ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#LifeAfterCorona: ಮುಂದಿನ ಸವಾಲುಗಳು ಜಟಿಲ ಹಾಗೂ ಅನೂಹ್ಯ

By ತಿಪ್ಪೇರುದ್ರಪ್ಪ, ನಿವೃತ್ತ ಉಪನ್ಯಾಸಕ
|
Google Oneindia Kannada News

ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನ ಮುಂದುವರೆಸುತ್ತಾ, ಚಿಕ್ಕಮಗಳೂರಿನ ನಿವೃತ್ತ ಉಪನ್ಯಾಸಕ, ಹಿರಿಯ ಪತ್ರಕರ್ತರಾದ ತಿಪ್ಪೇರುದ್ರಪ್ಪ ಅವರ ಆತಂಕ, ಅನಿಸಿಕೆ, ಅಭಿಪ್ರಾಯವನ್ನು ಇಲ್ಲಿ ನೀಡಲಾಗಿದೆ.

Recommended Video

20 ದಿನಗಳ ಕಾಲ ಕೊರೊನ ICU ನಲ್ಲಿ ಕೆಲಸಮಾಡಿ ಮನೆಗೆ ಬಂದ ತಾಯಿಗೆ ಕಾದಿತ್ತು ಅಚ್ಚರಿ..!

ಓದುಗರು ಕೂಡಾ ಕೆಳಕಂಡ ಪ್ರಶ್ನೆಗಳೀಗೆ ಉತ್ತರಗಳನ್ನು ಬರೆದು ಕಳಿಸಬಹುದು. ಅದನ್ನು ಸರಣಿ ರೂಪದಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.

Life after corona: ಕೊರೊನಾ ಕೊಟ್ಟ ಹೊಡೆತ ಮರೆಯುವಂತಿಲ್ಲLife after corona: ಕೊರೊನಾ ಕೊಟ್ಟ ಹೊಡೆತ ಮರೆಯುವಂತಿಲ್ಲ

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?
3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?
4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮ್ಮ ಸಂಕ್ಷಿಪ್ತ ವಿವರ, ಭಾವಚಿತ್ರ ಜೊತೆಗೆ ಬರಹ/ವಿಡಿಯೋವನ್ನು ಇಮೇಲ್ ([email protected]) ಮಾಡಿ

ವೈಯಕ್ತಿಕವಾಗಿ ಹೇಗೆ ಎದುರಿಸುತ್ತೀರಿ?

ವೈಯಕ್ತಿಕವಾಗಿ ಹೇಗೆ ಎದುರಿಸುತ್ತೀರಿ?

1. ಕೊರೋನಾ ಸೃಷ್ಟಿಸಿರುವ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತೀರಿ?

ಇದು ಜಾಗತಿಕ ಹಾಗೂ ರಾಷ್ಟ್ರೀಯ ಸಮಸ್ಯೆಯಾಗಿರುವುದರಿಂದ ನಾವೆಲ್ಲರೂ ಕೊರೋನಾ ಯುದ್ದ ಎದುರಿಸಲು ಆಡಳಿತದ ಜೊತೆ ಕೈಜೋಡಿಸುವ ಅನಿವಾರ್ಯತೆ ಇದೆ. ಮನೆಯಲ್ಲಿ ಮಡದಿ ಮಕ್ಕಳ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಿದ್ದೇನೆ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಕುಟುಂಬದವರು ಪಾಲಿಸುತ್ತಿದ್ದೇವೆ. ಪರಸ್ಪರ ಸಹಕಾರ, ಭಾವನೆಗಳ ಹಂಚಿಕೆ, ಓದು, ಬರಹ, ಪೂರಕವಾದ ವಾತಾವರಣ, ವಾಹಿನಿಗಳ ವೀಕ್ಷಣೆ ಇದೆಲ್ಲವೂ ಲಾಕ್‍ಡೌನ್ ಕೃಪೆ.

ವೈದ್ಯಲೋಕದ ಸವಾಲನ್ನು ಹೇಗೆ ಅರ್ಥೈಸುತ್ತೀರಾ?

ವೈದ್ಯಲೋಕದ ಸವಾಲನ್ನು ಹೇಗೆ ಅರ್ಥೈಸುತ್ತೀರಾ?

2. ವೈದ್ಯಲೋಕದ ಸವಾಲನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಎನಿಸುತ್ತದೆ?

ಇಂದಿನ ಸ್ಥಿತಿಯಲ್ಲಿ ವೈದ್ಯರು, ದಾದಿಯರು ಇತರೆ ಸಿಬ್ಬಂದಿಗಳ ಕಾರ್ಯನಿರ್ವಹಣೆ ನಾರ್ಧನ ಮೆಚ್ಚುವಂತಹದ್ದು. ಈ ಸವಾಲು ಎದುರಿಸಲು ನಮ್ಮ ಸರ್ಕಾರ ವೈದ್ಯಕೀಯ ಪ್ರಪಂಚ ಸನ್ನದ್ಧವಾಗಿದೆ. ಕಾಯಿಲೆಗೆ ಮದ್ದು ಕಂಡುಹಿಡಿಯುವುದು ನಿರಂತರ ಪ್ರಕ್ರಿಯೆ. ನನಗೆ ನಂಬಿಕೆ ಇದೆ ನಮ್ಮ ತಜ್ಞ ವೈದ್ಯರು ಈ ಮಹಾಮಾರಿಗೆ ತಿಲಾಂಜಲಿ ಇಟ್ಟು ಕೊನೆಗೊಳಿಸುವರು.

