• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯೋತ್ಸವ ಪ್ರಶಸ್ತಿ ವಂಚಿತನ ಆತ್ಮಹತ್ಯೆ ಯತ್ನ

By Staff
|

ಅನರ್ಹರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ , ಇದೇನಾ ರಾಜ್ಯ ಸರ್ಕಾರದ ನೀತಿ ? ಈ ಬಾರಿಯೂ ತಮಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸದೇ ಇರುವುದರಿಂದ ತೀವ್ರ ಅಸಮಾಧಾನಕ್ಕೆ ಒಳಗಾಗಿರುವ ರಂಗಭೂಮಿ ಕಲಾವಿದ ಚಲನಚಿತ್ರ ಪೋಷಕ ನಟ ಕೆ.ಗುರುರಾವ್‌ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪರಿಯಿದು.

ಅನರ್ಹರನ್ನೇ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳನ್ನು ರಾಣಿ ಸತೀಶ್‌ ಆಯ್ಕೆ ಮಾಡಿಲ್ಲ ಎಂದು ದೂಷಿಸಿರುವ ಗುರುರಾವ್‌ ಅವರಿಗೀಗ 70 ವರ್ಷ .

ಕಳೆದ ಆರು ವರ್ಷಗಳಿಂದ ತಮಗೆ ರಾಜ್ಯೋತ್ಸವ ಪ್ರಶಸ್ತಿ ಬರಬಹುದು ಎಂದು ರಾವ್‌ ನಿರೀಕ್ಷಿಸುತ್ತಿದ್ದು , ಈ ಬಾರಿ ಪ್ರಶಸ್ತಿ ಗೆ ಆಯ್ಕೆಯಾಗುವ ಬಗ್ಗೆ ಆಶಾವಾದಿಯಾಗಿದ್ದರು. ಆದರೆ ಈ ಬಾರಿಯೂ ಪ್ರಶಸ್ತಿ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡ ಗುರುರಾಜ್‌, ಬುಧವಾರ (ನ.6) ವಿಧಾನಸೌಧದಲ್ಲಿನ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರ ಕಚೇರಿ ಮುಂದೆ ಪ್ರಶಸ್ತಿ ಆಯ್ಕೆಯನ್ನು ವಿರೋಧಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಸರ್ಕಾರದ ನೀತಿ ಪ್ರತಿಭಟಿಸಿ ಆತ್ಮಾಹುತಿಗೆ ಪ್ರಯತ್ನ ?

ರಾವ್‌ ಪ್ರತಿಭಟನೆ ಶೈಲಿ ವಿಭಿನ್ನ. ಅದು ಧರಣಿ ಸತ್ಯಾಗ್ರಹವಲ್ಲ. ಅನರ್ಹರಿಗೆ ಪ್ರಶಸ್ತಿ ನೀಡಿರುವುದನ್ನು ಖಂಡಿಸಿ ವಿಧಾನ ಸೌಧದ ಮೂರನೇ ಮಹಡಿಯಿಂದ ಕೆಳಗೆ ಹಾರುವುದಾಗಿ ಅವರು ಬೆದರಿಸಿದಾಗ ಅಲ್ಲಿದ್ದವರೆಲ್ಲ ತಬ್ಬಿಬ್ಬು. ಇನ್ನೇನು ರಾವ್‌ ಮೂರನೇ ಮಹಡಿಯಿಂದ ಕೆಳ ಹಾರಬೇಕೆನ್ನುವಷ್ಟರಲ್ಲಿ ಪೊಲೀಸರು ತಕ್ಷಣವೇ ಬಂದು ರಾವ್‌ ಅವರ ಆತ್ಮಹತ್ಯೆ ಪ್ರಯತ್ನವನ್ನು ತಡೆದರು. ನಂತರ ಈ ವಿಷಯವನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿ ಚಿರಂಜೀವ್‌ ಸಿಂಗ್‌ ಗಮನಕ್ಕೆ ತರಲಾಯಿತು. ಅಲ್ಲಿಗೆ ಆತ್ಮಹತ್ಯೆಯ ಬೆದರಿಕೆಗೆ ತತ್ಕಾಲದ ಮುಕ್ತಿ ದೊರಕಿತು.

ಗುರುರಾವ್‌ ಇಷ್ಟಕ್ಕೆ ಸುಮ್ಮನಾಗಿಲ್ಲ.

ಸಚಿವೆ ರಾಣಿ ಸತೀಶ್‌ ನಿವಾಸದ ಮುಂದೆ ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ಅವರು ಹೊಸ ಬೆದರಿಕೆಯಾಡ್ಡಿದ್ದಾರೆ. ‘ಕಳೆದ ಆರು ವರ್ಷಗಳಿಂದ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುತ್ತಲೇ ಇದ್ದೇನೆ. ಸರಕಾರ ಪ್ರತಿ ಬಾರಿಯೂ ಅನರ್ಹರಿಗೇ ಪ್ರಶಸ್ತಿ ನೀಡುತ್ತಿದೆ. ಇದು ಅನ್ಯಾಯ. ಕಳೆದ 22 ವರ್ಷಗಳಿಂದ ಅನೇಕ ಕನ್ನಡ ಚಿತ್ರಗಳಲ್ಲಿ ಪೋಷಕ ಕಲಾವಿದನಾಗಿ ದುಡಿದಿದ್ದೇನೆ. ಅಲ್ಲದೆ 25 ವರ್ಷಗಳಿಂದ ಪ್ರಭಾತ್‌ ಕಲಾವಿದರೊಂದಿಗೂ ಕೆಲಸ ಮಾಡುತ್ತಿದ್ದೇನೆ. ಆದರೂ ಪ್ರಶಸ್ತಿ ದೊರೆತಿಲ್ಲ ’ ಎಂಬುದು ರಾವ್‌ ಅಳಲು.

ಪೂರಕ ಓದಿಗೆ-

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more