ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#LifeAfterCorona: ಭವಿಷ್ಯ ಇನ್ನೂ ಭಯಾನಕವಾಗಿರಲಿದೆ: ನೋಮ್ ಚಾಮ್ಸ್ಕಿ

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದ ಇಡೀ ಜಗತ್ತು ತತ್ತರಿಸಿದೆ. ಒಂದ್ಕಡೆ ಸಾವು-ನೋವಿನಿಂದ ಜನ ಕಂಗಾಲಾಗಿದ್ದರೆ, ಇನ್ನೊಂದು ಕಡೆ ಕೋವಿಡ್-19 ತಂದೊಡ್ಡಿರುವ ಆರ್ಥಿಕ ಸಂಕಷ್ಟ ಹಲವರನ್ನು ಬಾಧಿಸುತ್ತಿದೆ.

ಚೀನಾದಲ್ಲಿ ಜನ್ಮ ತಾಳಿದ್ದರೂ, ಕೊರೊನಾ ವೈರಸ್ ನಿಂದಾಗಿ ಅಮೇರಿಕಾದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ಇಟಲಿ, ಸ್ಪೇನ್, ಫ್ರಾನ್ಸ್, ಜರ್ಮನಿ, ಯುಕೆ ಸೇರಿದಂತೆ ಯೂರೋಪ್ ನಲ್ಲೂ ಕ್ರೂರಿ ಕೊರೊನಾ ತಾಂಡವವಾಡುತ್ತಿದೆ.

#LifeAfterCorona: ಕೊರೊನಾ ನಂತರದ ಬದುಕು ಹೇಗಿರಲಿದೆ?#LifeAfterCorona: ಕೊರೊನಾ ನಂತರದ ಬದುಕು ಹೇಗಿರಲಿದೆ?

ಕಿಲ್ಲರ್ ಕೊರೊನಾ ವೈರಸ್ ನಿಂದ ಜಗತ್ತಿಗೆ ಯಾವಾಗ ಮುಕ್ತಿ ಸಿಗುತ್ತದೋ ಅಂತ ಎಲ್ಲರೂ ಆತಂಕದಲ್ಲಿ ಇರುವಾಗಲೇ, ಅಮೇರಿಕಾದ ರಾಜಕೀಯ ವಿಶ್ಲೇಷಕ ಮತ್ತು ಖ್ಯಾತ ಭಾಷಾಶಾಸ್ತ್ರಜ್ಞ ನೋಮ್ ಚಾಮ್ಸ್ಕಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

''ಸೋಷಿಯೋಪ್ಯಾತಿಕ್ ಬಫೂನ್ ಗಳ ಕೈಗೆ ನಮ್ಮ ಭವಿಷ್ಯವನ್ನು ಇಟ್ಟರೆ, ಕೊರೊನಾ ವೈರಸ್ ಗಿಂತಲೂ ಭೀಕರ ಮತ್ತು ದುರಂತದ ದಿನಗಳನ್ನು ನಾವೆಲ್ಲರೂ ಎದುರಿಸಬೇಕಾಗುತ್ತದೆ'' ಎಂದು ಸಂದರ್ಶನವೊಂದರಲ್ಲಿ ನೋಮ್ ಚಾಮ್ಸ್ಕಿ ಹೇಳಿದ್ದಾರೆ.

ಭಯಾನಕ ಸ್ಥಿತಿ ಎದುರಾಗಲಿದೆ

ಭಯಾನಕ ಸ್ಥಿತಿ ಎದುರಾಗಲಿದೆ

''ಕೊರೊನಾ ವೈರಸ್ ಒಂದು ಗಂಭೀರ ಪರಿಸ್ಥಿತಿ. ಆದರೆ ಅದಕ್ಕಿಂತಲೂ ಭಯಾನಕ ಪರಿಸ್ಥಿತಿಯೊಂದು ಎದುರಾಗಲಿದೆ. ಅಣುಬಾಂಬ್ ಯುದ್ಧ ಮತ್ತು ಜಾಗತಿಕ ಉಷ್ಣತೆಯಿಂದ ನಾವು ನಾಶದ ಅಂಚಿನೆಡೆಗೆ ದೌಡಾಯಿಸುತ್ತಿದ್ದೇವೆ. ಮಾನವ ಚರಿತ್ರೆಯಲ್ಲಿ ಇದುವರೆಗೆ ನಡೆದ ಎಲ್ಲಾ ಘಟನೆಗಳಿಗಿಂತಲೂ ಇದು ಭೀಕರವಾಗಿರಲಿದೆ'' ಎಂದು ನೋಮ್ ಚಾಮ್ಸ್ಕಿ ವಾರ್ನ್ ಮಾಡಿದ್ದಾರೆ.

