ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀನಾಸಂನ ಚಿದಂಬರರಾವ್‌ ಜಂಬೆಗೆ ರುಜುವಾತು ಫೆಲೋಶಿಪ್‌

By Staff
|
Google Oneindia Kannada News

ಬೆಂಗಳೂರು : ಹಿರಿಯ ರಂಗ ನಿರ್ದೇಶಕ ಹಾಗೂ ಹೆಗ್ಗೋಡಿನ ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ) ರಂಗಶಾಲೆಯ ಪ್ರಾಂಶುಪಾಲ ಎ.ಜಿ.ಚಿದಂಬರ ರಾವ್‌ ಜಂಬೆ ಅವರಿಗೆ ಈ ಬಾರಿಯ ಪ್ರತಿಷ್ಠಿತ ರುಜುವಾತು ಫೆಲೋಶಿಪ್‌ ದೊರೆತಿದೆ.

ಫೆಲೋಶಿಪ್‌ ಮೂವತ್ತು ಸಾವಿರ ರುಪಾಯಿಗಳ ಮೊತ್ತವನ್ನು ಹೊಂದಿದೆ. ಜಂಬೆಯವರು ಈ ಫೆಲೋಷಿಪ್‌ನಡಿ ಕೇರಳದ ಕಲಾ ಮಂಡಲದ ನೆರವಿನಲ್ಲಿ - ಆಂಗಿಕ ಮತ್ತು ವಾಚಿಕ ಕಲೆಗೆ ಸಂಬಂಧಿಸಿದ ಹಾಗೂ ಕೂಡಿಯಾಟ್ಟಂ ಮತ್ತು ಕಥಕ್ಕಳಿ ಪ್ರಕಾರಗಳ ಅಧ್ಯಯನ ಕೈಗೊಳ್ಳುವರು ಎಂದು ರುಜುವಾತು ಟ್ರಸ್ಟ್‌ನ ಪರವಾಗಿ ಡಾ.ಯು.ಆರ್‌.ಅನಂತಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾರೀ ಚಿದಂಬರರಾವ್‌ ಜಂಬೆ ?
ಜಂಬೆ ಅವರು ಜನಿಸಿದ್ದು 1949 ರಲ್ಲಿ . 1982 ರಿಂದ ನೀನಾಸಂ ರಂಗಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಜಂಬೆ ಅವರ ಗರಡಿಯಲ್ಲಿ ನೂರಾರು ರಂಗಕರ್ಮಿಗಳು ರೂಪುಗೊಂಡಿದ್ದಾರೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ಪಡೆದಿರುವ ಜಂಬೆ ಅವರು ಭಾರತೀಯ ರಂಗಲೋಕದ ಅಂಗ್ರಪಂಕ್ತಿಯಲ್ಲಿನ ಪ್ರಮುಖರಲ್ಲೊಬ್ಬರು. ಕನ್ನಡ, ಸಂಸ್ಕೃತ, ಜಾನಪದ ಹಾಗೂ ಐರೋಪ್ಯ ಮೂಲಗಳಿಂದ ಪಡೆದ ವಿಶಿಷ್ಟ ನಾಟಕಗಳನ್ನು ಜಂಬೆಯವರು ನಿರ್ದೇಶಿಸಿದ್ದು - ಹಲವಾರು ರಂಗ ಶಿಬಿರಗಳನ್ನೂ ನಡೆಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X