• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

’ಕಲಾವಿಭೂಷಣ’ರಾಗಿ ಮತ್ತೆ ರಂಗ ವೇದಿಕೆಯೇರಿದ ಹಿರಣ್ಣಯ್ಯ

By Staff
|

*ನಾಡಿಗೇರ್‌ ಚೇತನ್‌

Master Hirannayya is now Kalavibhushanaಬೆಂಗಳೂರು : ದೂರದರ್ಶನ, ಚಲನಚಿತ್ರ ಇವೆಲ್ಲವೂ ರಂಗಭೂಮಿಗೆ ಆರೋಗ್ಯಕರ ಪ್ರತಿಸ್ಪರ್ಧಿಗಳು. ಇವೆಲ್ಲಕ್ಕೂ ಜಗ್ಗದೆ, ಕುಗ್ಗದೆ ರಂಗ ಕಲೆಯನ್ನು ಪ್ರೋತ್ಸಾಹಿಸಿದರೆ ರಂಗಭೂಮಿಯನ್ನು ಖಂಡಿತವಾಗಿಯೂ ಬೆಳೆಸಬಹುದು. ರಂಗಭೂಮಿ ಯಾವತ್ತೂ ಬರಡಾಗುವುದಿಲ್ಲ, ಅದಕ್ಕೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ.

ಹೀಗಂದವರು ರಂಗ ‘ಭೂಮಿ’ಯಲ್ಲೇ ಹುಟ್ಟಿ, ರಂಗ ಪರಿಸರದಲ್ಲೇ ಬೆಳೆದು, ನಟನಾರಂಗದಲ್ಲೇ ಈಸಿ ಜಯಿಸಿದ ನಟರತ್ನಾಕರ ಮಾಸ್ಟರ್‌ ಹಿರಣ್ಣಯ್ಯ.

ವೃತ್ತಿ ರಂಗಭೂಮಿ ಕಲಾವಿದರು, ವಿಲಾಸಿ ರಂಗಭೂಮಿ ಕಲಾವಿದರು ಅನ್ನುವ ಭೇದವನ್ನು ಕಲಾವಿದರು ಮರೆತು ಒಗ್ಗಟ್ಟಾಗಿ ದುಡಿದರೆ ಮಾತ್ರ ರಂಗಭೂಮಿಯನ್ನು ಜೀವಂತವಾಗಿರಸಬಹುದೆಂಬುದು ಅವರ ಕಿವಿ ಮಾತು.

ಅಕಾಡೆಮಿ ಆಫ್‌ ಮ್ಯೂಸಿಕ್‌ ವತಿಯಿಂದ ಕಲಾವಿಭೂಷಣ ಬಿರುದನ್ನು ಕಳೆದ ಶನಿವಾರ ಸ್ವೀಕರಿಸಿ ಹಿರಣ್ಣಯ್ಯ ಮಾತನಾಡುತ್ತಿದ್ದರು.

ಬೆಂಗಳೂರಿನ ರಸಿಕರಿಗೆ ಕರ್ನಾಟಕದ ಇತರ ಭಾಗಗಳ ನಾಟಕಗಳನ್ನೂ ಉಣಬಡಿಸುವ ಬಗ್ಗೆ ಮಾತನಾಡಿದ ಹಿರಣ್ಣಯ್ಯ, ನಾಟಕ ಕಂಪನಿಗಳೆಂದರೆ ಕೇವಲ ಹಳೇ ಮೈಸೂರು ಅಥವಾ ಬೆಂಗಳೂರಿನ ಕಂಪನಿಗಳೆಂದು ಸೀಮಿತವಾಗಿಬಿಟ್ಟಿವೆ. ಉತ್ತರ ಕರ್ನಾಟಕದಲ್ಲಿಯೂ ಒಳ್ಳೆಯ ಕಂಪನಿಗಳಿವೆ. ಅವುಗಳಿಗೂ ಪ್ರೋತ್ಸಾಹ ನೀಡುವುದು ಅಗತ್ಯ ಎಂದರು.

ಇದಕ್ಕೂ ಮೊದಲು ಮಾತನಾಡಿದ ಅಕಾಡೆಮಿ ಆಫ್‌ ಮ್ಯೂಸಿಕ್‌ನ ಕಾರ್ಯದರ್ಶಿ ಸುಮಾ ಸುಧೀಂದ್ರ, ಸಂಸ್ಥೆ ನಡೆಸಿಕೊಟ್ಟ ಒಂದು ವಾರದ ರಂಜನೀಯ ನಾಟಕಗಳ ಪ್ರದರ್ಶನ ಚೌಡಯ್ಯ ಸ್ಮಾರಕ ನಾಟಕೋತ್ಸವ-2002ಯಶಸ್ವಿಯಾಗಿದ್ದಕ್ಕೆ ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು.

