ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಾಯಕ ಸಾವರ್ಕರ್‌ರ ಅಪ್ರತಿಮ ದೇಶಪ್ರೇಮ

By Staff
|
Google Oneindia Kannada News

*ಎಂ. ವಿ. ನಾಗರಾಜ ರಾವ್‌

Veer Savarkarಏಳನೆಯ ಎಡ್ವರ್ಡ್‌ನ ರಾಜ್ಯಾಭಿಷೇಕದ ದಿನದಂದು ಭಾರತದಲ್ಲಿ ಕೆಲವು ದೇಶದ್ರೋಹಿಗಳು ಸಂಭ್ರಮದಿಂದ ಉತ್ಸವ ನಡೆಸಲು ಏರ್ಪಾಟು ಮಾಡಿಕೊಂಡರು. ಆದರೆ ನಿಜವಾದ ದೇಶಪ್ರೇಮಿಗಳಿಗೆ ಇದನ್ನು ಸಹಿಸುವುದು ಸಾದ್ಯವಿರಲಿಲ್ಲ.

ಮಹಾನ್‌ ಕ್ರಾಂತಿಕಾರಿ ವೀರ ಸಾವರ್ಕರ್‌ ಯಾವುದೋ ಕಾರ್ಯ ನಿಮಿತ್ತರಾಗಿ ತ್ರಯಂಬಕೇಶ್ವರ್‌ಗೆ ಹೋಗಿದ್ದರು. ಇಂಥದೇ ಒಂದು ದೃಶ್ಯವನ್ನು ಅವರು ಅಲ್ಲಿ ನೋಡಿದರು. ನಗರದ ಗೋಡೆಗಳ ಮೇಲೆ ಭಿತ್ತಿ ಚಿತ್ರಗಳನ್ನು ಅಂಟಿಸಿ ಉತ್ಸವದ ಸ್ವಾಗತವನ್ನು ಕೋರಿದ್ದರು. ಅಲ್ಲಲ್ಲಿ ಇಂಗ್ಲಿಷ್‌ ಬಾವುಟಗಳನ್ನು ಹಾರಿಸಿದ್ದರು. ಇದನ್ನೆಲ್ಲಾ ಕಂಡು ವಿನಾಯಕ ಸಾವರ್ಕರರು ತುಂಬ ದುಃಖಿತರಾದರು.

ಸಭೆಯಾಂದು ನಡೆಯುತ್ತಿದ್ದಲ್ಲಿಗೆ ವೀರ ಸಾವರ್ಕರರು ಹೋದರು. ‘ಇಂಥದೊಂದು ವಿಶೇಷ ಸಮಾರಂಭ ನಡೆಸುತ್ತಿರುವ ನಿಮಗೆ ಧಿಕ್ಕಾರವಿರಲಿ. ನಿಮ್ಮ ದೇಶವನ್ನು ಗುಲಾಮನನ್ನಾಗಿ ಮಾಡಿಕೊಂಡು ಅದರ ಮೇಲೆ ಪ್ರಭುತ್ವ ನಡೆಸುತ್ತಿರುವವನ ರಾಜ್ಯಾಭಿಷೇಕದ ಉತ್ಸವವನ್ನು ನಮ್ಮಲ್ಲಿ ಆಚರಿಸಲು ನಿಮಗೆ ನಾಚಿಕೆಯಾಗಬೇಕು. ಇದು ಅವನ ಉತ್ಸವವಲ್ಲ. ದೇಶದ ಗುಲಾಮಗಿರಿಯ ಉತ್ಸವ. ವಿದೇಶಿ ರಾಜನ ಬಗ್ಗೆ ರಾಜ ಭಕ್ತಿ ಪ್ರದರ್ಶಿಸುವುದು ದೇಶ ಹಾಗೂ ದೇಶದ ಜನರ ಬಗ್ಗೆ ದ್ರೋಹ ಎಸಗಿದಂತೆ ಎಂದು ನೀವೇಕೆ ತಿಳಿಯುತ್ತಿಲ್ಲ ?’

ವೀರ ಸಾವರ್ಕರ್‌ ಈ ಸಿಂಹವಾಣಿಯನ್ನು ಕೇಳಿ ಸಭೆ ಏರ್ಪಾಟು ಮಾಡಿದವರು ತಲೆ ತಗ್ಗಿಸಿದರು. ‘ನಮ್ಮಿಂದ ತಪ್ಪಾಗಿದೆ ಕ್ಷಮಿಸಿ’- ಎಂದು ಅವರ ಕ್ಷಮೆ ಕೇಳಿದರು.

ನೀತಿ : ಪರದಾಸ್ಯ ಸ್ವಪ್ನದಲ್ಲೂ ಬೇಡ

Post your views

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X