• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Life After Corona: ಸ್ವಾರ್ಥ ಬದುಕಿನ ಚಿಂತನೆ ಬದಲಿಸಿ

By ಬಿ.ಎನ್ ಮೀರಾ, ಮೈಸೂರು
|

ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನವನ್ನು ಮುಂದುವರೆಸುತ್ತಾ, ಈ ದಿನ ಮೈಸೂರಿನ ಹಿರಿಯ ಗೃಹಿಣಿ ಬಿ.ಎನ್ ಮೀರಾ ಅವರ ಅಭಿಪ್ರಾಯ, ಅನುಭವ ಅನಿಸಿಕೆ ಇಲ್ಲಿದೆ.. ಇದು ಈ ಸರಣಿಯ 20ನೇ ಲೇಖನವಾಗಿದೆ.

ಓದುಗರೇ, ನೀವು ನಿಮ್ಮ ಉತ್ತರಗಳನ್ನು ನಮಗೆ ಕಳಿಸಬಹುದು. ಅದನ್ನು ಇದೇ ಸರಣಿಯಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.

Life After Corona: ಒಳ್ಳೆ ದಿನಗಳು ನಮಗಾಗಿ ಕಾಯ್ತಾ ಇವೆ ಎಂಬ ನಂಬಿಕೆ

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?

4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮ್ಮ ಬರಹ/ವಿಡಿಯೋವನ್ನು ಇಮೇಲ್ (lifeaftercorona@one.in) ಮಾಡಿ

ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತೀರಾ?

ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತೀರಾ?

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ಪ್ರಕೃತಿಯ ಜೊತೆ ಜೊತೆಯಲ್ಲೂ ಜೀವಿಗಳು, ಕ್ರಿಮಿಕೀಟಗಳೂ, ಉತ್ಪನ್ನವಾಗಿದೆ. ಆಗಿಂದಲು ಮನುಕುಲ ಇದರ ವಿರುದ್ಧ ಹೋರಾಟ ಎದುರಿಸುತ್ತಲೇ ಬಂದಿರುತ್ತಾನೆ. ಹಿಂದೆ ಕಾಲರಾ, ಪ್ಲೇಗ್, ನಿಂದ ನೂರಾರು ಜನ ಸಾವಿಗೀಡಾಗಿದ್ದಾರೆ. ಇದಕ್ಕೆಲ್ಲಾ ಲಸಿಕೆ, ಮದ್ದುಗಳನ್ನು ಕಂಡು ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾನೆ. ಬದುಕಲೇಬೇಕೆಂಬ ವಿಶೇಷ ಗುಣ ಮನುಷ್ಯನಿಗೆ ಮೊದಲಿಂದಲೂ ಇದೆ. ಕಷ್ಟಗಳಿಗೆ ತಲೆಬಗ್ಗದೆ ಅದನ್ನು ಎದುರಿಸುವಲ್ಲಿ ಜಯಗಳಿಸಿದ್ದಾನೆ. ಹಾಗೆ ಈಗ ಬಂದಿರುವ ಕೊರೊನಾ ವೈರಸ್ ಕೆಲ ಜನಕ್ಕೆ, ಕೆಲ ದೇಶಕ್ಕೆ ಸೀಮಿತವಾಗದೆ ಇಡೀ ಜಗತ್ತನ್ನೇ ಬಂದಿಸಿದೆ. ಪ್ರಪಂಚವೇ ಕುಸಿದಿದೆ. ಆದರೂ ಹೆದರದೆ, ಸರ್ಕಾರವು ಸೂಚಿಸಿದ ಕೆಲವು ಕಾನೂನು ಕಟ್ಟಳೆಗಳನ್ನು, ಮರು ಪ್ರಶ್ನೆ ಮಾಡದೆ ಒಗ್ಗಟ್ಟಿನಿಂದ ಒಮ್ಮತದಿಂದ ಪಾಲಿಸಿದರೆ ಸಾಕು. ಇದರಿಂದ ಸಾಕಷ್ಟು ಜಯಶೀಲರಗಬಹುದು. ಲಾಕ್ಡೌನ್ ಇಂದ ಸಮಾಜದ ಅತಿ ದುರ್ಬಲ ವರ್ಗದವರು ಹೆಚ್ಚು ಸಂಕಷ್ಟಕ್ಕೆ ಈಡಾಗಿದ್ದಾರೆ. ಇದೊಂದು ಮಾನವೀಯ ದುರಂತ. ಅದಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ವ್ಯವಸ್ತೆಯನ್ನು ಮಾಡಲು ಸರ್ವಪ್ರಯತ್ನ ಮಾಡುತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ಪದೇ ಪದೇ ಕೈ ತೊಳೆಯುವುದು, ಮಾಸ್ಕ್ ಧರಿಸುವುದು, ಅಂತರವನ್ನು ಕಾಪಾಡಿ ಕೊಳ್ಳುವುದು, ತಂದಿರುವ ವಸ್ತುಗಳನ್ನು ಸ್ವಚ ಗೊಳಿಸುವುದು ಮುಂತಾದ ಎಚ್ಚರಿಕೆಯನ್ನು ಅನುಸರಿಸಬೇಕಾಗಿದೆ. ಅಲ್ಲದೆ ನಮಗಾಗಿ ಹಗಲಿರುಳು ಸರ್ವ ರೀತಿಯಲ್ಲಿ ದುಡಿಯುತ್ತಿರುವ ಡಾಕ್ಟರ್, ಪೊಲೀಸ್, ಸ್ವಯಂ ಸೇವಕರು, ನರ್ಸ್ಗಳಿಗೆ ನಮ್ಮದೊಂದು ಗೌರವವಿರಲಿ.

