• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಮಂಕುತಿಮ್ಮನ ಕಗ್ಗ’ಕ್ಕೆ ನೊಬೆಲ್‌ ಸಿಗಬೇಕಿತ್ತು :ಮಹಾಬಲೇಶ್ವರ ಭಟ್‌

By Staff
|

ಬೆಂಗಳೂರು : ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ ಕೃತಿಯಲ್ಲಿ ಜೀವನದ ಸಾರ ಅಡಗಿದೆ. ಅದಕ್ಕೆ ನೊಬೆಲ್‌ ಪ್ರಶಸ್ತಿ ಸಿಗಬೇಕಿತ್ತು ಎಂದು ಸಾಹಿತಿ ಟಿ.ಮಹಾಬಲೇಶ್ವರ ಭಟ್ಟ ಅಭಿಪ್ರಾಯಪಟ್ಟರು.

ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ ಮತ್ತು ನಿವೃತ್ತ ನ್ಯಾಯಮೂರ್ತಿ ಶತಾಯುಷಿ ನಿಟ್ಟೂರು ಶ್ರೀನಿವಾಸ ರಾಯರಿಂದ ಭಾನುವಾರ ಡಿವಿಜಿ ಪ್ರಶಸ್ತಿ ಸ್ವೀಕರಿಸಿದ ಮಹಾಬಲೇಶ್ವರ ಭಟ್ಟರು ಮಾತಾಡುತ್ತಿದ್ದರು. ಅಗಾಧ ಜೀವನಾನುಭವ ಮತ್ತು ಅಪಾರ ಪಾಂಡಿತ್ಯ ಒಟ್ಟಿಗೆ ಇರುವುದು ಕಷ್ಟ ಎಂಬ ಮಾತಿದೆ. ಆದರೆ ಡಿವಿಜಿ ಇವೆಡರ ಸಂಗಮದಂತಿದ್ದರು ಎಂದು ಭಟ್ಟರು ಶ್ಲಾಘಿಸಿದರು.

ರಾಜ್ಯದಲ್ಲಿ 42 ಸಾವಿರ ಸಾಹಿತಿ, ಬರಹಗಾರರು ಹಾಗೂ ಪತ್ರಕರ್ತರಿದ್ದಾರೆ. ರಾಜ್ಯ ಸರ್ಕಾರ ಪ್ರತಿವರ್ಷ ಈ ಪೈಕಿ 150 ಜನರನ್ನು ಪ್ರಶಸ್ತಿ, ಪುರಸ್ಕಾರಗಳಿಂದ ಗೌರವಿಸುತ್ತಿದೆ. ಉಳಿದವರಿಗೆ ಸರ್ಕಾರದಿಂದ ಯಾವ ಮನ್ನಣೆಯೂ ದೊರೆಯುತ್ತಿಲ್ಲ. ಆದರೆ, ಸರ್ಕಾರ ಮಾಡದ ಕೆಲಸವನ್ನು ಖಾಸಗಿ ಸಂಸ್ಥೆಗಳು ಮಾಡುತ್ತಿವೆ. ಎಲೆ ಮರೆಯ ಕಾಯಂತಿರುವ ಸಾಹಿತಿಗಳನ್ನು ಗುರ್ತಿಸಿ, ಗೌರವಿಸುವ ಕೆಲಸವನ್ನು ಮಾಡುತ್ತಿವೆ. ಇದು ಸಣ್ಣ ಕೆಲಸವೇನೂ ಅಲ್ಲ ಎಂದು ಹೊಗಳಿದರು.

ಡಿವಿಜಿ ಸಾಹಿತ್ಯ ಕಾಲತೀತವಾದುದು. ಅವರ ಕೃತಿಗಳಲ್ಲಿ ಸಾರ್ವಕಾಲಿಕ ಸತ್ಯ ಅಡಗಿದೆ. ಸಮಾಜದ ಬಗ್ಗೆ ಅದಮ್ಯ ಕಳಕಳಿ ಇಟ್ಟುಕೊಂಡಿದ್ದ ಅಪರೂಪದ ವ್ಯಕ್ತಿ ಅವರಾಗಿದ್ದರು ಎಂದು ಡಾ.ಎಚ್‌.ನರಸಿಂಹಯ್ಯ ನೆನಪಿಸಿಕೊಂಡರು.

ದಿವಾನ್‌ ವಿಶ್ವೇಶ್ವರಯ್ಯನವರನ್ನೂ ಟೀಕಿಸಿ, ಅವರಿಂದಲೇ ಶಹಭಾಸ್‌ಗಿರಿ ಪಡೆದ ನಿಷ್ಠುರ ಪತ್ರಕರ್ತರಾಗಿದ್ದವರು ಡಿವಿಜಿ. ಕನ್ನಡ ಸಂಘಗಳು ವಿರಳ ಎನ್ನುವಂಥಾ ಕಾಲದಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿ, ಜನಜಾಗೃತಿ ಮೂಡಿಸಿದ ಅಪರೂಪದ ಪ್ರತಿಭೆ ಅವರು. ಡಿವಿಜಿ ವಿರಚಿತ ‘ಜ್ಞಾಪಕ ಚಿತ್ರಶಾಲೆ’ ಇಂದಿಗೂ ಉತ್ತಮ ಕೃತಿ ಎಂದು ನಿಟ್ಟೂರು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more