• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೇ ಏರಿಯಾ-ಲಾಸ್‌ಏಂಜಲೀಸ್‌ಗೆ ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ್‌ಬದುಕುವುದು ಕಷ್ಟವಾಗುತ್ತಿರುವ ಸಂದರ್ಭದಲ್ಲಿ ರವಿಶಂಕರ್‌ ಅವರಿಂದ ಬದುಕುವ ಕಲೆಯ ಉಪದೇಶ

By oneindia staff
|

ಮುಖಪುಟ -->ಸಾಹಿತ್ಯ ಸೊಗಡು -->ಆರ್ಟ್‌ ಆಫ್‌ ಲಿವಿಂಗ್‌ -->ವಿಚಾರಧಾರೆಏಪ್ರಿಲ್‌ 04, 2002Sri Ravishankarಬೇ ಏರಿಯಾ-ಲಾಸ್‌ಏಂಜಲೀಸ್‌ಗೆ ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ್‌

ಬದುಕುವುದು ಕಷ್ಟವಾಗುತ್ತಿರುವ ಸಂದರ್ಭದಲ್ಲಿ ರವಿಶಂಕರ್‌ ಅವರಿಂದ ಬದುಕುವ ಕಲೆಯ ಉಪದೇಶಪ್ರಿಯ ಶಾಮ್‌,

ಸೂಜಿ ಮಲ್ಲಿಗೆ ತಲುಪಿತು. ಧನ್ಯವಾದ. ಮಹತ್ವಪೂರ್ಣವಾದ ಒಂದು ಸುದ್ದಿ ಸಮಾಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಈ ಸಂಗತಿ ನಿಮಗೆ ಗೊತ್ತಿದೆಯೋ ಇಲ್ಲವೋ ನನಗೆ ತಿಳಿಯದು.

ಕಳೆದ ಎರಡು ವರ್ಷಗಳಿಂದ ನಾನು ‘ಸುದರ್ಶನ ಕ್ರಿಯಾ ಯೋಗ ’ ಮಾಡುತ್ತಿದ್ದೇನೆ. ಉಸಿರಾಡುವ ವೈಜ್ಞಾನಿಕ ಮಾರ್ಗವನ್ನು ನಮ್ಮ ಪೂರ್ವಜರು ತೋರಿಸಿಕೊಟ್ಟಿದ್ದಾರೆ. ಇದನ್ನು ಒಂದು ಯೋಗವಾಗಿ, ತಂತ್ರವಾಗಿ, ಸಾಧನ ಮಾರ್ಗವಾಗಿ ನಮಗೆ ನಿರೂಪಿಸಿದವರು ಶ್ರೀ ರವಿಶಂಕರ್‌.

ರವಿಶಂಕರ್‌ ಅಂಥವರು ನಮ್ಮೊಡನಿರುವುದೇ ಒಂದು ಭಾಗ್ಯ ಎಂದು ನಾನು ನಂಬಿರುವೆನು. ರವಿಶಂಕರ್‌ ಅವರು ಕನ್ನಡಿಗರಾಗಿರುವುದು ನಮ್ಮ ಇನ್ನೊಂದು ಹೆಮ್ಮೆಯ ವಿಷಯ. ಅವರು ಜಗತ್ತಿನ ಎಲ್ಲೆಡೆ ಪ್ರಸಿದ್ಧರಾಗಿದ್ದಾರೆ. ಯಾಕೆಂದರೆ, ಜನರಿಗೆ ಶಾಂತಿಯ ಮಾರ್ಗವನ್ನು ಮತ್ತು ಸುದರ್ಶನ ಯೋಗದ ಮೂಲಕ ಅನೇಕ ರೋಗಗಳನ್ನು ನಿವಾರಿಸಿಕೊಳ್ಳುವ ಸುಲಭ ದಾರಿಯನ್ನು ಅವರು ತೋರಿಸಿಕೊಟ್ಟಿದ್ದಾರೆ. ಸುದರ್ಶನ ಯೋಗವು ನಮ್ಮ ದೇಹದಲ್ಲಿನ ಒತ್ತಡ (Stress)ವನ್ನು ನಿವಾರಿಸುತ್ತದೆ. ಹೊಸ ಚೈತನ್ಯವನ್ನು ನಮಗೆ ತಂದುಕೊಡುತ್ತದೆ. ಅಂಥ ನವ ಚೈತನ್ಯವನ್ನು ಪಡೆದುಕೊಂಡವರಲ್ಲಿ ನಾನೂ ಒಬ್ಬಳು.

