ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Life after corona: ಕೊರೊನಾ ಕಲಿಸಿದೆ ಹೋರಾಡುವ ಕಲೆ...

By ಎನ್.ಧನಂಜಯ, ಉಪನ್ಯಾಸಕ
|
Google Oneindia Kannada News

'ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸಿದೆ. ಈ ಸರಣಿಯಲ್ಲಿ 10ನೇ ಲೇಖನವಾಗಿ ಮೈಸೂರಿನ ಅವರ ಶಾರದಾ ವಿದ್ಯಾಮಂದಿರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಎನ್ ಧನಂಜಯ ಅವರ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಓದುಗರೇ, ನೀವು ನಿಮ್ಮ ಉತ್ತರಗಳನ್ನು ಕಳಿಸಿ, ಅದನ್ನು ಸರಣಿ ರೂಪದಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?
3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?
4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮ್ಮ ಬರಹ/ವಿಡಿಯೋವನ್ನು ಇಮೇಲ್ ([email protected]) ಮಾಡಿ

ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
ಕೊರೊನಾ ಉಂಟುಮಾಡಿರುವ ತಲ್ಲಣ ಮತ್ತು ಆತಂಕಗಳು ಭಯಂಕರ. ನಿಜ ಅರ್ಥದಲ್ಲಿ ಇದು ಬಿಕ್ಕಟ್ಟನ್ನು ಸೃಷ್ಟಿಸಿದ್ದರೂ ಇನ್ನೊಂದು ಅರ್ಥದಲ್ಲಿ ನನಗೆ ವೈಯಕ್ತಿಕವಾಗಿ ನನ್ನನ್ನು ನಾನು ಅರ್ಥಮಾಡಿಕೊಳ್ಳಲು ವೇದಿಕೆ ಕಲ್ಪಿಸಿದೆ. ಒಂದು ವಾರದ ರಜೆಗೆ ನಾನು ನನ್ನ ಹೆಂಡತಿ ಊರಿಗೆ (ಶೃಂಗೇರಿ ಸಮೀಪ) ಬಂದಿದ್ದೆ. ಈಗ ಅದು ಒಂದು ತಿಂಗಳನ್ನು ದಾಟುತ್ತಿದೆ. ಇದು ಅನಿವಾರ್ಯವೋ, ಆಕಸ್ಮಿಕವೋ ಒಟ್ಟಿನಲ್ಲಿ ಒಂದಷ್ಟು ಜೀವನ ಪಾಠಗಳನ್ನಂತೂ ಕಲಿಸಿದೆ. 'Which cannot be cured must be endured' ಎಂಬ ಆಂಗ್ಲ ನಾಣ್ನುಡಿಯಂತೆ ಯಾವುದಕ್ಕೆ ಪರಿಹಾರವಿಲ್ಲವೋ ಅದನ್ನು ಸಹಿಸಿಕೊಳ್ಳಲೇಬೇಕಲ್ಲವೇ? ಈಗ ನಮ್ಮೆಲ್ಲರ ಪರಿಸ್ಥಿತಿಯೂ ಹಾಗೇ ಆಗಿದೆ.

