• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

#LifeAfterCorona : ಕೊರೊನಾ ನಂತರದ ಬದುಕು ಸರಳ, ಸಂಯಮದಿಂದಿರಲಿ: ಪ್ರಲ್ಹಾದ್ ಜೋಶಿ

By ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
|

ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನವನ್ನು ಮುಂದುವರೆಸುತ್ತಾ, ಈ ದಿನ ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಲ್ಹಾದ್ ಜೋಶಿ ಅವರ ಅಭಿಪ್ರಾಯ, ಆಶಯ ಇಲ್ಲಿದೆ.. ಇದು ಈ ಸರಣಿಯ 15ನೇ ಲೇಖನವಾಗಿದೆ.

   ಬೆಳಗಾವಿಯಲ್ಲಿ ವಲಸೆ ಕಾರ್ಮಿಕರಿಗೆ ಬಸ್‌ನಲ್ಲಿ ದುಪ್ಪಟ್ಟು ದರ , ಸ್ಪಷ್ಟನೆ ನೀಡಿದ ಲಕ್ಷ್ಮಣ್ ಸವದಿ

   ಓದುಗರೇ, ನೀವು ನಿಮ್ಮ ಉತ್ತರಗಳನ್ನು ನಮಗೆ ಕಳಿಸಬಹುದು. ಅದನ್ನು ಇದೇ ಸರಣಿಯಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.

   1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

   2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

   3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?

   4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

   ನಿಮ್ಮ ಬರಹ/ವಿಡಿಯೋವನ್ನು ಇಮೇಲ್ (lifeaftercorona@one.in) ಮಾಡಿ

   ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

   ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

   1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

   ಪ್ರಹ್ಲಾದ್ ಜೋಶಿ: ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟು ಪ್ರತಿಯೊಬ್ಬರಿಗೂ ಸವಾಲಾಗಿದೆ. ಕೊರೊನಾ ಎದರಿಸಲು ಇರುವ ಉತ್ತಮ ಮಾರ್ಗ ಕೂಡಾ ವೈಯಕ್ತಿಕವಾಗಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಮತ್ತು ಶುಚಿತ್ವ ಹಾಗೂ ಮನೆಯಲ್ಲಿದ್ದೇ ಕೆಲಸ ಮಾಡುವುದು. ಇವುಗಳನ್ನು ನಾನು ಪಾಲಿಸುತ್ತಿದ್ದೇನೆ. ಕಚೇರಿ ಕೆಲಸ ಅನಿವಾರ್ಯ ಮತ್ತು ಮಹತ್ವಪೂರ್ಣವಾದ್ದರಿಂದ ಕೊರೊನಾ ವಿರುದ್ಧದ ಮುಂಜಾಗೃತಾ ಕ್ರಮಗಳೊಂದಿಗೆ ನಾನು ಕಾರ್ಯನಿರ್ವಹಿಸುತ್ತಿದ್ದೇನೆ.

   ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ?

   ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ?

   2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

   ಪ್ರಹ್ಲಾದ್ ಜೋಶಿ: ಒಂದು ನಾಣ್ಣುಡಿ ಇದೆ "ದುನಿಯಾ ಮೆ ದರ್ದ ಆಯಿತೋ ದವಾ ಭೀ ಆಯೇಗಿ" ಕೊರೊನಾ ವೈರಸ್ ಬಗ್ಗೆ ಔಷಧಿ ವಿಜ್ಞಾನ, ಸೂಕ್ಷ್ಮ ಜೀವಶಾಸ್ತ್ರ ಮತ್ತು ವೈದ್ಯಕೀಯ ಶಾಸ್ತ್ರ್ರದ ಕ್ಷೇತ್ರದಲ್ಲಿ ಸಂಶೋಧನೆ ನಡೆದಿದೆ. ಕೊರೊನಾಗೆ ಔಷಧಿ ದೊರಕಲಿದೆ ಎಂಬ ವಿಶ್ವಾಸ ನನ್ನದು.

   ಶ್ರೀಮಂತ ಮತ್ತು ಆಳುವ ವರ್ಗಗಳ ವ್ಯತ್ಯಾಸ

   ಶ್ರೀಮಂತ ಮತ್ತು ಆಳುವ ವರ್ಗಗಳ ವ್ಯತ್ಯಾಸ

   3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?

