• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡವನ್ನು ಕೈ ಬಿಡಲಾಗಿದೆ !

By Staff
|

*ಮಂಜುನಾಥ

2002

ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.1

‘ಋ’ ಅಕ್ಷರವು ಬಳಕೆಯಲ್ಲಿಲ್ಲದ ಕಾರಣ ಹಾಗೂ ಭಾಷೆಯನ್ನು ಸರಳಗೊಳಿಸುವ ಅಂಗವಾಗಿ ‘ಋ’ ಅಕ್ಷರವನ್ನು ಕೈಬಿಡಲಾಗಿದೆ. ಮತ್ತು ‘ಋ’ ಅಕ್ಷರದ ಬದಲಾಗಿ ‘ರು’ ಅಕ್ಷರವನ್ನು ಬಳಸಬಹುದೆಂದು ಈ ಮೂಲಕ ಸರ್ಕಾರವು ಆದೇಶ ಹೊರಡಿಸಿದೆ.

ಉದಾಹರಣೆ :

Sirigannadam Gelgeಋಷಿ - ರುಷಿ

ಕೃಷ್ಣ - ಕ್ರಿಷ್ಣ

ಋತು - ರುತು

ಋಜುತ್ವ - ರುಜುತ್ವ

2007

ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.2

‘ಋ’ ಅಕ್ಷರವನ್ನು ಕನ್ನಡ ಭಾಷೆಯಿಂದ ಕೈಬಿಡುವುದಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜಿತವಾದ ಸರ್ಕಾರ ಕನ್ನಡವನ್ನು ಮತ್ತಷ್ಟು ಸರಳಗೊಳಿಸುವ ದಿಕ್ಕಿನತ್ತ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನಿಡುತ್ತಿದೆ. ಅದರ ಪರಿಣಾಮವಾಗಿ ‘ಲ’ ಮತ್ತು ‘ಳ’ ಅಕ್ಷರಗಳು ಉಚ್ಚಾರಣೆಯಲ್ಲಿ ಅಲ್ಪ ವೈವಿಧ್ಯವನ್ನು ಹೊಂದಿರುವುದರಿಂದ ಮತ್ತು ‘ಳ’ ಅಕ್ಷರದ ಉಚ್ಚಾರಣೆ ಕ್ಲಿಷ್ಟಕರವಾಗಿರುವದರಿಂದ ‘ಳ’ ಅಕ್ಷರದ ಬದಲಾಗಿ ‘ಲ’ ಅಕ್ಷರವನ್ನೇ ಎಲ್ಲಾ ಕಡೆ ಬಳಸಬೇಕೆಂದೂ, ಪದ ವಿನ್ಯಾಸವನ್ನು ಗಮನಿಸಿ ಅರ್ಥ ವ್ಯತ್ಯಾಸವನ್ನು ಅರಿತುಕೊಳ್ಳಬೇಕೆಂದೂ ಈ ಮೂಲಕ ಆದೇಶಿಸಲಾಗಿದೆ.

ಉದಾಹರಣೆಗೆ

‘ಬಾಳಬೆಳಕು ಕನ್ನಡ

ಬೆಳೆಯಬೇಕು ಕನ್ನಡ

ಬಾಳಿನೊಡನೆ ಕೂಡಿ ತಾನು ಬೆಳಗಬೇಕು ಕನ್ನಡ’

- ಇದು

‘ಬಾಲಬೆಲಕು ಕನ್ನಡ

ಬೆಲೆಯಬೇಕು ಕನ್ನಡ

ಬಾಲಿನೊಡನೆ ಕೂಡಿ ತಾನು ಬೆಲಗಬೇಕು ಕನ್ನಡ’ ಎಂದಾಗುತ್ತದೆ.

2011

ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.3

ಕನ್ನಡ ಭಾಷೆಯ ಸರಲೀಕರಣ ಕಾರ್ಯದಲ್ಲಿ ಸಿಗುತ್ತಿರುವ ಪ್ರೊತ್ಸಾಹದಿಂದ ಉತ್ತೇಜಿತವಾಗಿ ಕನ್ನಡವನ್ನು ಮತ್ತೂ ಸರಲಗೊಲಿಸಲು ಸರ್ಕಾರವು ಕೆಲಗಿನ ಅದೇಶವನ್ನು ಹೊರಡಿಸುತ್ತಿದೆ.

