ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಂದನೆಯನ್ನು ಗೆಲುವಿನಲ್ಲಿ ಪರಿವರ್ತಿಸಿಕೊಂಡ ಚಾಣಕ್ಯ

By Staff
|
Google Oneindia Kannada News

*ಎಂ.ವಿ.ನಾಗರಾಜ ರಾವ್‌

Chanakyaಸಾಮ್ರಾಜ್ಯ ಸ್ಥಾಪನೆಗಾಗಿ ರಾಜ ಚಂದ್ರಗುಪ್ತ ಮೌರ್ಯ ಹಗಲಿರುಳು ಶ್ರಮಿಸುತ್ತಿದ್ದನು. ಚಾಣಕ್ಯ ಅವನ ಬೆಂಗಾವಲಿಗೆ ನಿಂತು ಸಹಾಯ ಮಾಡುತ್ತಿದ್ದನು.

ಚಿಕ್ಕ ಚಿಕ್ಕ ರಾಜ್ಯಗಳನ್ನು ಗೆದ್ದು ಸಾಮ್ರಾಜ್ಯವನ್ನು ಕಟ್ಟುವುದು ಸುಲಭದ ಮಾತಾಗಿರಲಿಲ್ಲ. ಚಂದ್ರಗುಪ್ತ ಮತ್ತು ಚಾಣಕ್ಯ ಇಬ್ಬರೂ ಸೈನ್ಯವನ್ನು ಒಗ್ಗೂಡಿಸಿ ದೇಶದ ಒಳಗಿನ ರಾಜ್ಯಗಳನ್ನು ಗೆಲ್ಲುತ್ತಾ ಬಂದರು. ಆದರೆ ಹೊಸ ರಾಜ್ಯವನ್ನು ಗೆಲ್ಲುವಷ್ಟರಲ್ಲಿ ಹಳೆಯ ರಾಜ್ಯಗಳನ್ನು ಶತ್ರುಗಳು ಮತ್ತೆ ತಮ್ಮ ವಶಪಡಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಚಂದ್ರಗುಪ್ತನ ಸ್ಥೈರ್ಯ ಕುಗ್ಗುತ್ತಾ ಬಂದಿತು. ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಶತ್ರುಗಳು ಪ್ರಬಲರಾದರು. ಚಂದ್ರಗುಪ್ತ ಅಲೆಮಾರಿಯಾಗಬೇಕಾಗಿ ಬಂದಿತು.

ಒಂದು ದಿನ ಚಂದ್ರಗುಪ್ತ ಮತ್ತು ಚಾಣಕ್ಯ ಸುತ್ತಾಡುತ್ತಾ ಒಂದು ಹಳ್ಳಿಗೆ ಬಂದರು. ಒಂದು ಗುಡಿಸಲಿನ ಮುಂದೆ ಹತ್ತು ವರ್ಷದ ಬಾಲಕನೊಬ್ಬ ರೊಟ್ಟಿಯನ್ನು ತಿನ್ನುತ್ತಾ ಕುಳಿತಿದ್ದನು. ಅವನು ರೊಟ್ಟಿಯನ್ನು ಮಧ್ಯಭಾಗದಿಂದ ಮುರಿದುಕೊಂಡು ತಿನ್ನುವಾಗ ಅಂಚಿನಲ್ಲಿದ್ದ ರೊಟ್ಟಿಯ ಚೂರು ಕೆಳಗೆ ಬಿದ್ದು ಹೋಗುತ್ತಿತ್ತು . ಇದನ್ನು ಸ್ವಲ್ಪ ದೂರದಲ್ಲಿದ್ದ ಅವನ ತಾಯಿ ನೋಡಿ, ‘ಚಾಣಕ್ಯನಂತೆ ನೀನು ಸಹ ಮೂರ್ಖನಾಗಿದ್ದೇಯೆ. ರೊಟ್ಟಿಯನ್ನು ಅಂಚಿನಲ್ಲಿ ಮುರಿಯುತ್ತಾ ತಿನ್ನು’ ಎಂದು ಗದರಿಸಿದಳು.