   ಪ್ರಹ್ಲಾದ್ ಜೋಶಿ: ಕೊರೊನಾ ನಂತರದ ಬದುಕು ಬೇರೆ ತೆರನಾಗುವುದು (ಜೀವನ ಶೈಲಿ). ಈ ಸಂಕಷ್ಟದ ಸ್ಥಿತಿಯ ಪಾಠವನ್ನು ನಾವೆಲ್ಲ ಸೇರಿದಂತೆ ಸಮಾಜದ ವಿವಿಧ ವರ್ಗಗಳು ಕಲಿತು ಸರಳ ಜೀವನ ಮತ್ತು ಪ್ರಾಥಮಿಕ ಮೂಲಭೂತ ಅವಶ್ಯಕತೆಗಳ ಬಗ್ಗೆ ಮಾತ್ರ ಗಮನ ವಹಿಸುವ ವ್ಯವಸ್ಥೆ ಬಹುತೇಕರು ಅಳವಡಿಸಿಕೊಳ್ಳಲಿದ್ದಾರೆ. ಶ್ರೀಮಂತ ಮತ್ತು ಆಳುವ ವರ್ಗಗಳ ವ್ಯತ್ಯಾಸವನ್ನು ಕೊರೊನಾ ತೊಡೆದು ಹಾಕಿದೆ ಎಲ್ಲರನ್ನೂ ಬಾಧಿಸಿದೆ. "ನಮಸ್ಕಾರ"ದ ಮಹತ್ವವನ್ನು ಜಗತ್ತು ಅರಿಯುವಂತೆ ಮಾಡಿದೆ, ಇದನ್ನು ವಿದೇಶಗಳು ಕೂಡಾ ಒಪ್ಪಿಗೊಂಡಿದೆ.

   ಕೊರೊನಾ ಒಡ್ಡುವ ಸವಾಲುಗಳು

   ಕೊರೊನಾ ಒಡ್ಡುವ ಸವಾಲುಗಳು

   4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

   ಪ್ರಹ್ಲಾದ್ ಜೋಶಿ: ಕೊರೊನಾ ಇಡೀ ಜಗತ್ತಿನ ಮುಂದಿರುವ ದೊಡ್ಡ ಸವಾಲು ಇದರ ಪರಿಣಾಮ ಜನಜೀವನ ಆರ್ಥಿಕತೆ, ಉದ್ಯೋಗ ಎಲ್ಲ ಕ್ಷೇತ್ರಗಳ ಮೇಲೆ ಗಾಢವಾಗಿದೆ. ಇದನ್ನು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಎದುರಿಸಬೇಕಾಗುತ್ತದೆ. ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ಸವಾಲುಗಳ ಕುರಿತು ಪರಿಹಾರ ಕಾರ್ಯಗಳ ಸಿದ್ಧತೆಗಳ ಬಗ್ಗೆ ಕ್ರಮ ವಹಿಸಿದೆ.

   ಪ್ರಹ್ಲಾಜೋಶಿ ಸಂಕ್ಷಿಪ್ತ ಪರಿಚಯ:

   ಪ್ರಹ್ಲಾಜೋಶಿ ಸಂಕ್ಷಿಪ್ತ ಪರಿಚಯ:

   ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಂಸದೀಯ ಸಮಿತಿ ಅಧ್ಯಕ್ಷರಾಗಿ, ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಣೆ ಮಾಡಿರುವ ಪ್ರಹ್ಲಾದ್ ಜೋಶಿ ಅವರು ಉತ್ತಮ ಸಂಸದೀಯಪಟು. ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮೇಲೆ ಜೋಶಿ ಅವರಿಗೆ ಹಿಡಿತವಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 6,84,837 ಮತಗಳನ್ನು ಪಡೆದು ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರನ್ನು 205072 ಮತಗಳ ಅಂತರದಿಂದ ಸೋಲಿಸಿದ್ದಾರೆ.

   * ಜನನ : 1962

   * ತಂದೆ : ವೆಂಕಟೇಶ ಜೋಶಿ, ತಾಯಿ : ಮಾಲತಿಬಾಯಿ

   * ಹುಬ್ಬಳ್ಳಿ ರೈಲ್ವೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ

   * ಹುಬ್ಬಳ್ಳಿ ನ್ಯೂ ಇಂಗ್ಲಿಶ್ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ

   * ಶ್ರೀ ಕಾಡಸಿದ್ದೇಶ್ವರ ಕಲಾ ವಿದ್ಯಾಲಯದಿಂದ ಬಿಎ ಪದವಿ

   * ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿ ಕೆಲಸ

   * 1992ರಲ್ಲಿ ಜ್ಯೋತಿ ಅವರೊಂದಿಗೆ ವಿವಾಹ

   * 1992ರಲ್ಲಿ ರಾಜಕೀಯ ಪ್ರವೇಶ

   * ಹುಬ್ಬಳ್ಳಿ ಈದ್ಗಾ ಮೈದಾನ ಉಳಿಸಿ ಹೋರಾಟದಲ್ಲಿ ಭಾಗಿ, ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಿ ದೇಶದ ಗಮನ ಸೆಳೆದರು

   * ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ

   * 2004, 2009, 2014, 2019ರಲ್ಲಿ ಧಾರವಾಡ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ

   * ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಂಸದೀಯ ಸಮಿತಿ ಅಧ್ಯಕ್ಷರಾಗಿದ್ದರು.

   English summary
   #LifeAfterCorona: How will be life after Corona menance gets over. Union Minister, Karnataka MP Pralhad Joshi's insights on how to fight Coronavirus is here.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X