ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸ್ಕೃತ ಅತ್ಯುತ್ತಮ ಭಾಷೆ, ಅದನ್ನು ಕಲಿಯಬೇಕು- ಎಚ್ಚೆನ್‌

By Staff
|
Google Oneindia Kannada News

ಬೆಂಗಳೂರು : ಮಹಾಕಾವ್ಯಗಳನ್ನು ಹಾಗೂ ಸಮೃದ್ಧ ಸಾರಸ್ವತ ಭಂಡಾರವನ್ನು ಹೊಂದಿರುವ ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ. ಈ ಮೂಲಕ ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಲೂ ಸಾಧ್ಯವಿದೆ ಎಂದು ಹಿರಿಯ ಶಿಕ್ಷಣ ತಜ್ಞ ಡಾ.ಎಚ್‌. ನರಸಿಂಹಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸಂಸ್ಕೃತ ಭಾಷೆ ಕಲಿಯದಿದ್ದರೆ ಅಪಾರ ನಷ್ಟ ಉಂಟಾಗುತ್ತದೆ. ಭಾಷೆ ಯಾವ ವರ್ಗಕ್ಕೂ ಸೇರಿದ್ದಲ್ಲ ಎಂದು ಸೋಮವಾರ (ಆ.6) ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ನಡೆದ ಸಂಸ್ಕೃತ ಶಿಕ್ಷಕರ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ನರಸಿಂಹಯ್ಯ ಹೇಳಿದರು.

ಒಂದು ಸಂದರ್ಭದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಸ್ಕೃತ ಭಾಷೆಯ ಬಗ್ಗೆ ಕೆಲವು ಲೋಪ ಮಾಡಿದರು. ಪುರಾತನ ಭಾಷೆಯಾದ ಸಂಸ್ಕೃತವನ್ನು ಕಲಿಯುವ ಬಗೆಗೆ ಹಲವಾರು ಅಭಿಪ್ರಾಯಗಳೂ ಇವೆ. ಆದರೆ, ನಾವು ಸಂಸ್ಕೃತ ಕಲಿಯದಿದ್ದರೆ ಜ್ಞಾನದಿಂದ ವಂಚಿತರಾಗುತ್ತೇವೆ ಎಂದರು.ಇತ್ತೀಚಿನ ದಿನಗಳಲ್ಲಿ ಸಂಸ್ಕೃತ ಕಲಿಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ನರಸಿಂಹಯ್ಯ ಸಂತೋಷ ವ್ಯಕ್ತಪಡಿಸಿದರು.

ಎಪ್ಪತ್ತು ವರ್ಷಗಳ ಹಿಂದೆ ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದ ಮಾಧ್ಯಮಿಕ ಶಾಲೆಯ ದಿನಗಳನ್ನು ನೆನಪಿಸಿಕೊಂಡ ನರಸಿಂಹಯ್ಯ- ಆ ದಿನಗಳಲ್ಲಿ ನಾನು ಸಂಸ್ಕೃತ ವಿದ್ಯಾರ್ಥಿಯಾಗಿದ್ದೆ , ಪಿಯುಸಿಯಲ್ಲೂ ಸಂಸ್ಕೃತ ಕಲಿತೆ ಎಂದರು.

ಸಂಸ್ಕೃತ ಅಧ್ಯಾಪಕರಿಗೆ ಹಲವು ಸಮಸ್ಯೆಗಳಿದ್ದು ಅವುಗಳನ್ನು ಸರ್ಕಾರ ಪರಿಹರಿಸಬೇಕು ಎಂದು ಆಗ್ರಹಿಸಿದ ನರಸಿಂಹಯ್ಯ, ಈ ಹೋರಾಟದಲ್ಲಿ ಶಿಕ್ಷಕರೊಂದಿಗೆ ತಾವು ದನಿಗೂಡಿಸುವುದಾಗಿ ಹೇಳಿದರು. ಶಾಸಕ ವಿ. ಸೋಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಸಂಸ್ಕೃತ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

Post your views

ವಾರ್ತಾ ಸಂಚಯ

‘ಮದುವೆಯಾಗಲು ಪುರುಸೊತ್ತೇ ಸಿಗಲಿಲ್ಲ’- ಎಚ್‌. ನರಸಿಂಹಯ್ಯ
ಹುಟ್ಟೂರು ಹೊಸೂರಿಗೆ ಹೂವು ತಂದ ಎಚ್‌. ನರಸಿಂಹಯ್ಯ
ಡಾ। ಎಚ್‌.ನರಸಿಂಹಯ್ಯ ಅವರಿಗೆ ಗೊರೂರು ಪ್ರಶಸ್ತಿ
ಹಳೆ ಮೈಸೂರಿಗರಿಗೆ ಇಂಗ್ಲಿಷ್‌ ವ್ಯಾಮೋಹ ಹೆಚ್ಚಂತಾರೆ ಎಚ್ಚೆನ್‌
ನಾಡಿನ ಹಿರಿಯ ಬ್ರಹ್ಮಚಾರಿ ಎಚ್‌.ನರಸಿಂಹಯ್ಯಗೆ ಬಸವ ಪುರಸ್ಕಾರ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X