keyboard_backspace

ಮತ್ತೆ ಕೊರೊನಾ ಸೋಂಕು ಉಲ್ಬಣ, ಯಾವ್ಯಾವ ದೇಶದ ಪರಿಸ್ಥಿತಿ ಹೇಗಿದೆ?

Google Oneindia Kannada News

ವಿಶ್ವದ ವಿವಿಧ ದೇಶಗಳಲ್ಲಿ ಮತ್ತೆ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದೆ, ಕೊರೊನಾ ತಳಿಗಳು ರೂಪಾಂತರ ಹೊಂದುತ್ತಿದ್ದು ಅದರಿಂದಾಗಿ ಮತ್ತೆ ಭಯ ಶುರುವಾಗಿದೆ.

ಕೊರೊನಾ ಸೋಂಕು ಉಗಮ ಸ್ಥಾನ ಎಂದೇ ಕರೆಸಿಕೊಳ್ಳುವ ಚೀನಾದಲ್ಲಿ ಮತ್ತೆ ಸೋಂಕು ಹೆಚ್ಚಳವಾಗಿ ಹಲವು ಪ್ರದೇಶಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ವುಹಾನ್‌ನಿಂದ ಪ್ರಾರಂಭವಾಗಿ ಇಡೀ ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿ ಬಂಧಿಸಿರುವ ಕೊರೊನಾವೈರಸ್ ಮತ್ತೊಮ್ಮೆ ಚೀನಾದಲ್ಲಿ ವೇಗವಾಗಿ ಹರಡಲು ಪ್ರಾರಂಭಿಸಿದೆ.

ಚೀನಾದ ಹಲವು ನಗರಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಅನುಕ್ರಮದಲ್ಲಿ, ಚೀನಾದ ಲ್ಯಾನ್‌ಝೌ ನಗರದಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಇಲ್ಲಿ ಜನರು ಮನೆಯಿಂದ ಹೊರಬರುವುದನ್ನು ನಿಷೇಧಿಸಲಾಗಿದೆ.

 3 ನಗರಗಳಲ್ಲಿ ಲಾಕ್‌ಡೌನ್

3 ನಗರಗಳಲ್ಲಿ ಲಾಕ್‌ಡೌನ್

ಈ ಹಿಂದೆ ಅಕ್ಟೋಬರ್ 20 ರಂದು ಚೀನಾದ ಎರಡು ನಗರಗಳಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಸೋಮವಾರ ಇಲ್ಲಿ 9 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಕಂಡುಬಂದಿದ್ದು, ನಂತರ ಲಾಕ್‌ಡೌನ್ ಘೋಷಿಸಲಾಗಿದೆ. ಈಗ ಮಂಗಳವಾರ, 4 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಚೀನಾದ ವಾಯುವ್ಯ ಪ್ರಾಂತ್ಯದ ಲ್ಯಾನ್‌ಝೌ ನಗರದಲ್ಲಿ ಆರು ಕರೋನಾ ಸೋಂಕಿತ ಜನರು ಮುನ್ನೆಲೆಗೆ ಬಂದಿದ್ದಾರೆ. ಹೆಚ್ಚುತ್ತಿರುವ ಕರೋನಾ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಆಡಳಿತವು ಇಡೀ ನಗರದಲ್ಲಿ ಲಾಕ್‌ಡೌನ್ ಘೋಷಿಸಿದೆ.

 ಶಾಲೆಗಳನ್ನು ಮುಚ್ಚಲು ಆದೇಶ

ಶಾಲೆಗಳನ್ನು ಮುಚ್ಚಲು ಆದೇಶ

ಜಗತ್ತು ಅನ್‌ಲಾಕ್ ಆಗುತ್ತಿರುವಾಗ, ಚೀನಾ ಮತ್ತೊಮ್ಮೆ ಎಚ್ಚರವಾಗಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕಿನ ದೃಷ್ಟಿಯಿಂದ, ಚೀನಾದಲ್ಲಿ ಮತ್ತೆ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಇದರೊಂದಿಗೆ ಹಲವು ವಿಮಾನಗಳ ಹಾರಾಟವನ್ನೂ ರದ್ದುಗೊಳಿಸಲಾಗಿದೆ. ಏತನ್ಮಧ್ಯೆ, ಚೀನಾ ಹೇಳುತ್ತಿರುವ ಪ್ರಕರಣಗಳು ಮತ್ತು ನೈಜ ಪ್ರಕರಣಗಳ ನಡುವೆ ಏನಾದರೂ ವ್ಯತ್ಯಾಸವಿದೆಯೇ ಎಂಬ ಬಗ್ಗೆ ಜಗತ್ತು ಜಾಗರೂಕವಾಗಿದೆ. ಏಕೆಂದರೆ ಕಳೆದ ಬಾರಿಯೂ ಚೀನಾ ದೀರ್ಘಕಾಲದವರೆಗೆ ವಾಸ್ತವವನ್ನು ಮರೆಮಾಡಲು ಪ್ರಯತ್ನಿಸಿತ್ತು.