Life after corona: ಕೊರೊನಾ ಕಲಿಸಿದೆ ಹೋರಾಡುವ ಕಲೆ...Life after corona: ಕೊರೊನಾ ಕಲಿಸಿದೆ ಹೋರಾಡುವ ಕಲೆ...

ಹಳೆವ್ಯವಸ್ಥೆಗೆ ಜೋತುಬೀಳಬಹುದು

ಹಳೆವ್ಯವಸ್ಥೆಗೆ ಜೋತುಬೀಳಬಹುದು

3. ಕೊರೋನಾ ನಂತರ ಹಳೇ ವವ್ಯಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ. ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ ಎಂಬ ವಿಶ್ಲೇಷಣೆ ಇದೆ ನಿಮಗೆ ಏನು ಅನಿಸುತ್ತದೆ?

ಕೊರೋನಾ ಮಾರಿ ಸೋಂಕು ಜಾತಿ, ಧರ್ಮ, ಶ್ರೀಮಂತಿಕೆ, ಭಾಷೆ, ವರ್ಣಕ್ಕೆ ಅತೀತವಾದುದ್ದು. ಕೊರೋನಾ ನಂತರ ದೇಶದೇಶಗಳ ಮಧ್ಯೆ ಸೋಲು ಗೆಲುವಿನ ಅಹಂ ಉದ್ಭವವಾಗಬಹುದು. ಶ್ರೀಮಂತ ರಾಷ್ಟ್ರಗಳು ಹೀಗಾಗಲೇ ಸಾಕಷ್ಟು ಪೆಟ್ಟು ತಿಂದಿವೆ. ಆನರ ಜ್ಞಾಪಕ ಶಕ್ತಿ ಬಹಳ ಕಡಿಮೆ ಅವಧಿಯದ್ದು. ಹಳೆಯ ಘಟನೆಗಳನ್ನು ಮರೆತು ಹಳೆವ್ಯವಸ್ಥೆಗೆ ಜೋತುಬೀಳಬಹುದು. ಕೊರೋನಾ ಲಾಕ್ ಡೌನ್ ಎಲ್ಲರಿಗೂ ದೊಡ್ಡ ಪಾಠ ಕಲಿಸಿದೆ ಎಂಬುದರಲ್ಲಿ ಸಂಶಯವಲ್ಲ.

ಸಾರ್ವಜನಿಕರ ಸಾಮೂಹಿಕ ಪ್ರಯತ್ನ ಅತ್ಯಗತ್ಯ

ಸಾರ್ವಜನಿಕರ ಸಾಮೂಹಿಕ ಪ್ರಯತ್ನ ಅತ್ಯಗತ್ಯ

4. ಮುಂದಿನ ಕೆಲವು ದಿನಗಳಲ್ಲಿ ಕೊರೋನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ದತೆ ಹೇಗಿರಬೇಕು?

ಮುಂದಿನ ಸವಾಲುಗಳು ಜಟಿಲ ಹಾಗೂ ಅನೂಹ್ಯ. ಕ್ಷೀಣಿಸಿದ ಆರ್ಥಿಕ ವ್ಯವಸ್ಥೆ, ಕೈಗಾರಿಕಾ ಮತ್ತು ಕೃಷಿ ಕ್ಷೇತ್ರಗಳಲ್ಲಿ ಆದ ನಷ್ಟ, ಶೈಕ್ಷಣಿಕವಾಗಿ ವಿದ್ಯಾರ್ಥಿಗಳು, ಪೋಷಕರು ಅನುಭವಿಸಿದ ಯಾತನೆ, ಸಾರಿಗೆ ಸಂಪರ್ಕ ನಷ್ಟ ಸರಿದೂಗಿಸುವುದು, ಆರೋಗ್ಯ ಕ್ಷೇತ್ರವನ್ನು ವ್ಯವಸ್ಥಿತಗೊಳಿಸುವುದು ಇವೆಲ್ಲವೂ ಕೊರೋನಾ ಮುಂದಿನ ದಿನಗಳಲ್ಲಿ ಬೌದ್ಧಿಕ ಸವಾಲುಗಳು. ಇವೆಲ್ಲವನ್ನು ನಿಭಾಯಿಸಲು ಸರ್ಕಾರ, ಸಾರ್ವಜನಿಕರ ಸಾಮೂಹಿಕ ಪ್ರಯತ್ನ ಅತ್ಯಗತ್ಯ. ಆರ್ಥಿಕ ವ್ಯವಸ್ಥೆ ಸುಸ್ಥಿರಗೊಳಿಸಲು ಸರ್ಕಾರ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

#LifeAfterCorona: ಕೊಳ್ಳುಬಾಕತನ ಕಮ್ಮಿ ಮಾಡಿ, ಪ್ರೀತಿ ಬಾಂಧವ್ಯ ಬೆಳೆಸಿ#LifeAfterCorona: ಕೊಳ್ಳುಬಾಕತನ ಕಮ್ಮಿ ಮಾಡಿ, ಪ್ರೀತಿ ಬಾಂಧವ್ಯ ಬೆಳೆಸಿ

English summary
#LifeAfterCorona: How will be life after Corona menance gets over. Tipperudrappa-Senior Journalist, retired Lecturer From Chikkamagaluru on difficulties to face.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X