ರವಿಶಂಕರ್‌ ಬಗ್ಗೆ ಹೆಚ್ಚು ತಿಳಿಯಲು ಈ ಕೆಳಗಿನ ವಿಳಾಸಕ್ಕೆ ಭೇಟಿ ಕೊಡಿ
www.artofliving.org
www.artoflivingsfba.org
www.artofliving.org/bangalore


ನನಗೆ ತುಂಬಾ ಸಂತೋಷ ತರುತ್ತಿರುವ ಇನ್ನೊಂದು ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಶ್ರೀ ರವಿಶಂಕರ್‌ ಅವರು ಸದ್ಯದಲ್ಲೇ ಸ್ಯಾನ್‌ಫ್ರಾನ್ಸಿಸ್‌ಕೊ ಬೇ ಏರಿಯಾ ಮತ್ತು ಲಾಸ್‌ಏಂಜಲೀಸ್‌ಗೆ ಆಗಮಿಸುತ್ತಿದ್ದಾರೆ. ಭೇಟಿಯ ಸಮಯದಲ್ಲಿ ಅವರು ಬದುಕುವ ಕಲೆ (Art of Living) ಕುರಿತು ಶಿಬಿರಗಳನ್ನು ನಡೆಸುತ್ತಾರೆ.

ಮೇ 6ರಿಂದ 9 LA

ಮೇ 10ರಿಂದ 14 SF bay area

ಇದೇ ಸಮಯಕ್ಕೆ ಹೊಂದಿಕೊಳ್ಳುವಂತೆ ನಾವೆಲ್ಲ ಸೇರಿ ಸಾರ್ವಜನಿಕ ಸಮಾವೇಶವನ್ನು ಏರ್ಪಡಿಸುತ್ತಿದ್ದೇವೆ. ಸಾಂತಾಕ್ಲಾರಾ ದಲ್ಲಿ ಆ ಕಾರ್ಯಕ್ರಮ ಮೇ 12ರಂದು ನಡೆಯತ್ತೆ. ಈ ಎಲ್ಲ ವಿಷಯಗಳು ನಿಮ್ಮ ವೆಬ್‌ ಸೈಟಿನಲ್ಲಿ ಅಚ್ಚಾದರೆ ವಿಶೇಷವಾಗಿ ಕನ್ನಡಿಗರಿಗೆ ಬಹಳ ಪ್ರಯೋಜನವಾಗತ್ತೆ. 20 ದಿವಸಗಳ ಹಿಂದೆ ಕೇರಳದಲ್ಲಿ ಶ್ರೀ ರವಿಶಂಕರ್‌ ಅವರ ಸಾರ್ವಜನಿಕ ಸಮಾವೇಶ ಕಾರ್ಯಕ್ರವಿತ್ತು. ಒಂದು ಲಕ್ಷ ಜನ ಸೇರಿದ್ದರು !

ಹೆಚ್ಚಿನ ವಿಚಾರ ಮಾಹಿತಿಗೆ ನೀವು ಪ್ರಶಾಂತ್‌ ಶೆಣೈ ಅವರನ್ನು ಸಂಪರ್ಕಿಸಿ. ಅವರೂ ಕನ್ನಡಿಗರೇ. ಅವರ ವಿಳಾಸ prashshenoy@hotmail.com

ನಾನು ನಾಳೆ , ಅಂದರೆ ಏಪ್ರಿಲ್‌ 4ಕ್ಕೆ ಭಾರತಕ್ಕೆ ಹೊರಟಿದ್ದೇನೆ. 30 ನೇ ತಾರೀಕು ಅಮೆರಿಕಾಗೆ ವಾಪಸಾಗುತ್ತೇನೆ. ಮತ್ತೆ ಭೇಟಿಯಾಗುವಾ.

ನಮಸ್ಕಾರಗಳು,
- ಉಮ

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more