ಕಳೆದ ಸೋಮವಾರದಿಂದ ಶನಿವಾರದವರೆಗೆ (ಜುಲೈ 1ರಿಂದ 6) ಒಟ್ಟು ಆರು ನಾಟಕಗಳನ್ನು (ನಮ್ಮ ನಿಮ್ಮೊಳಗೊಬ್ಬ, ಮದುವೆ ಮದುವೆ, ಆಲ್‌ ದಿ ಬೆಸ್ಟ್‌, ಲಕ್ಷಾಧಿಪತಿ ರಾಜ, ಮಕಮಲ್‌ ಟೋಪಿ ಹಾಗೂ ಶ್ರೀಕೃಷ್ಣ ಸಂಧಾನ) ಅಕಾಡೆಮಿ ಆಫ್‌ ಮ್ಯೂಸಿಕ್‌ ಪಿಟೀಲು ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶಿಸಿತು.

ಇದರ ಯಶಸ್ಸಿನಿಂದ ಉತ್ತೇಜಿತವಾಗಿರುವ ಅಕಾಡೆಮಿ ಆಫ್‌ ಮ್ಯೂಸಿಕ್‌, ಪ್ರತಿ ವರ್ಷವೂ ಜೂನ್‌-ಜುಲೈನಲ್ಲಿ ಇಂತಹ ನಾಟಕೋತ್ಸವವನ್ನು ಪ್ರಾಯೋಜಿಸುವುದಾಗಿ ಸುಮಾ ಸುಧೀಂದ್ರ ಹೇಳಿದರು.

ಇದೇ ಸಂದರ್ಭದಲ್ಲಿ ಅಕಾಡೆಮಿ ಆಫ್‌ ಮ್ಯೂಸಿಕ್‌ನ ಅಧ್ಯಕ್ಷ ಕೆ.ಕೆ. ಮೂರ್ತಿ, ಹಿರಣ್ಣಯ್ಯನವರು ಕಳೆದ ತಿಂಗಳು ಮೈಸೂರಿನಲ್ಲಿ ವ್ಯಕ್ತಪಡಿಸಿದ ನಿವೃತ್ತಿ ಬಯಕೆಯನ್ನು ಪ್ರಸ್ತಾಪಿಸಿದರು.

ಕಲಾವಿದರು ನಾಟಕವನ್ನು ತೊರೆದರೂ ಸಹ ನಾಟಕ ಕಲಾವಿದರನ್ನು ತೊರೆಯುವುದಿಲ್ಲ, ಹಾಗೂ ಇದಕ್ಕೆ ಉತ್ತಮ ಉದಾಹರಣೆ ಮಾಸ್ಟರ್‌ ಹಿರಣ್ಣಯ್ಯ ಎಂದರು. ನಿವೃತ್ತಿ ಘೋಷಿಸಿದ್ದರೂ ಸಹ ರಸಿಕರನ್ನು ರಂಜಿಸಲು ಮತ್ತೆ ರಂಗವೇರಿದ ಹಿರಣ್ಣಯ್ಯನವರನ್ನು ಪ್ರಶಂಸಿದರು.

ರಂಗಭೂಮಿಯಿಂದ ನಿವೃತ್ತನಾದರೇನು. ಕ್ರಿಯಾತ್ಮಕ ಚಟುವಟಿಕೆಗಳಿಗೆ ನಾನೇನು ಟಾ ಟಾ ಹೇಳಿಲ್ಲವಲ್ಲ. ದೇವರ ದಯೆಯಿಂದ ನನ್ನ ಆರೋಗ್ಯ ಚೆನ್ನಾಗಿದೆ. ಕ್ರಿಯಾತ್ಮಕವಾಗಿ ಇನ್ನು ಮುಂದೆಯೂ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ’, ಎಂದು ನಿವೃತ್ತಿ ಘೋಷಿಸಿದ ಮೇಲೆ ಪತ್ರಿಕೆಯಾಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹಿರಣ್ಣಯ್ಯ ಹೇಳಿಕೊಂಡಿದ್ದರು.

ಇದನ್ನೆಲ್ಲಾ ಗಮನಿಸಿದರೆ ಇನ್ನು ಮುಂದೆಯೂ ಸಹ ಲಂಚಾವತಾರಿಯು ನಾಟಕದ ರಸದೌತಣ ಬಡಿಸಬಹುದೆನಿಸುತ್ತದೆ. ಹಾಗೇ ಆಗಲಿ ಅಂತ ಹಾರೈಸೋಣ. ಏನಂತೀರಿ?ರಂಗ ಸಂಚಯ
ರಂಗಭೂಮಿಯಿಂದ ನಾನು ರಿಟೈರಾಗ್ತೇನೆ : ಮಾಸ್ಟರ್‌ ಹಿರಣ್ಣಯ್ಯ

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X