 ಬೀಜಿಂಗ್ ಮ್ಯಾರಥಾನ್ ಮುಂದೂಡಲಾಗಿದೆ

ಬೀಜಿಂಗ್ ಮ್ಯಾರಥಾನ್ ಮುಂದೂಡಲಾಗಿದೆ

ಕೊರೊನಾವೈರಸ್‌ನ ಇನ್ನಷ್ಟು ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ದೇಶದ ಉನ್ನತ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜಧಾನಿ ನಗರದಲ್ಲಿ ಹೊಸ ಕರೋನವೈರಸ್ ಸೋಂಕುಗಳ ಉಲ್ಬಣದ ಮಧ್ಯೆ ಚೀನಾದ ಅಧಿಕಾರಿಗಳು ಬೀಜಿಂಗ್ ಮ್ಯಾರಥಾನ್ ಅನ್ನು ಮುಂದೂಡಿದ್ದಾರೆ. ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 11 ಪ್ರಾಂತ್ಯಗಳಲ್ಲಿ 133 ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಮತ್ತು ಆ ಎಲ್ಲಾ ಪ್ರಕರಣಗಳು ಡೆಲ್ಟಾ ರೂಪಾಂತರಗಳಿಗೆ ಸಂಬಂಧಿಸಿವೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ.

 ಯುರೋಪ್‌ನಲ್ಲೂ ಲಾಕ್‌ಡೌನ್ ಘೋಷಣೆ

ಯುರೋಪ್‌ನಲ್ಲೂ ಲಾಕ್‌ಡೌನ್ ಘೋಷಣೆ

ಯುರೋಪ್‌ನಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳವಾಗಿದ್ದು, ಒಂದು ತಿಂಗಳ ಲಾಕ್‌ಡೌನ್ ಘೋಷಿಸಲಾಗಿದೆ. ಕೇವಲ ಶೇ.57ರಷ್ಟು ಮಂದಿ ಮಾತ್ರ ಕೊರೊನಾ ಲಸಿಕೆ ಪಡೆದಿದ್ದಾರೆ. ರಾತ್ರಿ 8 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಘೋಷಿಸಲಾಗಿದೆ. ಕಳೆದ ಒಂದು ವಾರದಲ್ಲಿ ಯುರೋಪ್‌ನಲ್ಲಿ ಅತಿ ಹೆಚ್ಚು ಕೊರೊನಾ ಸಂಬಂಧಿತ ಸಾವುಗಳು ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಯುರೋಪ್‌ನಲ್ಲಿ ಕೊರೊನಾ ಸಂಬಂಧಿತ ಸಾವುಗಳು ಶೇ.14ರಷ್ಟು ಹೆಚ್ಚಾಗಿದೆ, 21,000ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಅಮೆರಿಕದಲ್ಲಿ ಕಳೆದ ಒಂದು ವಾರದಿಂದ ಅತ್ಯಧಿಕ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಸುಮಾರು 513,000 ಪ್ರಕರಣಗಳು ಪತ್ತೆಯಾಗಿವೆ. 11,600 ಸಾವುಗಳು ಸಂಭವಿಸಿವೆ.
 ಬ್ರಿಟನ್‌ನಲ್ಲಿ ಸೋಂಕು ಹೆಚ್ಚಳ

ಬ್ರಿಟನ್‌ನಲ್ಲಿ ಸೋಂಕು ಹೆಚ್ಚಳ

ಬ್ರಿಟನ್‌ನಲ್ಲಿ 8.9 ಲಕ್ಷ ಮಂದಿಗೆ ಇದುವರೆಗೆ ಕೊರೊನಾ ಸೋಂಕು ತಗುಲಿದೆ. 140,000 ಮಂದಿ ಮೃತಪಟ್ಟಿದ್ದಾರೆ. ಬ್ರಿಟನ್‌ನಲ್ಲಿ 12 ವರ್ಷ ಮೇಲ್ಪಟ್ಟ ಶೇ.86ರಷ್ಟು ಮಂದಿ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ, ಶೇ.79ರಷ್ಟು ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ನಿತ್ಯ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ.

 ರಷ್ಯಾ ನ್ಯೂಜಿಲೆಂಡ್‌ನಲ್ಲಿ ಕೊರೊನಾ ಸೋಂಕು

ರಷ್ಯಾ ನ್ಯೂಜಿಲೆಂಡ್‌ನಲ್ಲಿ ಕೊರೊನಾ ಸೋಂಕು

ರಷ್ಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಾರಗಳ ಕಾಲ ರಷ್ಯಾ ಲಾಕ್‌ಡೌನ್ ವಿಧಿಸಲಾಗಿದೆ. ನಿತ್ಯ ಕೊರೊನಾ ಸಾವಿನ ಸಂಖ್ಯೆ 1 ಸಾವಿರಕ್ಕಿಂತ ಹೆಚ್ಚಿದೆ.

ಇನ್ನು ನ್ಯೂಜಿಲೆಂಡ್‌ನಲ್ಲಿ ಪ್ರಧಾನಿ ಜಸಿಂಡಾ ಕೊರೊನಾ ಲಾಕ್‌ಡೌನ್‌ ಅನ್ನು ಎರಡು ವಾರಗಳಿಗೆ ವಿಸ್ತರಿಸಿದ್ದಾರೆ. ಆಕ್‌ಲ್ಯಾಂಡ್‌ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಡೆಲ್ಟಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
 ಸಿಂಗಾಪುರದಲ್ಲಿ ಕೊರೊನಾ ಸೋಂಕು ಹೆಚ್ಚಳ

ಸಿಂಗಾಪುರದಲ್ಲಿ ಕೊರೊನಾ ಸೋಂಕು ಹೆಚ್ಚಳ

ಸಿಂಗಾಪುರದಲ್ಲಿ ದೈನಂದಿನ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಸಿಂಗಾಪುರದಲ್ಲಿ ಶೇ.80ರಷ್ಟು ಮಂದಿ ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ.

English summary
The move follows countries across globe that have imposed or mulling covid 19 lockdown ahead of winter months ad battle on the Delta variant.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X