ಆತಂಕ ವ್ಯಕ್ತಪಡಿಸಿದ ನೋಮ್ ಚಾಮ್ಸ್ಕಿ

ಆತಂಕ ವ್ಯಕ್ತಪಡಿಸಿದ ನೋಮ್ ಚಾಮ್ಸ್ಕಿ

''ಕೊರೊನಾ ವೈರಸ್ ನಿಂದ ಉಂಟಾಗುವ ದುಷ್ಪರಿಣಾಮಗಳಿಂದ ನಾವು ಚೇತರಿಸಿಕೊಳ್ಳುತ್ತೇವೆ. ಆದ್ರೆ, ಅಣುಬಾಂಬ್ ಯುದ್ಧ ಮತ್ತು ಜಾಗತಿಕ ತಾಪಮಾನದ ಏರಿಳಿಕೆಯಿಂದ ಚೇತರಿಸಿಕೊಳ್ಳಲಾಗುವುದಿಲ್ಲ. ಅವುಗಳಿಂದ ನಮ್ಮ ನಾಶ ಖಂಡಿತ. ಇದನ್ನು ನಾವು ಪರಿಗಣಿಸದೆ ಇದ್ದರೆ, ನಮ್ಮ ಅಂತ್ಯ ನಿಶ್ಚಿತ'' ಎಂದು ಡೆಮಾಕ್ರಸಿ ಇನ್ ಯೂರೋಪ್ ಮೂವ್ಮೆಂಟ್ 2025 ಸಹ ಸಂಸ್ಥಾಪಕ ಸ್ರೆಕೋ ಹೋವಾರ್ಟ್ ಗೆ ನೀಡಿದ ಸಂದರ್ಶನದಲ್ಲಿ ನೋಮ್ ಚಾಮ್ಸ್ಕಿ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ಕ್ಷೀಣ

ಪ್ರಜಾಪ್ರಭುತ್ವ ಕ್ಷೀಣ

''ಅಣು ಬಾಂಬ್ ಯುದ್ಧ, ಜಾಗತಿಕ ತಾಪಮಾನದ ಏರಿಕೆಯ ಜೊತೆಗೆ ಪ್ರಜಾಪ್ರಭುತ್ವದ ಕ್ಷೀಣಿಸುವಿಕೆ ಎಲ್ಲಕ್ಕಿಂತ ದೊಡ್ಡ ಅಪಾಯಕಾರಿ. ಯಾಕಂದ್ರೆ, ಎಲ್ಲಾ ಬಿಕ್ಕಟ್ಟುಗಳನ್ನು ಎದುರಿಸಿ, ನಿವಾರಿಸಲು ನಮಗಿರುವುದು ಪ್ರಜಾಪ್ರಭುತ್ವವೊಂದೇ. ಅದು ನಡೆಯದಿದ್ದರೆ, ನಮ್ಮ ಅಂತ್ಯ ನಿಶ್ಚಿತ. ಈ ಸೋಷಿಯೋಪ್ಯಾತಿಕ್ ಬಫೂನ್ ಗಳ ಕೈಗೆ ಅಧಿಕಾರ ಸಿಕ್ಕರೆ ನಾವು ಸತ್ತಂತೆಯೇ'' ಎಂದು ನೋಮ್ ಚಾಮ್ಸ್ಕಿ ನುಡಿದಿದ್ದಾರೆ.

ಅತಿ ದೊಡ್ಡ ವ್ಯಂಗ್ಯ

ಅತಿ ದೊಡ್ಡ ವ್ಯಂಗ್ಯ

''ಈ ಕೊರೊನಾ ವೈರಸ್ಸಿನ ಅತಿ ದೊಡ್ಡ ವ್ಯಂಗ್ಯವೆಂದರೆ ಕ್ಯೂಬಾ ಯೂರೋಪಿಗೆ ಸಹಾಯ ಮಾಡುತ್ತಿದೆ. ಇದು ಆಶ್ಚರ್ಯಕರ ಸಂಗತಿ. ಇದನ್ನು ಹೇಗೆ ವಿವರಿಸಬೇಕೋ ತಿಳಿಯುತ್ತಿಲ್ಲ. ಜರ್ಮನಿ ಗ್ರೀಸಿಗೆ ಸಹಾಯ ಮಾಡಲಾಗುತ್ತಿಲ್ಲ. ಆದರೆ ಕ್ಯೂಬಾ ಯೂರೋಪಿನ ದೇಶಗಳಿಗೆ ಸಹಾಯ ಮಾಡುತ್ತಿದೆ'' ಎಂದಿದ್ದಾರೆ ನೋಮ್ ಚಾಮ್ಸ್ಕಿ.