ಸಂಕಷ್ಟಕ್ಕೆ ಈಡದವರಿಗೆ ಸಹಾಯ ಹಸ್ತವನ್ನು ನೀಡುವುದು ನಮೆಲ್ಲರ ಕರ್ತವ್ಯವಾಗಿದೆ.

ಇದರ ಕೊನೆ ಯಾವಾಗ ಮತ್ತು ಹೇಗೆ ?

ಇದರ ಕೊನೆ ಯಾವಾಗ ಮತ್ತು ಹೇಗೆ ?

2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

ಈ ವೈರಸ್ ಗೆ ಅನೇಕರ ಬಾಯಲ್ಲಿ ಅನೇಕ ವಿವರಣೆಗಳು ಬರುತ್ತಿವೆ. ಇದು ಮಾನವ ನಿರ್ಮಿತವಾದ ಒಂದು ಕೆಟ್ಟ ವೈರಸ್. ಇದಕ್ಕೆ ಸಮಸ್ತ ದೇಶಗಳು ಕೈಜೋಡಿಸಿ, ವಿಮರ್ಶಿಸಿ, ಮಾನವನ ಬದುಕಿಗೆ ಜೀವಕೊಡಲು ಹಗಲಿರುಳು ಶ್ರಮ ವಹಿಸಿ ತಮ್ಮ ತನು ಮನಗಳನ್ನು ಪಣಕ್ಕೆ ಇಟ್ಟು ದುಡಿಯುತ್ತಿದ್ದಾರೆ. ಎಲ್ಲದಕ್ಕೂ ಆದಿ ಅಂತ್ಯ ಇದ್ದೇ ಇರುತ್ತದೆ. ಎಷ್ಟೋ ಕಂಟಕಗಳನ್ನು ಎದುರಿಸಿರುವ ಮಾನವನಿಗೆ ಇದೂ ಕೂಡ ದೊಡ್ಡ ಸವಾಲಾಗಿದೆ. ಆದರೂ ಮನುಷ್ಯನ ಪ್ರಯತ್ನದ ಎದುರು ಇದ್ದಕ್ಕೂ ಫಲಿತಾಂಶ ಸಿಗುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಸಂಯಮದಿಂದ ಕಾಯಬೇಕಾಗಿದೆ.

life after corona: ಸಕಾರಾತ್ಮಕ ಚಿಂತನೆ ನಮ್ಮಲ್ಲಿದ್ದರೆ ಸಾಕು

ಶ್ರೀಮಂತರು ಇನ್ನಷ್ಟು ಪ್ರಬಲರಾಗುತ್ತಾರೆಯೇ?