ಕನ್ನಡದಲ್ಲಿರುವ ಅಲ್ಪಪ್ರಾಣ-ಮಹಾಪ್ರಾಣ (ಚಿಕ್ಕಕ್ಸರ-ದೊಡ್ಡಕ್ಸರ) ಎಂಬ ಭೇಧವನ್ನು ಕೊನೆಗಾಣಿಸಿ ಎರಡೂ ಅಕ್ಸರಗಲಿಗೆ ಬದಲಾಗಿ ಕೇವಲ ಅಲ್ಪಪ್ರಾಣ (ಚಿಕ್ಕಕ್ಸರ)ವನ್ನು ಮಾತ್ರ ಬಲಸಬೇಕು. ಇದರಿಂದಾಗಿ ವರ್ಣಮಾಲೆಯಲ್ಲಿ ಅಕ್ಸರ ಸಂಖ್ಯೆ ಕಡಿಮೆಯಾಗಿ ಭಾಸಾ ಅಭ್ಯಾಸವು ಸರಲವಾಗುತ್ತದೆ. ಇದೇ ಅದೇಸದೊಂದಿಗೆ ಅನುನಾಸಿಕಗಲಾದ ‘ಙ್‌ೌ’ , ‘ಞ್‌ೌ’ ಅಕ್ಸರಗಲನ್ನು ಕೈ ಬಿಡುವಂತೆ ಸೂಚಿಸಲಾಗಿದೆ.

ಉದಾಹರಣೆ

ಮೂಲ ಕನ್ನಡ

‘ಘನ ಭೀಮನು ತನ್ನ ಪಾಲಿನ ಖಂಡುಗ ಖಂಡುಗ ಅನ್ನದ ರಾಶಿಯನ್ನು ಖಾಲಿ ಮಾಡುತ್ತಿರುವುದನ್ನು ಕಂಡು ಕಡುಕೋಪಗೊಂಡು, ಬಕಾಸುರನು ಛಟಿಲ್ಲೆಂದು ದೊಡ್ಡ ಮರವೊಂದನ್ನು ಮುರಿದನು. ಅನಾಥ ರಕ್ಷಕ ಭೀಮನು ಅದನ್ನು ಕಂಡೂ ಕಾಣದವನಂತೆ ತನ್ನ ಅನ್ನಧ್ವಂಸ ಕಾರ್ಯಕ್ರಮವನ್ನು ಮುಂದುವರಿಸಿದನು’

ಇನ್ನು ಮುಂದಿನ ಕನ್ನಡ

ಗನಬೀಮನು ತನ್ನ ಪಾಲಿನ ಕಂಡುಗ ಕಂಡುಗ ಅನ್ನದ ರಾಸಿಯನ್ನು ಕಾಲಿ ಮಾಡುತ್ತಿರುವುದನ್ನು ಕಂಡು ಬಕಾಸುರನು ಕಡುಕೋಪಗೊಂಡು, ಚಟಿಲ್ಲೆಂದು ದೂಡ್ಡ ಮರವೊಂದನ್ನು ಮುರಿದನು. ಅನಾತರಕ್ಸಕ ಬೀಮನು ಅದನ್ನು ಕಂಡೂ ಕಾಣದಂತೆ ತನ್ನ ಅನ್ನದ್ವಂಸ ಕಾರ್ಯಕ್ರಮವನ್ನು ಮುಂದುವರೆಸಿದನು.

2019

ಆದೇಸ ಸಂಕ್ಯೆ ಕ.ಬಾ.ಕೈ.ಬಿ.ಕ 5

ಕನ್ನಡ ಬಾಸೆಯನ್ನು ಸರಲಗೊಲಿಸುವ ಸರ್ಕಾರದ ಎಲ್ಲಾ ಕ್ರಮಗಲೂ ಯಸಸ್ಸಿನತ್ತ ಸಾಗಿರುವುದರಿಂದ ಸ್ಪೂರ್ತಿಗೂಂಡ ಸರ್ಕಾರವು, ನೆರೆಹೂರೆಯ ಬಾಸೆಗಲಲ್ಲಿರುವಂತೆ, ಅಲ್ಪ ವೈವಿದ್ಯ ಉಚ್ಚಾರಣೆಯಿರುವ ವ್ಯಂಜನಾಕ್ಸರಗಲಿಗೆ ಬದಲಾಗಿ ವರ್ಗ ಮೂಲ ವ್ಯಂಜನಾಕ್ಸರವೊಂದನ್ನೇ ಬಲಸಬೇಕೇಂದು ಈ ಮೂಲಕ ಆದೇಸಿಸುತ್ತದೆ.