ಕಳೆದ ಒಂದು ತಿಂಗಳಿಂದ ಮಲೆನಾಡಿನ ಸುಂದರ ಪರಿಸರದಲ್ಲಿ ಬಂಧಿಯಾಗಿರುವ ನಾನು ಬಹಳ ಚೆನ್ನಾಗಿಯೇ ಕಾಲ ಕಳೆಯುತ್ತಿದ್ದೇನೆ ಎನ್ನಬಹುದು. ಹೆಚ್ಚೆಂದರೆ ಒಂದು ವಾರದ ಮಟ್ಟಿಗೆ ಹಳ್ಳಿಯಲ್ಲಿ ಉಳಿಯುತ್ತಿದ್ದ ನನಗೆ ಈಗ ಒಂದು ತಿಂಗಳಿಗೂ ಹೆಚ್ಚಿನ ಅವಧಿ ರಜೆ. ಆರಂಭದಲ್ಲಿ ಕೊಂಚ ಭಯವುಂಟು ಮಾಡಿದರೂ ಕ್ರಮೇಣ ಹೊಂದಿಕೊಂಡು ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದೇನೆ. ಮೈಸೂರಿನಲ್ಲಿ ಕೆಲಸ, ಸಂಜೆ ಜಿಮ್, ನಾಟಕಗಳ ತಾಲೀಮು, ಬಿಡುವು ಮಾಡಿಕೊಂಡು ಪುಸ್ತಕಗಳ ಓದು ಇತ್ಯಾದಿ.. ಕಾರ್ಯಕ್ರಮಗಳಲ್ಲಿ ಮುಳುಗಿಹೋಗಿರುತ್ತಿದ್ದ ನನಗೆ ಎಲ್ಲದಕ್ಕೂ ಇಷ್ಟಿಷ್ಟು ಸಮಯ ಅಂತ ಕೊಡುವ ಅನುಕೂಲವಿತ್ತು. ಈಗ ಇಡೀ ದಿನ ನನ್ನ ಮುಂದೆ ಕೈಕಟ್ಟಿ ನಿಂತಿರುವುದರಿಂದ ಅದನ್ನು ಸರಿಯಾಗಿಯೇ ಬಳಸಿಕೊಳ್ಳಬೇಕಾಗಿದೆ. ಹಾಗಾಗಿ ಒಂದು ವೇಳಾಪಟ್ಟಿ ಮಾಡಿಕೊಂಡಿದ್ದೇನೆ. ಅದರಂತೆ ಪುಸ್ತಕಗಳನ್ನು ಓದುವುದು, ಒಳ್ಳೆಯ ಸಿನಿಮಾ ನೋಡುವುದು, ಒಂದಷ್ಟು ನಾಟಕಗಳ ಮರು ಓದುವಿಕೆ, ವ್ಯಾಯಾಮ, ಬ್ಯಾಡ್ಮಿಂಟನ್ ಆಡುವುದು, ಮನೆಯವರೆಲ್ಲ ಸೇರಿ ಸಂಜೆ ದೇವರ ನಾಮ ಮತ್ತು ಭಜನೆ ಮಾಡುವುದು ಇತ್ಯಾದಿ ನನ್ನ ದಿನಚರಿಯಲ್ಲಿರುವ ಚಟುವಟಿಕೆಗಳು. ಮುಖ್ಯವಾಗಿ ಇಲ್ಲಿ ನನಗೆ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ. ಬಿಕ್ಕಟ್ಟೋ, ಇಕ್ಕಟ್ಟೋ ಏನೇ ಇರಲಿ ಇದರ ಮಧ್ಯೆ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದು ತಿಳಿಯುತ್ತಿದೆ.