ಶ್ರೀಮಂತರು ಇನ್ನಷ್ಟು ಪ್ರಬಲರಾಗುತ್ತಾರೆಯೇ?

3. ಕಾರೋನ ನಂತರ ಹಳೆ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ. ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು, ಇನ್ನಷ್ಟು ಪ್ರಬಲಗೊಳ್ಳುತ್ತಾರೆ ಎಂಬ ವಿಶ್ಲೇಷಣೆ ಇದೆ. ಏನು ಅನಿಸುತ್ತದೆ?

ಈಗಾಗಲೇ ಜಗತ್ತಿನಾದ್ಯಂತ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ದೊರೆತು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಣದಿಂದ ಎಚ್ಚೆತ್ತು ಕೊಂಡಿದ್ದಾರಲ್ಲದೆ, ತಮ್ಮ ಸ್ಥಿತಿ ಗತಿಗಳನ್ನು ಅರಿತುಕೊಂಡು ಸುಧಾರಿಸಿ ಕೊಳ್ಳುವ ಬಗ್ಗೆ ಅರಿವು ಇದೆ. ಶ್ರೀಮಂತರಿಂದ ತುಳಿತಕ್ಕೆ ಒಳಗಾದವರ ಸಂಖ್ಯೆ ಬಹಳಷ್ಟು ಕಡಿಮೆ ಆಗಿದೆ. ಆದರೂ ಕೂಡ ದುರ್ಬಲ ವರ್ಗದವರಿಗೆ ಹೆಚ್ಚು ಹಾನಿ ಉಂಟು ಆಗುತ್ತದೆ. ಆಳುವ ವ್ಯವಸ್ಥೆಗಳು ಎಷ್ಟೇ ಸಮಾನ ರೀತಿಯ ಕಾನೂನನ್ನು ಜಾರಿಗೆ ತಂದರು ಕೆಲವು ಹಳ್ಳಿ ಪ್ರದೇಶಗಳಲ್ಲಿ ಶ್ರೀಮಂತರದೆ ಮೇಲುಗೈ ಕಾಣಬಹುದು. ರಾಜಕೀಯ ವ್ಯವಸ್ಥೆಯಲ್ಲಿ ಏರುಪೇರು ಇದ್ದೇ ಇರುತ್ತದೆ. ಆಳುವ ವ್ಯವಸ್ತೆಯನ್ನು ಕೂಡ ಕಾನೂನು ಬದಲಾವಣೆಗಳು ಇರುತ್ತದೆ. ಜನರು ಸಹ ಮಾನಸಿಕವಾಗಿ ಇದನ್ನೆಲ್ಲ ಎದುರಿಸುತ್ತಲೇ ಇದ್ದಾರೆ.

ಮುಂದಿನ ದಿನಗಳ ಸಿದ್ಧತೆ ಹೇಗಿರಬೇಕು?

ಮುಂದಿನ ದಿನಗಳ ಸಿದ್ಧತೆ ಹೇಗಿರಬೇಕು?