ತನ್ನ ನಿಂದನೆಯನ್ನು ಕೇಳಿ ಚಾಣಕ್ಯ ಅಚ್ಚರಿಗೊಂಡ. ಹುಡುಗನ ತಾಯಿಯ ಬಳಿ ಬಂದು ‘ಎಲ್ಲರೂ ಚಾಣಕ್ಯನನ್ನು ತುಂಬ ಚತುರ ಎಂದು ಹೇಳುತ್ತಾರೆ. ಆದರೆ ನೀನು ಮಾತ್ರ ಅವನನ್ನು ಮೂರ್ಖ ಎಂದು ಕರೆಯುತ್ತಿದ್ದೀಯೆ.ಚಾಣಕ್ಯ ಯಾವ ವಿಷಯದಲ್ಲಿ ಮೂರ್ಖ ?’ ಎಂದು ಕೇಳಿದನು.

‘ ಸಾಮ್ರಾಜ್ಯವನ್ನು ಕಟ್ಟುವವರು ಮೊದಲು ದೇಶದ ಸರಹದ್ದಿನಲ್ಲಿರುವ ರಾಜ್ಯಗಳನ್ನು ಗೆದ್ದು ವಶಪಡಿಸಿಕೊಳ್ಳಬೇಕು. ಅನಂತರ ಒಳಭಾಗದ ರಾಜ್ಯಗಳನ್ನು ಗೆಲ್ಲಬೇಕು. ಇದರಿಂದ ಶತ್ರುಗಳು ಪ್ರಬಲರಾಗಲು ಅವಕಾಶವಿರುವುದಿಲ್ಲ. ಚಾಣಕ್ಯನ ಸಲಹೆಯಂತೆ ಚಂದ್ರಗುಪ್ತ ದೇಶದ ಒಳಗಿನ ರಾಜ್ಯಗಳನ್ನು ಗೆಲ್ಲುವ ಸಾಹಸ ಮಾಡಿದ. ಇದರಿಂದಾಗಿ ಶತ್ರುಗಳು ಅವನನ್ನು ಒಮ್ಮೆಲೇ ಸುತ್ತುವರೆಯಲು ಸಾಧ್ಯವಾಯಿತು.... ಚಾಣಕ್ಯ ಮುರ್ಖನಲ್ಲದೆ ಮತ್ತೇನು. ರೊಟ್ಟಿಯನ್ನು ಅಂಚಿನಿಂದ ತಿಂದರೆ ಮಧ್ಯಭಾಗ ಕೆಳಗೆ ಬೀಳುವುದಿಲ್ಲ ಅಲ್ಲವೇ ? ’ ಎಂದು ಮುಗುಳ್ನಗುತ್ತಾ ಹೇಳಿದಳು.

ಈಗ ಚಾಣಕ್ಯನಿಗೆ ತನ್ನ ತಪ್ಪಿನ ಅರಿವಾಯಿತು. ಚಂದ್ರಗುಪ್ತ ಹೊಸದಾಗಿ ಸೈನ್ಯವನ್ನು ಒಗ್ಗೂಡಿಸಿ ಮೊದಲು ಸರಹದ್ದಿನಲ್ಲಿರುವ ರಾಜ್ಯಗಳನ್ನು ಗೆಲ್ಲುತ್ತಾ ಬಂದನು. ಶತ್ರುಗಳು ನಿರ್ನಾಮವಾದರು.ಅವರಿಗೆ ಹೊರಗಿನಿಂದ ಸಹಾಯ ಬರದಂತಾಯಿತು. ಶತ್ರುಗಳು ಕಾರಾಗೃಹ ಸೇರಿದರು.ಚಾಣಕ್ಯ ತನ್ನ ನಿಂದನೆಯನ್ನು ಗೆಲುವಿನಲ್ಲಿ ಪರಿವರ್ತಿಸಿಕೊಂಡ. ಹೆಂಗಸು ತನ್ನನ್ನು ನಿಂದಿಸಿದಳೆಂದು ಆತ ಕೋಪಿಸಿಕೊಳ್ಳಲಿಲ್ಲ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X