• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳೆಯ ಹಾಡು ಹಾಡು ಮತ್ತೆ ..

By Staff
|

ಸುಲಿದ ಬಾಳೆಯ

ಹಣ್ಣಿನಂದದಿ

ಕಳಿದ ಸಿಗುರಿನ ಕಬ್ಬಿನಂದದಿ

ಅಳಿದ ಹಾಲಿನ ಉಷ್ಣದಂದದಿ ಸುಲಭವಾಗಿರ್ಪ

ಲಲಿತವಹ ಕನ್ನಡದ ನುಡಿಯಲಿ

ತಿಳಿದು ತನ್ನೊಳು ತನ್ನ ಮೋಕ್ಷವ

ಗಳಸಿಕೊಂಡರೆ ಸಾಲದೇ ಸಂಸ್ಕೃತದಲಿನ್ನೇನು

- ಮಹಲಿಂಗರಂಗ (17 ನೇಶತಮಾನ) ಅನುಭವಾಮೃತ

*

ಕನ್ನಡವನುಳಿದೆನಗೆ। ಅನ್ಯ ಜೀವನವಿಲ್ಲ

ಕನ್ನಡವೆ ಎನ್ನುಸಿರು । ಪೆತ್ತೆನ್ನ ತಾಯಿ

ಕನ್ನಡವೆ ಧನಧಾನ್ಯ । ಕನ್ನಡವೆ ಮನೆಮಾನ್ಯ

ಕನ್ನಡವೆ ಯೆನಗಾಯ್ತು । ಕಣ್ಣು ಕಿವಿ ಬಾಯಿ

- ಬೆನಗಲ್‌ ರಾಮರಾವ್‌

*

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ !

ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ !

ಕನ್ನಡದ ನೆಲದ ಕಲ್ಲೆನಗೆ ಶಾಲಗ್ರಾಮ ಶಿಲೆ ! ಕನ್ನಡಯೆ ದೈವಮೈ

ಕನ್ನಡ ಶಬ್ದಮೆನಗೋಂಕಾರಮೀಯನ್ನ

ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ-

ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳೆನಗೆ ?

- ಸಾಲಿ ರಾಮಚಂದ್ರರಾಯ

*

ನೀ ಮೆಟ್ಟುವ ನೆಲ- ಅದೆ ಕರ್ನಾಟಕ;

ನೀನೇರುವ ಮಲೆ- ಸಹ್ಯಾದ್ರಿ.

ನೀ ಮುಟ್ಟುವ ಮರ- ಶ್ರೀಗಂಧದ ಮರ ;

ನೀ ಕುಡಿಯುವ ನೀರ್‌- ಕಾವೇರಿ.

- ಕುವೆಂಪು

*

ಕರ್ಣಾಟಕ ಎಂಬುದೇನು

ಹೆಸರೆ ಬರಿಯ ಮಣ್ಣಿಗೆ ?

ಮಂತ್ರ ಕಣಾ ! ಶಕ್ತಿ ಕಣಾ !

ತಾಯಿ ಕಣಾ ! ದೇವಿ ಕಣಾ !

ಬೆಂಕಿ ಕಣಾ ! ಸಿಡಿಲು ಕಣಾ !

- ಕುವೆಂಪು

*

ಹೆಸರಾಯಿತು ಕರ್ನಾಟಕ

ಉಸಿರಾಗಲಿ ಕನ್ನಡ ;

ಹಸಿಗೋಡೆಯ ಹರಳಿನಂತೆ

ಹುಸಿಹೋಗದ ಕನ್ನಡ .

- ಚೆನ್ನವೀರ ಕಣವಿ

*

ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ.

- ಡಿ.ಎಸ್‌.ಕರ್ಕಿ

*

ಕನ್ನಡಿಗರು ಒಕ್ಕಟ್ಟಾಗಲು ಇರುವ ಏಕಮಾತ್ರ ಸಾಧನ ಅವರ ನುಡಿ, ಸಾವಿರಾರು ವರ್ಷವಾಗಿ ಕಲ್ಪವೃಕ್ಷದಂತೆ ಬೆಳೆದು ಸಕಲ ಇಷ್ಟಾರ್ಥಗಳನ್ನು ಕೊಡಬಲ್ಲ ಅವರ ನುಡಿ.

- ಪ್ರೊ.ಎ.ಆರ್‌.ಕೃಷ್ಣಶಾಸ್ತ್ರಿ

*

ಇಂಗ್ಲೆಂಡಿನಲ್ಲಿ ಇಂಗ್ಲಿಷ್‌ ಇರುವಂತೆ, ಫ್ರಾನ್ಸಿನಲ್ಲಿ ಫ್ರೆಂಚ್‌ ಇರುವಂತೆ, ಕರ್ನಾಟಕದಲ್ಲಿ ಕನ್ನಡವಿರಬೇಕು. ಈ ಆಶಯದಲ್ಲಿ ಅಸ್ವಾಭಾವಿಕ ಲವಲೇಶವೂ ಇಲ್ಲ .

- ಕುವೆಂಪು

*

ಕನ್ನಡ ಮಾತೆಯ ಮೂಲಕ ಭಾರತ ಮಾತೆಯನ್ನು ಸೇವಿಸೋಣ. ಕನ್ನಡ ಮಾತೆ ಉದ್ಧಾರವಾದರೆ ಭಾರತ ಮಾತೆಯೂ ಉದ್ಧಾರವಾಗುತ್ತಾಳೆ.

- ಶ್ರೀ

*

ನಿಮ್ಮ ನನ್ನ ಜೀವಮಾನದ ತೀರ್ಪು ನಮ್ಮ ಕನ್ನಡತಾಯ ಸೇವೆ. ಓ ಕನ್ನಡಿಗರಿರಾ, ನಿಮ್ಮ ಹಿರಿಯರ ಹೂದೋಟವನ್ನು ಹೊಕ್ಕು , ಹೊಸ ನೇಗಿಲಿನಿಂದ ಆಳವಾಗಿ ಉತ್ತು , ಹೊಸ ಹೊಸ ಹೊಂಬೆಳೆಗಳನ್ನು ಮಾಡಿ ! ಕನ್ನಡ ನಾಡಿನ ಮಕ್ಕಳು ಕನ್ನಡದಿಂದ ಬೆಳೆಯಲಿ ! ಕನ್ನಡನಾಡು ಕನ್ನಡದಿಂದ ಕೂಡಲಿ ! ಕನ್ನಡ ಬಾಳಲಿ, ಗೆಲ್ಲಲಿ!

- ಶ್ರೀ

*

ನಮ್ಮ ಕನ್ನಡ,

ನಮ್ಮ ಹಿರಿಯರ ಕನ್ನಡ,

ನಮ್ಮ ಮಕ್ಕಳ ಮೊಮ್ಮಕ್ಕಳ ಕನ್ನಡ.

- ಶ್ರೀ

*

ಕನ್ನಡ ಭಾಷೆ ನಮ್ಮದು ; ನಮ್ಮ ಜನ ತಲತಲಾಂತರಗಳಿಂದ ತಮ್ಮ ಆತ್ಮ ಪ್ರಕಟಣೆಗಾಗಿ ಬಳಸಿಕೊಂಡು ಬಂದದ್ದು .

- ಎಂ.ಗೋಪಾಲಕೃಷ್ಣ ಅಡಿಗ

(ಕನ್ನಡ ನುಡಿಗಳ ಪೋಣಿಸಿ ತಂದವರು : ಪಾವನಿ)

Post your Views

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more