ವೈದ್ಯಲೋಕಕ್ಕೆ ಇದು ನಿಜವಾಗಿಯೂ ದೊಡ್ಡ ಸವಾಲು

ವೈದ್ಯಲೋಕಕ್ಕೆ ಇದು ನಿಜವಾಗಿಯೂ ದೊಡ್ಡ ಸವಾಲು

2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

ವೈದ್ಯಲೋಕಕ್ಕೆ ಇದು ನಿಜವಾಗಿಯೂ ದೊಡ್ಡ ಸವಾಲೇ. ಬಂದಿರುವ ಸಮಸ್ಯೆಯನ್ನು ಎಷ್ಟು ಬೇಗ ಪರಿಹರಿಸಿಕೊಳ್ಳಬಲ್ಲೆವು ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಜೀವಿಸುವ ಹಕ್ಕು ಎಲ್ಲ ಜೀವಿಗಳಿಗೂ ಇದೆ. 'Survival of the fittest' ಎನ್ನುವಂತಿದೆ ಈಗಿನ ಪರಿಸ್ಥಿತಿ. ವೈದ್ಯರ ಕೆಲಸವನ್ನು ಗೌರವಿಸಿ ನಾವು ಅವರಿಗೆ ಸಂಪೂರ್ಣ ಸಹಕಾರ ನೀಡಬೇಕಿದೆ. "ವೈದ್ಯೋ ನಾರಾಯಣ ಹರಿ" ಎನ್ನುವಂತೆ ಪ್ರತಿ ರೋಗಿಯ ಕಣ್ಣಲ್ಲಿ ಕಣ್ಣಿಟ್ಟು 'ನಾನಿದ್ದೇನೆ ಭಯ ಬೇಡ' ಎನ್ನುವ ಸಂದೇಶವನ್ನು ಪ್ರತಿಯೊಬ್ಬ ವೈದ್ಯರು ಮಾಡುತ್ತಿದ್ದಾರೆ. ಎಲ್ಲದಕ್ಕೂ ಒಂದು 'ಆರಂಭ' ಮತ್ತು 'ಅಂತ್ಯ' ಇದ್ದಮೇಲೆ ಈ 'ಕೊರೊನಾ'ಗೂ ಅಂತ್ಯವಿರಲೇಬೇಕು. ಇದರ ವಿರುದ್ಧ ಹೋರಾಡಿ ವೈದ್ಯಲೋಕ ಖಂಡಿತಾ ಯಶಸ್ಸನ್ನು ಪಡೆಯುತ್ತದೆ.

ಹೊಸ ಬದುಕು ಕಂಡುಕೊಳ್ಳುವ ಕಾಲ

ಹೊಸ ಬದುಕು ಕಂಡುಕೊಳ್ಳುವ ಕಾಲ

3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?

ಇಲ್ಲ. ಇದರ ಬಗ್ಗೆ ನನಗೆ ನನ್ನದೇ ಆದ ಕೆಲವು ನಂಬಿಕೆಗಳಿವೆ. ಕೊರೊನಾ ನಂತರವೂ ಹಳೆಯ ವ್ಯವಸ್ಥೆಯೇ ಮುಂದುವರೆಯುವುದಾದರೆ 'ನಾವು ಏನನ್ನೂ ಕಲಿತಿಲ್ಲ ಮತ್ತು ಎಂದಿಗೂ ಕಲಿಯಲಾರೆವು' ಎಂದು ಹೇಳಬೇಕಾಗುತ್ತದೆ. ಶ್ರೀಮಂತರು ಮತ್ತು ಆಳುವವರು ಪ್ರಬಲರಾಗುವುದಿಲ್ಲ ಎನಿಸುತ್ತದೆ. ಏಕೆಂದರೆ ಇಬ್ಬರಿಗೂ ಇದು ಅಗ್ನಿ ಪರೀಕ್ಷೆಯೇ. ಶ್ರೀಮಂತ ತನ್ನ ಅಹಮಿನ ಕೋಟೆಯನ್ನು ಬಿಟ್ಟು ಹೊರಕ್ಕೆ ಬಂದಿದ್ದಾನೆ. ಹಣದಿಂದ ಎಲ್ಲವನ್ನೂ ಜಯಿಸುತ್ತೇನೆಂಬ ಭ್ರಮೆ ಅವನಿಗೂ ಅರ್ಥವಾಗಿದೆ. ಕೋಟಿ ಸುರಿದು ಕೊರೊನಾ ಮಣಿಸಲಾಗದು ಎಂಬ ದರ್ಶನವಾಗಿದೆ. 'ಶ್ರೀಮಂತಿಕೆ' ಕ್ಷಣಿಕ ಎನ್ನುವ ಅರಿವು ಎಲ್ಲರಿಗಲ್ಲದಿದ್ದರೂ ಕೆಲವರಿಗಂತೂ ಆಗಿರುವುದು ಸರಿ.

