೆದ ಸಂದರ್ಭದಲ್ಲಿ ತಡವರಿಸಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದೆ . ಬಹುಶಃ ಆ ಸಂದರ್ಭವನ್ನೇ ಸ್ಮರಣೀಯ ಘಟನೆ ಎನ್ನಬಹುದೇನೋ...

ನಿಮ್ಮಲ್ಲಿ ಕವಿತೆ ಹುಟ್ಟುವ ಸಮಯ ಯಾವುದು?
ಕವಿತೆ ಹುಟ್ಟಲು ನಿರ್ದಿಷ್ಟ ಸಮಯವೇನೂ ಇಲ್ಲ . ಕವಿತೆಯ ವಸ್ತು ಒಳಗೆ ಕಾಡುತ್ತಲೇ ಇರುತ್ತದೆ. ಹೊರಬರಲು ತಕ್ಕ ಸಂದರ್ಭ ಬೇಕು ಅಷ್ಟೇ.
(ವಿಜಯ ಕರ್ನಾಟಕ)

ಪುಷ್ಪ ಅವರ ಬಗ್ಗೆ ಇನ್ನಷ್ಟು

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more