ಉದಾಹರಣೆಗೆ,

ಮೂಲ ಕನ್ನಡ

‘ತನ್ನ ವಿಜಯ ನಾರಸಿಂಹ ಖಡ್ಗದೊಂದಿಗೆ ತಿರುಚಿರಾಪಳ್ಳಿಗೆ ತೆರಳಿ, ಜಟ್ಟಿಯ ಲಂಗೋಟಿಯನ್ನು ಎಡಗೈಯ ಕಟ್ಟಿಗೆಯಿಂದ ನಿವಾರಿಸಿ, ಮಲ್ಲಯುದ್ಧಕ್ಕೆ ಪಂಥಾಹ್ವಾನವನ್ನೊಪ್ಪಿಕೊಂಡನು, ಜಗಜಟ್ಟಿಯಾದ ರಣಧೀರ. ಮದಿಸಿದ ಆನೆಯ ಮದವಡಗಿಸುವ ಮೊದಲ ಸುತ್ತಿನಲ್ಲಿ ನಿರಾಯಾಸವಾಗಿಯೇ ಗೆದ್ದು, ಎರಡನೇ ಸುತ್ತಿನಲ್ಲಿ ಜಟ್ಟಿಯನ್ನೆದುರಿಸುವಾಗ ಕ್ಷಣ ಮಾತ್ರದಲ್ಲೇ ಸೊಂಟದಲ್ಲಿ ಯಾರೂ ಅರಿಯದಂತೆ ಕುಳಿತಿದ್ದ ‘ವಿಜಯನಾರಸಿಂಹ’ನನ್ನೆಳೆದು ಜಟ್ಟಿಯ ಕೊರಳು ಕತ್ತರಿಸಿ ಅಖಾಡದಿಂದ ಹಿಂದೆ ಸರಿದು ಏನೂ ತಿಳಿಯದವನಂತೆ ನಿಂತನು. ಪ್ರೇಕ್ಷಕವರ್ಗವು ಏನಾಯಿತೆಂದು ಬೆಕ್ಕಸ ಬೆರಗಾಗಿ ನೋಡುತ್ತಿರುವಂತೆಯೇ, ಕೆಲವು ಕ್ಷಣಗಳಲ್ಲೇ ಜಟ್ಟಿಯ ರುಂಡ ಮುಂಡಗಳು ಬೇರೆಯಾಗಿ ಧರೆಗುರುಳಲು, ಜನಸ್ತೋಮವು ಹರ್ಷೋದ್ಗಾರಗೈದಿತು.’

ಇನ್ನು ಮುಂದಿನ ಕನ್ನಡ

ತನ್ನ ‘ವಿಜಯನಾರಸಿಂಹ’ ಕಡ್ಕತೊಂತಿಕೆ ತಿರುಚಿರಾಪಲ್ಲಿಕೆ ತೆರಲಿ ಚಟ್ಟಿಯ ಲಂಕೋಟಿಯನ್ನು ಎಡಕೈಯ ಕಟ್ಟಿಕೆಯಿಂದ ನಿವಾರಿಸಿ ಮಲ್ಲಯುತ್ತಕ್ಕೆ ಪಂತಾಹ್ವಾನವನ್ನೊಪ್ಪಿಕೊಂಟನು, ಚಕಚಟ್ಟಿಯಾದ ರಣತೀರ. ಮತಿಸಿತ ಆನೆಯ ಮತವಡಗಿಸುವ ಮೊತಲ ಸುತ್ತಿನಲ್ಲಿ ನಿರಾಯಾಸವಾಕಿಯೇ ಕೆತ್ತು , ಎರಟನೇ ಸುತ್ತಿನಲ್ಲಿ ಚಟ್ಟಿಯನ್ನೆತುರಿಸುವಾಕ ಕ್ಸಣ ಮಾತ್ರತಲ್ಲೇ ಸೊಂಟತಲ್ಲಿ ಯಾರೂ ಅರಿಯತಂತೆ ಕುಲಿತಿತ್ತ ‘ವಿಜಯನಾರಸಿಂಹ’ನನ್ನೆಲೆತು, ಚಟ್ಟಿಯ ಕೊರಲು ಕತ್ತರಿಸಿ ಅಕಾಟತಿಂತ ಹಿಂತೆ ಸರಿತು ಏನೂ ತಿಲಿಯತವನಂತೆ ನಿಂತನು. ಪ್ರೇಕ್ಸಕವರ್ಗವು ಏನಾಯಿತೆಂತು ಬೆಕ್ಕಸ ಬೆರಕಾಕಿ ನೋಡುತ್ತಿರುವಂತೆಯೇ ಕೆಲವು ಕ್ಸಣಕಲಲ್ಲೇ ಚಟ್ಟಿಯ ರುಂಟ ಮುಂಟಗಲು ಬೇರೆಯಾಗಿ ತರೆಕುರುಲಲು ಜನಸ್ತೋಮವು ಹರ್ಸೋತ್ಕಾರಕೈತಿತು.