ಗೆದ್ದು ಬರುವ ಆತ್ಮವಿಶ್ವಾಸವಿದೆ

ಗೆದ್ದು ಬರುವ ಆತ್ಮವಿಶ್ವಾಸವಿದೆ

4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ಒಂದು ಸಣ್ಣ ಕ್ರಿಮಿ ಇಡೀ ವಿಶ್ವವನ್ನೇ ಅಲ್ಲಾಡಿಸಿದೆ. ಎಲ್ಲ ಕ್ಷೇತ್ರಗಳೂ ಘಾಸಿಗೊಳಗಾಗಿವೆ. ನಮ್ಮ ಮನೆ ಮುರಿದಿದೆ, ಮನಸಿಗೆ ಕತ್ತಲಾವರಿಸಿದೆ, ಅರ್ಥ ವ್ಯವಸ್ಥೆ ನೆಲ ಕಚ್ಚಿದೆ, ದುಡಿಯುವ ಕೈಗಳಿಗೆ ಕೋಳ ತೊಡಿಸಲಾಗಿದೆ, ಮಗುವಿನ ಮುಗ್ಧತೆ ಮಾಯವಾಗಿದೆ, ಏಕತಾನತೆ ಕಾಡುತ್ತಿದೆ, ಭವಿಷ್ಯ ಅನೇಕ ಪ್ರಶ್ನೆಗಳನ್ನು ಸೃಷ್ಟಿಸಿದೆ, ಉತ್ತರಗಳು ಕಾಣಿಸುತ್ತಿಲ್ಲವಾಗಿದೆ, ಭಯದಲ್ಲೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇವೆಲ್ಲ ಸವಾಲುಗಳನ್ನು ಎದುರಿಸಿ ನಿಲ್ಲುವ ಧೈರ್ಯ, ಆತ್ಮಸ್ಥೈರ್ಯ, ಎದೆಗಾರಿಕೆ, ಛಲ ನಮ್ಮೆಲ್ಲರಲ್ಲೊ ಇದೆ. ಕೊರೊನಾ ನಮಗೆ ಕಲಿಸಿರುವ ಪಾಠದಿಂದ ಅದು ನಡೆಸುವ ಎಲ್ಲ ರೀತಿಯ ಪರೀಕ್ಷೆಗಳಲ್ಲಿ ಗೆದ್ದುಬರುವ ಆತ್ಮವಿಶ್ವಾಸ ಖಂಡಿತ ನಮಗೆ ಬರುತ್ತದೆ.

'Every cloud has a silver lining' ಎನ್ನುವ ಹಾಗೆ ಬದುಕು 'ಸಿಹಿ ಕಹಿಗಳ ಮಿಶ್ರಣ'. ಎರಡನ್ನೂ ಅನುಭವಿಸೋಣ. ಶಿಕ್ಷಣ, ಆಹಾರ, ಕೃಷಿ, ಆರೋಗ್ಯ, ಹಣಕಾಸು ಮುಂತಾದ ಕ್ಷೇತ್ರಗಳು ಕ್ಷಿಪ್ರಗತಿಯಲ್ಲಿ ಸವಾಲುಗಳನ್ನು ಪಕ್ಕಕ್ಕೆ ಸರಿಸಿ ಮುನ್ನುಗ್ಗುವ ಪ್ರಯತ್ನ ಮಾಡಬೇಕಿದೆ. ಇದಕ್ಕೆಲ್ಲ ನಾವು ಸರ್ವಸನ್ನದ್ಧರಾಗಬೇಕಿದೆ. ನಮ್ಮ ಉತ್ಪನ್ನ ನಮಗೆ ಎನ್ನುವ ನಿಯಮವನ್ನು ಅನುಸರಿಸಿ ಆದಷ್ಟೂ ಪರವಾಲಂಬಿಗಳಾಗದೆ ಸ್ವಾವಲಂಬಿಗಳಾಗುವತ್ತ ಚಿತ್ತ ಹರಿಸಬೇಕಾಗಿದೆ. ಎಲ್ಲದಕ್ಕೂ ಶಸ್ತ್ರವನ್ನೇ ಉತ್ತರವನ್ನಾಗಿಸಿಕೊಳ್ಳದೇ ಯುಕ್ತಿಯಿಂದ ಹೆಜ್ಜೆ ಇಡಬೇಕಾಗಿದೆ. ಈಗ ಕಲಿತ ಪಾಠವನ್ನು ನೆನಪಿನಲ್ಲಿಟ್ಟುಕೊಂಡು ಮುಂದೆಯೂ ಹಾಗೆಯೇ ಬದುಕುವ ಪ್ರಯತ್ನ ಮಾಡಬಹುದು.

