• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

life after corona: ಸಕಾರಾತ್ಮಕ ಚಿಂತನೆ ನಮ್ಮಲ್ಲಿದ್ದರೆ ಸಾಕು

By ವಿಜಯಾ ಶಂಕರ್, ಬೆಂಗಳೂರು
|

ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬುಡಮೇಲಾಗುತ್ತಿರುವುದು ಗೋಚರವಾಗುತ್ತಿದೆ. ಈಗಾಗಲೇ ಪರಿಣಿತರು, ಕೊರೊನಾ ನಂತರದ ಬದುಕು ಮೊದಲಿನ ಸ್ಥಿತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಹಾಗಂತ ದೊಡ್ಡ ಮಟ್ಟದ ಬದಲಾವಣೆ ನಿರೀಕ್ಷೆಯೂ ಕಷ್ಟ ಎನ್ನುತ್ತಿದ್ದಾರೆ. ಈ ಕುರಿತು ಇನ್ನಷ್ಟು ಆಳವಾದ ಒಳನೋಟಗಳು ಈ ಕಾಲದ ಅಗತ್ಯ.

ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನವನ್ನು ಮುಂದುವರೆಸುತ್ತಾ, ಈ ದಿನ ಬೆಂಗಳೂರಿನ ಗೃಹಿಣಿ ವಿಜಯಾ ಶಂಕರ್ ಅವರ ಅಭಿಪ್ರಾಯ, ಅನುಭವ ಅನಿಸಿಕೆ ಇಲ್ಲಿದೆ.. ಇದು ಈ ಸರಣಿಯ 17ನೇ ಲೇಖನವಾಗಿದೆ.

Life After Corona:ಎಲ್ಲವೂ ಶಾಶ್ವತ ಎನ್ನುವ ಭ್ರಮೆ ಅಳಿಸಿದೆ

ಓದುಗರೇ, ನೀವು ನಿಮ್ಮ ಉತ್ತರಗಳನ್ನು ನಮಗೆ ಕಳಿಸಬಹುದು. ಅದನ್ನು ಇದೇ ಸರಣಿಯಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?

4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮ್ಮ ಬರಹ/ವಿಡಿಯೋವನ್ನು ಇಮೇಲ್ (lifeaftercorona@one.in) ಮಾಡಿ

ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ವೈಯಕ್ತಿಕ ಅನ್ನೋ ಪ್ರಶ್ನೆ ಬಂದಾಗ ನನಗನಿಸೋದು ಸಾಮಾನ್ಯ ಜನ ಎದುರಿಸೋಕ್ಕೂ ಆರೋಗ್ಯದ ಅಥವಾ ಯಾವುದೊ ಒಂದು ಅನಾರೋಗ್ಯದಿಂದ ಈಗ ಸುಧಾರಿಸಿಕೊಂಡಿರೋರು ಈಗ ಇದನ್ನು ಹೇಗೆ ಅನುಭವಿಸುತ್ತಾರೆ ಅಥವಾ ಎದುರಿಸುತ್ತಾರೆ .

ಸಕಾರಾತ್ಮಕ ಯೋಚನೆ ಇಲ್ಲದ್ದಿದ್ದರೆ ಒಂದು ಹೊರೆ ಯಾಗುವ ಆತಂಕವೇ ಹೆಚ್ಚು ಇರತ್ತೆ. ಏನಾಗತ್ತೋ ಏನಾಗಬಹುದೋ ಎಂಬ ಯೋಚನೆ ನಮ್ಮನು ಅರ್ಧ ಮಾಡಿಬಿಡುತ್ತದೆ . ನಿಮಿಷ ನಿಮಿಷವೂ ಇದೆಲ್ಲ ಬೇಗ ಸರಿಹೋಗಲಿ ಅನ್ನೋ ಮನೋಭಾವ ಬಂದಿರತ್ತೆ. ಮನೇಲೂ ಅಷ್ಟೇ ಮನೆಯೋರು ಮಾತು ಬಂದಾಗ ನೀನು ಒಳ್ಗೆ ಇರು ಮೊನ್ನೆ ಮೊನ್ನೆ ತಾನೇ ಸರಿಹೋಗಿದ್ದಿ ಅನ್ನೋ ಪದಗಳು ಒಂಥರ ಹಿಂಸೆ ಆದ್ರೂ ಒಪ್ಪಲೇಬೇಕು.