2024

ಆತೇಸ ಸಂಕ್ಯೆ ಕ. ಪಾ. ಕೈ . ಪಿ . ಕಾ. 6.

ಕನ್ನಟ ಪಾಸೆಯನ್ನು ಸರಲಕೊಲಿಸುವ ಕಾರ್ಯಕ್ರಮತ ಮುಂತುವರಿತ ಅಂಕವಾಕಿ ಕೆಲಕಿನ ಅತೇಸವನ್ನು ಸರ್ಕಾರ ಹೊರಟಿಸಿತೆ.

‘ಕನ್ನಟ ಪಾಸೆಯ ಒತ್ತಕ್ಸರಕಲು, ಕನ್ನಟವನ್ನು ಕಂಪ್ಯೂಟರಿಕೆ ಅಲವಟಿಸಲು ತೊಂತರೆಯಾಕುವ ಕಾರಣ, ಒತ್ತಕ್ಸರವನ್ನು ಕೈಪಿಟ್ಟು, ಅತರ ಪತಲಿಗೆ ಪೂರ್ಣಾಕ್ಸರವನ್ನೇ ಪಲಸಪೇಕೆಂತು ಆತೇಸಿಸಿತೆ.

ಉದಾಹರಣೆ

ಮೂಲ ಕನ್ನಡ

Karnataka Flagಜೈ ಭಾರತ ಜನನಿಯ ತನುಜಾತೆ

ಜಯಹೇ ಕರ್ನಾಟಕ ಮಾತೆ

ಜೈ ಸುಂದರ ನದಿವನಗಳ ನಾಡೆ,

ಜಯಹೇ ರಸಋಶಿಗಳ ಬೀಡೆ,

ಭೂದೇವಿಯ ಮಕುಟದ ನವಮಣಿಯೆ

ಗಂಧದ ಚಂದದ ಹೊನ್ನಿನ ಗಣಿಯೆ

ರಾಘವ ಮಧುಸೂದನರವತರಿಸಿದ

ಭಾರತ ಜನನಿಯ ತನುಜಾತೆ

ಜಯಹೇ ಕರ್ನಾಟಕ ಮಾತೆ.

ಇನ್ನು ಮುಂತಿನ ಕನ್ನಟ

ಚಯ ಪಾರತ ಚನನಿಯ ತನುಚಾತೆ

ಚಯಹೆ ಕರನಾಟಕ ಮಾತೆ

ಚಯ ಸುಂತರ ನತಿವನಕಲ ನಾಟೆ,

ಚಯಹೇ ರಸರುಸಿಕಲ ಪೀಟೆ,

ಪೂತೇವಿಯ ಮುಕುಟತ ನವಮಣಿಯೆ

ಕಂತತ, ಚಂತತ ಹೊನನಿಯ ಕಣಿಯೆ,

ರಾಕವ ಮತುಸೂತನರವತರಿಸಿತ

ಪಾರತ ಚನನಿಯ ತನುಚಾತೆ

ಜಯ ಹೇ ಕರನಾಟಕ ಮಾತೆ.

2026

ಅತೇಸ ಸಂಕಯೆ ಕ. ಪಾ. ಕಯ್‌. ಪಿ. ಕಾ. 7

ಕನನಟ ಪಾಸೆಯನನು ಸರಲಕೊಲಿಸುವ ಸಲುವಾಕಿ ತಂತ ಹಲವಾರು ಪತಲಾವಣೆಕಲಿಂತಾಕಿ ಮಾತಾಟುವ ಕನನಟಕಕೂ ಪರೆಯುವ ಕನನಟಕಕೂ ಪಹಲಸಟು ವಯತಯಾಸಕಲು ಇರುವುತರಿಂತ ಇನನು ಮುಂತೆ ಕನನಟ ಲಿಪಿಯನನು ಕಯ್‌ ಪಿಟಟು ಆಟಲಿತತ ಎಲಲಾ ಹಂತತಲಲೂ ಇಂಕಲಿಸ್‌ ಪಾಸೆಯನನೇ ಪಲಸುವಂತೆ ಹಾಕೂ ಸಾಮಾನಯರಾರೂ ಕನನಟ ಪಾಸೆಯನನು ಪಲಸತಂತೆ ಈ ಮೂಲಕ ಆತೇಸಿಸಲಾಕಿದೆ. ಈ ಅತೇಸವೇ ಸರಕಾರತ ಕತೆಯ ಕನನಟ ಆತೇಸ.

Post your Views

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X