4. ಮುಂದಿನ ಕೆಲವು ದಿನಗಳಲ್ಲಿ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ಈ ನಿಟ್ಟಿನಲ್ಲಿ ಯೋಚಿಸಿದಾಗ ಕೊರೊನಾ ವೈರಿಸ್ ಗಿಂತ ಇನ್ನೂ ಭಯಂಕರವಾದ ವೈರಸ್ ಗಳು ಉದ್ಭವವಾಗುವ ಸಂಭವ ಇರಬಹುದು. ಮುಂದಿನ ಜೀವನ ಸುಲಲಿತ ವಾಗಿರಲು ಅಸಾಧ್ಯ ಆಗಬಹುದು. ಮಕ್ಕಳಿಂದ ವಯವೃದ್ಧರವರೆಗೆ ಈ ಪರಿಸ್ಥಿತಿಯನ್ನು ಸಂಭಾಳಿಸುವುದು ಸುಲಭದ ಮಾತಲ್ಲ. ಸಾಮಾಜಿಕ, ಆರ್ಥಿಕ, ವ್ಯವಸ್ಥೆಗಳು ಅಲ್ಲೋಲ ಕಲ್ಲೋಲ ವಾಗಿದೆ ಇದನ್ನು ಸರಿಹೊಂದಿಸುವ ಕಠಿಣ ಸವಾಲು ಈಗ ಸದ್ಯದ ಪರಿಸ್ಥಿತಿ. ಆದರೆ ಮಾನವ ಆಶಾ ಜೀವಿ, ಬುದ್ಧಿ ಜೀವಿ, ಎಂಥಾ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಹಠವಾದಿ. ಹೊರಡುವ ಗುಣ ಅವನಲ್ಲಿ ಇರುವುದರಿಂದ ಪ್ರಕೃತಿಯ ಈ ವಿಕೋಪಕ್ಕೆ ಪರಿಹಾರವನ್ನು ಹುಡುಕುತ್ತಾನೆ. ಇದಕ್ಕೆಲ್ಲಾ ನಮ್ಮ ಕರ್ತವ್ಯವೆಂದರೆ ಪರಿಸರ ಸಂರಕ್ಷಣೆ, ಒಮ್ಮತದ ಸಹಕಾರ, ಸ್ವಾರ್ಥ ಬದುಕಿನ ಚಿಂತನೆ ಬದಲಿಸಿ, ಸರ್ಕಾರ ಸೂಚಿಸಿದ ನಿಯಮಕ್ಕೆ ಬದ್ಧರಾಗಿ ಇರುವುದು. ತಿಳಿಯಾದ ಜನರಲ್ಲಿ ಅರಿವು ಮೂಡಿಸಬೇಕು. ವೈಜ್ಞಾನಿಕ ಕ್ಷೇತ್ರದಲ್ಲಿ ಈ ದಿಕ್ಕಿನಲ್ಲಿ ಸಂಶೋಧನೆ ನಿರಂತರವಾಗಿ ಮಾಡುತ್ತಲೇ ಇದ್ದಾರೆ. ಅಶವಾಡಿಗಳಾದ ನಾವು ಮುಂದೆ ಬರಬಹುದಾದಂತಹ ಕಂಟಕವನ್ನು ಎದುರಿಸುತ್ತೇವೆ ಎಂಬ ಭರವಸೆಯ ಬೆಳಕಿನೊಂದಿಗೆ ಬದುಕೋಣ. ನಾಳೆಯ ಬೆಳಕು ಹೇಗೆ ಎದುರಿಸ ಬೇಕೆಂಬ ಎಚ್ಚರಿಕೆ ಘಂಟೆ ಮೊಳಗುತ್ತಲೆ ಇದೆ. ಇದಕ್ಕೆಲ್ಲಾ ಉತ್ತರ "ಒಗಟ್ಟಿನಲ್ಲಿ ಬಲವಿದೆ" ಎನ್ನುವ ಮಾತನ್ನು ಎತ್ತಿ ತೋರಿಸೋಣ. ನಮ್ಮನ್ನು ನಿರಂತರವಾಗಿ ಹಗಲಿರುಳು ರಕ್ಷಿಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೂ, ಅರಕ್ಷರಿಗೂ, ಎಲ್ಲ ಕಾರ್ಯಕರ್ತರಿಗೂ ನಮ್ಮ ಕೃತಜ್ಞತೆ ಸಲ್ಲಿಸುವುದರ ಮೂಲಕ ಈ ದೇಶದ ಗೌರವವನ್ನು ಕಾಪಾಡುವಲ್ಲಿ ಸಹಕರಿಸೋಣ.

Life After Corona:ಎಲ್ಲವೂ ಶಾಶ್ವತ ಎನ್ನುವ ಭ್ರಮೆ ಅಳಿಸಿದೆ

English summary
#LifeAfterCorona: How will be life after Corona menance gets over. Homemaker From Mysuru, Smt B. N Meera's insights on how to fight Coronavirus is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more