ಈಗ ಐದು ತಿಂಗಳ ಹಿಂದೆ ಹೃದಯದ ಕೊಂಚ ಅನಾರೋಗ್ಯವಿದ್ದ ನನಗೆ ನಮ್ ಮನೆಯೋರು ತುಂಬಾನೇ ಕಾಳಜಿಯಿಂದ ನೋಡ್ಕೊತಿದ್ದಾರೆ. ನಮ್ಮ ಮನೇಲಿ ಅಡುಗೆ ಮಾಡಕ್ಕೆ ಕೆಲಸಕ್ಕೆ ಜನ ಇದ್ರೂ ಕೂಡ ಈಗ ಎಲ್ಲರಿಗೂ ಸಂಬಳ ಸಹಿತ ರಜಾ ಕೊಡಲಾಗಿದೆ. ಹಾಗಾಗಿ, ಡಾಕ್ಟರ್ ಒಪ್ಪಿದ್ದರಿಂದ ಅಡುಗೆ, ತಿಂಡಿ ನಾನೇ ಮಾಡ್ತೀನಿ. ಹೊರಗೆ ಹೋಗೆ ಇಲ್ಲ. ಮೊನ್ನೆ ಬೆಂಗಳೂರು ಫೋರ್ಟಿಸ್ ಹಾಸ್ಪಿಟಲ್ ಡಾ. ರಾಜಪಾಲ್ ಸಿಂಗ್ ಅವರು ವಿಡಿಯೋ consultation ಮಾಡಿ ತುಂಬ ಜೋಪಾನವಾಗಿರಿ ಅಂತ ಹೇಳಿ ಧೈರ್ಯ ಹೇಳಿದರು. ಒಟ್ಟಲ್ಲಿ ಸಕಾರಾತ್ಮಕ ಚಿಂತನೆ ನಮ್ಮಲ್ಲಿದ್ದರೆ ನಾವು ಇದನ್ನು ಎದುರಿಸಬಹುದು.

 ಕೊನೆ ಯಾವಾಗ ಮತ್ತು ಹೇಗೆ ಆಗಬಹುದು

ಕೊನೆ ಯಾವಾಗ ಮತ್ತು ಹೇಗೆ ಆಗಬಹುದು

2.. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

ಶುರುವಾದ ಪ್ರತಿಯೊಂದು ಕರ್ಮ ಧರ್ಮ ಏನೇ ಇರಲಿ ಒಂದು ಕೊನೆ ಇದ್ದೇ ಇರುತ್ತದೆ. ಇದು ಹಾಗೆ ವೈದ್ಯಲೋಕ ಎಷ್ಟು ಎಚ್ಚರದಿಂದ ಇದನ್ನು ಅವಲೋಕಿಸುತ್ತಿದೆ ಅಂತ ಎಲ್ಲರಿಗೂ ಗೊತ್ತು. ನಿದ್ದೆ, ಊಟ ಇಲ್ಲದೆ ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ಜಯ ಸಿಕ್ಕೇಸಿಗುತ್ತದೆ ಸಿಗಲೇಬೇಕು. ಗೆಲ್ಲಲೇ ಬೇಕು ಒಂದು ದಿನ ಗೆದ್ದೇ ಗೆಲ್ಲುತ್ತೆ ಒಳ್ಳೆತನ .

ಹಗಲು ರಾತ್ರಿ ದುಡಿಯುತ್ತಿದ್ದಾರೆ ನಮ್ಮ ಡಾಕ್ಟರ್ಸ್, ಅವರ ಪರಿಶ್ರಮ ನಿರರ್ಥಕವಾಗಲು ಸಾಧ್ಯವೇ ಇಲ್ಲ.ಇದರಿಂದ ನಾವು ಈಚೆ ಬರ್ತಿವಿ ಅನ್ನೋ ವಿಶ್ವಾಸ ಒಂದೇ ಸಾಕು ಇಲ್ಲ ಅಂದ್ರೆ ಎದುರಿಸೋದು ಸುಲಭ ಅಲ್ಲ. ಆ ವೈದ್ಯರನ್ನು ನಮಿಸೋಣ ನಮಗಾಗಿ ಜೇವನ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ .

Life After Corona: ಪ್ರಕೃತಿ ಕಲಿಸಿದ ಪಾಠವನ್ನು ಅರಿತುಕೊಳ್ಳೋಣ

ಜೊತೆಗೆ ಆಯಾಗಳು, ಸಿಸ್ಟರ್ಸ್, ಬ್ರದರ್ಸ್, ಪ್ರತಿಯೊಬ್ಬರೂ ನಮಗಾಗಿ ದುಡಿದಿದ್ದಾರೆ. ವೈದ್ಯರಿಗಿಂತ ದೇವರಿಲ್ಲ ಅದನ್ನು ನಂಬಬೇಕು ಈ ಸಮಯಕ್ಕೆ ಅದೊಂದೇ ನಮಗಿರುವ ಮಾರ್ಗ

ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು

ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು

3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?

ಕೊರೊನ ನಂತರದ ದಿನಗಳು...

ಈ ಕಾಯಿಲೆ ಬಡವ ಶ್ರೀಮಂತ ಅಂತ ಹೇಳಿ ಬರಲಿಲ್ಲ ಅಲ್ವಾ. ಅದರಿಂದ ಇದು ಎಲ್ಲರಿಗೂ ಒಂದೇ . ಸರ್ಕಾರದಿಂದ ನಾವ್ ಏನ್ ಕೇಳ್ತಿವಿ ಅನ್ನೋದಕ್ಕಿಂತ ಸರ್ಕಾರಕ್ಕೆ ನಾವ್ ಏನ್ ಕೊಡ್ತಿವಿ ಅನ್ನೋದು ನನ್ನ ಪ್ರಕಾರ ತುಂಬಾ ಮುಖ್ಯ ಆಗತ್ತೆ .

ಇಲ್ಲಿ ಸಿರಿವಂತರು ಹೇಗೋ ಆರಾಮಾಗಿ ಇದ್ದುಬಿಡುತ್ತಾರೆ. ಬಡವರಿಗೆ ತುಂಬ ಅಲ್ಲದೆ ಇದ್ರೂ ಅನುಕೂಲ ಅಂತೂ ಇರತ್ತೆ ..ದಿನಸಿ ಕೊಡ್ತಿದಾರೆ, ಊಟ ಕೊಡ್ತಿದಾರೆ, ಹೀಗೆ ಇನ್ನು ಅನೇಕ ಸವಲತ್ತುಗಳಿವೆ. ಆದ್ರೆ ಇಲ್ಲಿ ಹೆಣಗಾಡುತ್ತಿರೋರು ಮಧ್ಯಮ ಹಾಗು ಕೆಳಮಧ್ಯಮ ವರ್ಗದವರು, ಕೆಳಕ್ಕೆ ಸಂಕೋಚ, ಸುಖವಾಗಿರಕ್ಕೆ ಹಣ ಇರಲ್ಲ. ಅಂಥೋರಿಗೆ ನಾವು ಏನು ಮಾಡಕ್ಕೆ ಆಗತ್ತೆ ಅನ್ನೋ ಚಿಂತನೆ ಇರಬೇಕು. ಅವ್ರು ಕೇಳಲ್ಲ ಆದ್ರೆ ಅನುಭವಿಸ್ತಾರೆ ಕಷ್ಟ ನೋಡೋದು ಅವರೇ ಹೆಚ್ಚು. ಸರ್ಕಾರ ಆ ಕಡೆನೂ ಗಮನ ಹರಿಸಿದರೆ ಅಂಥವರಿಗೂ ಒಂದು ನೆಲೆ ಸಿಗುತ್ತದೆ.

ನಾವ್ ನಮ್ ಕಡೆಯಿಂದ ಮಾಡಿದ್ದೂ ಅದ್ದನ್ನೇ ನಾವು ಬಡವರಿಗಿಂತ ನಮ್ ಫ್ಯಾಕ್ಟರಿ ಮತ್ತು ಕಂಪನಿಯಿಂದ ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಟ್ವಿ ಅಂತ ಹೇಳಕ್ಕೆ ಹೆಮ್ಮೆ ಆಗತ್ತೆ.