ಸರಳ ಜೀವನದತ್ತ ಮುಖ ಮಾಡುವ ಅಗತ್ಯವಿದೆ

ಸರಳ ಜೀವನದತ್ತ ಮುಖ ಮಾಡುವ ಅಗತ್ಯವಿದೆ

ಸರಳ ಜೀವನ ಮಾಡುತ್ತ ಅನಗತ್ಯ ಖರ್ಚುಗಳನ್ನು ನಿಯಂತ್ರಿಸಬಹುದು. 'ಮಾಲ್ ಸಂಸ್ಕೃತಿ'ಯನ್ನು ಕೈಬಿಡಬಹುದು. 'ಕೊಳ್ಳುಬಾಕ' ಸಂಸ್ಕೃತಿಯನ್ನು ಹದ್ದುಬಸ್ತಿನಲ್ಲಿಡಬಹುದು. ಅನಗತ್ಯ ಸಭೆ, ಸಮಾರಂಭಗಳಿಗೆ ಹೋಗದಿದ್ದರೆ ಪ್ರಪಂಚ ಮುಳುಗಿ ಹೋಗುವುದಿಲ್ಲ ಎಂಬುದರ ಬಗ್ಗೆ ಗಂಭೀರವಾಗಿ ಮತ್ತಷ್ಟು ಚಿಂತಿಸಬೇಕಾಗಿದೆ. ಈಗ ಇರುವ ಏಕಾಗ್ರತೆ, ಸಂಯಮ, ತಾಳ್ಮೆ, ಕೂಡಿಬಾಳುವ ಪರಿಕಲ್ಪನೆ ಮತ್ತು 'ಹಾಸಿಗೆ ಇದ್ದಷ್ಟು ಕಾಲು ಚಾಚು' ಎಂಬಿತ್ಯಾದಿ ಅಂಶಗಳನ್ನು ಸದಾ ಕಾಪಿಟ್ಟುಕೊಳ್ಳಬೇಕಾಗಿದೆ. ಸಿದ್ಧತೆ ಎಂದರೆ ಇದೇ ಎಂದು ನನ್ನ ಭಾವನೆ. ಅಪಾಯಗಳನ್ನು ಎದುರಿಸಲು ಉಪಾಯಗಳನ್ನು ಸದಾ ಬತ್ತಳಿಕೆಯಲ್ಲಿರಿಸಿಕೊಂಡಿರುವುದೇ ಜಾಣತನ. ಇಂತಹ ಅನೇಕ ಅಸ್ತ್ರಗಳನ್ನು ನಮ್ಮ ಬತ್ತಳಿಕೆಯಲ್ಲಿರಿಸಿ ವೈರಿಯನ್ನು ಎದುರಿಸುವ ಕಲೆಯನ್ನು ಕೊರೊನಾ ನಮಗೆ ಕಲಿಸಿದೆ. ಹಾಗಾಗಿ ಎದೆಗುಂದದೆ ಹೋರಾಡೋಣ.

ಬದುಕು ಎಲ್ಲರಿಗಾಗಿ ಇರುವ ಶಾಲೆ
ನಾವೆಲ್ಲ ಕಲೆಯುವ ಕಲಿಯುವ ಒಮ್ಮೆಲೆ
ನಾಕಂಕದ ಜೀವನದಿ ಬಿಟ್ಟು ಗರ್ವವ ಈಗಲೇ
ಸದಾ ಜೊತೆಯಾಗಿರೋಣ ಪ್ರೀತಿಯಲೇ...

English summary
Lecturer In Sharadha Vidyamandira PUC College, Mysore N Dhananjay shared his thoughts on how will be the life after corona menace, Corona taught us art of fighting in life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X