• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಸರಗೋಡು ಶಾಲೆಗಳು ನ.1ರಿಂದ ಮಲಯಾಳಿ ಮಯ, ಕನ್ನಡ ಮಾಯ

By Staff
|

ಬೆಂಗಳೂರು : ಕಾಸರಗೋಡಿನಲ್ಲಿ ಮತ್ತೆ ಕನ್ನಡ ಹಾಗೂ ಮಲಯಾಳಂ ಭಾಷೆಯ ತಾಕಲಾಟ. ಕೇರಳ ಸರಕಾರವು ತನ್ನ ರಾಜ್ಯದಲ್ಲಿ ಮಲಯಾಳಂ ಒಂದನ್ನೇ ಆಡಳಿತ ಭಾಷೆ ಎಂದು ಘೋಷಿಸಿ ಆದೇಶ ಹೊರಡಿಸಿದ್ದೇ ಈ ಪೀಕಲಾಟದ ಹೂರಣ.

ಇದರಿಂದ ಕಾಸರಗೋಡಿನಲ್ಲಿರುವ ಕನ್ನಡ ಶಾಲೆಗಳಿಗೆ, ಕನ್ನಡಿಗರಿಗೆ ಪೀಕಲಾಟಕ್ಕಿಟ್ಟುಕೊಂಡಿದೆ. ಸುಮಾರು 500 ಕನ್ನಡ ಶಾಲೆಗಳು ಈ ಆದೇಶದ ಬಗ್ಗೆ ಬೇಜಾರು ಮಾಡಿಕೊಂಡಿವೆ. ಶಾಲೆಯ ಬೋರ್ಡು ಮಲಯಾಳಂನಲ್ಲೇ ಇರಬೇಕು ಹಾಗೂ ಮಲಯಾಳಂ ಮಾತೃಭಾಷೆ ಎಂದು ಪ್ರಮಾಣ ವಚನ ಸ್ವೀಕರಿಸಬೇಕು ಎನ್ನುವ ಆದೇಶ ಶಾಲೆಗಳಿಗೆ ಇರುಸು ಮುರುಸು ತಂದಿದೆ.

ಕೇರಳ ಸರಕಾರದ ಈ ಆದೇಶದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ಆಗಲೇ ಸಿಟ್ಟುಮಾಡಿಕೊಂಡಿದ್ದಾರೆ. ಶಾಲೆಗಳಲ್ಲಿ ಮಲಯಾಳಂ ಬ್ಯಾನರ್‌ಗಳನ್ನೇ ಹಾಕಬೇಕು, ಹಾಗೂ ಆಡಳಿತ ಭಾಷೆಯಾಗಿ ಮಲಯಾಳಂನ್ನೇ ಬಳಸಬೇಕು ಎನ್ನುವ ಕೇರಳದ ಆಜ್ಞೆ ನವೆಂಬರ್‌ 1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ರಾಜ್ಯೋತ್ಸವದಂದೇ ಕನ್ನಡಿಗರ ಮುಖಕ್ಕೆ ಹೊಡೆದಂತೆ ಜಾರಿಗೆ ಬರುವ ಆದೇಶವನ್ನು ಕಾಸರಗೋಡಿನವರು ಹೇಗೆ ಒಪ್ಪಿಕೊಂಡಾರು. ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರು ಈ ಬಗ್ಗೆ ಕೇರಳ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬೇಕು ಎಂಬುದು ಬರಗೂರು ಅವರ ಆಗ್ರಹ.

ಕಾಸರಗೋಡು ಭಾಷಾ ಅಲ್ಪಸಂಖ್ಯಾತರಿರುವ ರಾಜ್ಯ. ಅಲ್ಲಿ ಕನ್ನಡ ಹಾಗೂ ಮಲಯಾಳಂ ಎರಡೂ ಆಡಳಿತ ಭಾಷೆಗಳು. ಹೀಗಿರುವಾಗ ಕೇರಳ ಸರಕಾರವು ಇದ್ದಕ್ಕಿದ್ದ ಹಾಗೆ ಮಲಯಾಳಂನ್ನೇ ಆಡಳಿತ ಭಾಷೆಯೆಂದು ಸಾರಾಸಗಟಾಗಿ ಘೋಷಿಸುವುದು ಹೇಗೆ ಸಾಧ್ಯ?

ಕರ್ನಾಟಕದಲ್ಲೇ ನೋಡಿ. ನಾವೆಂದೂ ಇತರ ಭಾಷೆಯವರ ಮೇಲೇ ಕನ್ನಡವನ್ನು ಹೇರಿಲ್ಲ. ಉರ್ದು ಆಗಲೀ, ಮರಾಠಿಯಾಗಲೀ ಮಾತನಾಡುವವರನ್ನು ಕನ್ನಡವನ್ನೇ ಮಾತೃಭಾಷೆಯೆಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿಲ್ಲ. ಕೇರಳ ಸರಕಾರಕ್ಕೆ ಯಾವುದೇ ರೀತಿಯ ಆದೇಶ ಹೊರಡಿಸುವ ಹಕ್ಕಿದೆ ನಿಜ. ಆದರೆ ಕನ್ನಡ ಭಾಷಿಗರಿರುವ ಕಾಸರಗೋಡಿನಲ್ಲಿ ಈ ಆದೇಶಕ್ಕೆ ವಿನಾಯಿತಿ ಬೇಕೆಂದು ಕೇರಳಕ್ಕೆ ಸಲಹೆ ನೀಡಬಲ್ಲೆವು. ಇದಕ್ಕಿಂತ ಹೆಚ್ಚೇನೂ ಮಾಡುವುದಕ್ಕಾಗುವುದಿಲ್ಲ. ಉಳಿದಂತೆ ಏನಿದ್ದರೂ ಕಾಸರಗೋಡಿನ ಜನತೆಗೆ ಬಿಟ್ಟ ವಿಷಯ ಎಂದು ಬರಗೂರು ಅ ಭಿಪ್ರಾಯ ಪಟ್ಟಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X