ಕೊರೊನಾ ಒಡ್ಡುವ ಸವಾಲುಗಳು

ಕೊರೊನಾ ಒಡ್ಡುವ ಸವಾಲುಗಳು

4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ಸವಾಲುಗಳು ಅನೇಕ ಬರುತ್ತವೆ ಎದುರಿಸಿ ನಿಲ್ಲುವ ಧೈರ್ಯ ಆತ್ಮಸ್ಥೈರ್ಯ ನಮಗಿರಬೇಕು. ಮಾಧ್ಯಮಗಳನ್ನು ತೆಗಳುವವರೇ ಹೆಚ್ಚು ಅಂದ್ರೆ ಅವರು ಕೆಲವೊಮ್ಮೆ ನಮ್ಮ ಒಳಿತಿಗೆ ಹೇಳ್ತಾರೆ ಅಥವಾ ಬರೀತಾರೆ. ಸಾಮಾಜಿಕ ಕಳಕಳಿ ಇರಲಿ ಆದರೆ ಸಾಮಾಜಿಕ ಅಂತರ ಬೇಕು. ಇರುವಲ್ಲೇ ಇದ್ದು, ನೆಂಟರ ಬಗ್ಗೆ ವಿಚಾರಿಸಬಹುದು ಈಗಂತೂ ಅಂತ ಎಲ್ಲ ಅನುಕೂಲಗಳು ಇವೆ. ದೂರವಾಣಿ, ವಾಟ್ಸಪ್, ಫೇಸ್ಬುಕ್ ಎಲ್ಲ ತುಂಬ ಸಹಾಯ ಮಾಡುತ್ತಿವೆ. ಅವನ್ನು ಬಳಸಿ ಆರೋಗ್ಯ ವಿಚಾರಿಸಿ..

Life After Corona: ಸರಳ ಜೀವನ ನಡೆಸಿ, ಚಿಂತೆ ಮಾಡೋದು ಬಿಡಿ

ಹೆಚ್ಚು ಹೊರಗಡೆ ಹೋಗದೆ ಮುಖ್ಯ ಕೆಲಸವಿದ್ದಾಗ ಮಾತ್ರ ಹೊರಗಡೆ ಹೋಗಿ ಬನ್ನಿ. ಸರ್ಕಾರಿ ಅಥವಾ ಖಾಸಗಿ ನೌಕರರಾದರೆ ಮಾಸ್ಕ್ ಇಲ್ಲದೆ ಹೋಗಬೇಡಿ ಅಯ್ಯೋ ಮುಗಿತು ಅನ್ಕೋಬೇಡಿ ಇನ್ನು ಕೆಲವು ದಿನ ಅಲ್ಲ ತಿಂಗಳುಗಳು ಹೀಗಿರಿ. ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಕೊರೊನ ಏನು ಇಡೀ ಜಗತ್ತನ್ನೇ ಗೆಲ್ಲಬಹುದು. ಆದಷ್ಟು ಹೊರಗಡೆ ತಿನ್ನಬೇಡಿ. ನಿಮ್ಮ ವೈದ್ಯವನ್ನು ನೀವೇ ಮಾಡಿಕೊಳ್ಳಬೇಡಿ. ಬೇಕಾದಾಗ ಡಾಕ್ಟರ್ಸ್ ಸಂಪರ್ಕಿಸಿ ಖಂಡಿತ ಸಹಾಯ ಮಾಡುತ್ತಾರೆ.

ವಾಕ್ ಮಾಡಕ್ಕೆ ಆಗದೆ ಇದ್ದರೆ ಮನೇಲೆ ಸುಲಭವಾದ ವ್ಯಾಯಾಮ ಮಾಡಿ ತುಸು ಪ್ರಾಣಾಯಾಮನು ಮಾಡಿ. ಕಲಿತಿಲ್ಲದ್ದಿದ್ದರೆ ಸಾಮಾಜಿಕ ತಾಣದಲ್ಲಿ ಹುಡುಕಿ ತಿಳಿದುಕೊಂಡು ಮಾಡಿ.ದೇಹದಲ್ಲಿ ರೋಗ ನಿಯಂತ್ರಿಸುವ ಶಕ್ತಿ ಹುಚ್ಚು ಮಾಡಿಕೊಳ್ಳಬೇಕು. ಅದಕ್ಕೆ ನಮ್ಮ ಅನುಕೂಲಕ್ಕೆ ಆಗುವಂತ ಹಣ್ಣು ಬೇಳೆ ಕಾಳುಗಳನ್ನು ಉಪಯೋಗಿಸಿ . ಲೋಕಾಃ ಸಮಸ್ತ ಸುಖಿನೋ ಭವಂತು

English summary
#LifeAfterCorona: Homemaker From Bengaluru Vijaya Shankar's insights on how to fight Coronavirus, how positive thinking can help manage life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more