ವಿನಾಶಕಾರಿ ಸಂದರ್ಭ

ವಿನಾಶಕಾರಿ ಸಂದರ್ಭ

''ತಮ್ಮ ತಮ್ಮ ದೇಶಗಳಿಂದ ಓಡಿ ಬರುತ್ತಿರುವ ಸಾವಿರಾರು ನಿರಾಶ್ರಿತರನ್ನು ಮೆಡಿಟೆರೇನಿಯನ್ ನಲ್ಲಿ ಸಾವಿಗೆ ತಳ್ಳುತ್ತಿರುವಂತಹ ಸಮಯದಲ್ಲಿ ನಮ್ಮ ನಾಗರಿಕ ಸಮಾಜದ ಬಗೆಗೆ ಏನೆಂದು ಹೇಳುವುದೋ.. ತಿಳಿಯುವುದಿಲ್ಲ. ಇದು ವಿನಾಶಕಾರಿ ಸಂದರ್ಭ. ಪಾಶ್ಚಾತ್ಯ ದೇಶಗಳ ನಾಗರಿಕತೆಯ ಬಿಕ್ಕಟ್ಟಿನ ಬಗ್ಗೆ ಈ ಸಮಯದಲ್ಲಿ ಯೋಚಿಸಿದರೆ ಹತಾಶೆ ಆಗುತ್ತದೆ. ಅದು ನನಗೆ ಬಾಲ್ಯದಲ್ಲಿ ರೇಡಿಯೋದಲ್ಲಿ ಕೇಳಿದ ಹಿಟ್ಲರ್ ನ rally ಗಳಲ್ಲಿನ ಭಾಷಣವನ್ನು ನೆನಪಿಸುತ್ತದೆ. ಅದರ ಹಿಂದಿನ ಜನಸ್ತೋಮದ ಕೂಗು ಆಲಿಸಿದರೆ, ಮಾನವ ಜಾತಿಯು ವಿಕಾಸ ಹೊಂದಿದೆಯಾ ಎಂದೆನ್ನಿಸುತ್ತದೆ'' ಅಂತ ನೋಮ್ ಚಾಮ್ಸ್ಕಿ ಹೇಳಿದ್ದಾರೆ.

ಯಾರೀ ನೋಮ್ ಚಾಮ್ಸ್ಕಿ.?

ಯಾರೀ ನೋಮ್ ಚಾಮ್ಸ್ಕಿ.?

ಅಮೇರಿಕಾದ ಖ್ಯಾತ ಭಾಷಾಶಾಸ್ತ್ರಜ್ಞ ಮತ್ತು ರಾಜಕೀಯ ವಿಶ್ಲೇಷಕ. 91 ವರ್ಷದ ಸಾಮಾಜಿಕ ಚಿಂತಕ, ವಿದ್ವಾಂಸ ನೋಮ್ ಚಾಮ್ಸ್ಕಿ ಸಮಾಜದ ಮೇಲೆ ಕ್ಯಾಪಿಟಲಿಸ್ಟ್ ರಾಜಕಾರಣದ ಪ್ರಭಾವ ಕುರಿತು ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಎರಡನೇ ಮಹಾಯುದ್ಧ, ವಿಯೆಟ್ನಾಂ ಬಿಕ್ಕಟ್ಟು, ಬರ್ಲಿನ್ ಗೋಡೆ ಕುಸಿತ ಸೇರಿದಂತೆ ಹಲವು ಜಾಗತಿಕ ಘಟನೆಗಳಿಗೆ ನೋಮ್ ಚಾಮ್ಸ್ಕಿ ಸಾಕ್ಷಿಯಾಗಿದ್ದಾರೆ.

English summary
Life After Coronavirus: Humanity will face much greater horrors than Covid 19 Pandemic, Warns American Political Analyst Noam Chomsky.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X