ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Life After Corona: ಒಳ್ಳೆ ದಿನಗಳು ನಮಗಾಗಿ ಕಾಯ್ತಾ ಇವೆ ಎಂಬ ನಂಬಿಕೆ

By ವಾಣಿಶ್ರೀ ಆರ್ ಭಟ್, ಮೈಸೂರು
|
Google Oneindia Kannada News

ಕೊರೊನಾವೈರಸ್‌ ಭೀತಿಯಿಂದ ಬದುಕು ಉಳಿಸಿಕೊಳ್ಳಲು ಜನ ಹೆಣಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬುಡಮೇಲಾಗುತ್ತಿರುವುದು ಗೋಚರವಾಗುತ್ತಿದೆ. ಈಗಾಗಲೇ ಪರಿಣಿತರು, ಕೊರೊನಾ ನಂತರದ ಬದುಕು ಮೊದಲಿನ ಸ್ಥಿತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಹಾಗಂತ ದೊಡ್ಡ ಮಟ್ಟದ ಬದಲಾವಣೆ ನಿರೀಕ್ಷೆಯೂ ಕಷ್ಟ ಎನ್ನುತ್ತಿದ್ದಾರೆ. ಈ ಕುರಿತು ಇನ್ನಷ್ಟು ಆಳವಾದ ಒಳನೋಟಗಳು ಈ ಕಾಲದ ಅಗತ್ಯ.

ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನವನ್ನು ಮುಂದುವರೆಸುತ್ತಾ, ಈ ದಿನ ಮೈಸೂರಿನ ಗೃಹಿಣಿ ವಾಣಿಶ್ರೀ ಆರ್ ಭಟ್ ಅವರ ಅಭಿಪ್ರಾಯ, ಅನುಭವ ಅನಿಸಿಕೆ ಇಲ್ಲಿದೆ.. ಇದು ಈ ಸರಣಿಯ 18ನೇ ಲೇಖನವಾಗಿದೆ.

life after corona: ಸಕಾರಾತ್ಮಕ ಚಿಂತನೆ ನಮ್ಮಲ್ಲಿದ್ದರೆ ಸಾಕುlife after corona: ಸಕಾರಾತ್ಮಕ ಚಿಂತನೆ ನಮ್ಮಲ್ಲಿದ್ದರೆ ಸಾಕು

ಓದುಗರೇ, ನೀವು ನಿಮ್ಮ ಉತ್ತರಗಳನ್ನು ನಮಗೆ ಕಳಿಸಬಹುದು. ಅದನ್ನು ಇದೇ ಸರಣಿಯಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.

Life After Corona: ಪ್ರಕೃತಿ ಕಲಿಸಿದ ಪಾಠವನ್ನು ಅರಿತುಕೊಳ್ಳೋಣLife After Corona: ಪ್ರಕೃತಿ ಕಲಿಸಿದ ಪಾಠವನ್ನು ಅರಿತುಕೊಳ್ಳೋಣ

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?
3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?
4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮ್ಮ ಬರಹ/ವಿಡಿಯೋವನ್ನು ಇಮೇಲ್ ([email protected]) ಮಾಡಿ

ಜಗತ್ತಿಗೆ ಆವರಿಸಿರುವ ಬಹಳ ಕೆಟ್ಟ ಶಾಪವಾಗಿದೆ

ಜಗತ್ತಿಗೆ ಆವರಿಸಿರುವ ಬಹಳ ಕೆಟ್ಟ ಶಾಪವಾಗಿದೆ

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ನಮಸ್ಕಾರ, ನಾನೊಬ್ಬ ಗೃಹಿಣಿ. ನಾವು ಯಾವತ್ತೂ ಊಹಿಸಿರದ ಅತ್ಯಂತ ಕಠಿಣವಾದ ಪರಿಸ್ಥಿತಿಯನ್ನು ಈ ಕೊರೊನಾ ತೊಂದರೆಯಿಂದ ಅನುಭವಿಸುತ್ತಿದ್ದೇವೆ. ಇದೊಂದು ಜಗತ್ತಿಗೆ ಆವರಿಸಿರುವ ಬಹಳ ಕೆಟ್ಟ ಶಾಪವಾಗಿದೆ ಅನಿಸುತ್ತೆ.

ಇದು ಶೀಘ್ರವಾಗಿ ಹರಡುವ ಭಯಂಕರ ವಾದ ಸಾಂಕ್ರಾಮಿಕ ಕಾಯಿಲೆ ಆಗಿರುವುದರಿಂದ ಎಲ್ಲರೂ ಮೊದಲು ವೈಯಕ್ತಿಕವಾಗಿ ತಮ್ಮ ತಮ್ಮ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ನಾನು ಇಂತಹ ಸಂದರ್ಭದಲ್ಲಿ ಹೊರಗೆ ಹೋಗುವುದಿಲ್ಲ, ಮನೆಯಿಂದ ಯಾರಿಗೂ ಹೊರಗೆ ಹೋಗಲು ಬಿಡುವುದಿಲ್ಲ. ಆ ರೀತಿ ಹೋಗಲೇ ಬೇಕಾದ ಅನಿವಾರ್ಯ ಸಂದರ್ಭದಲ್ಲಿ ಮುಖಕ್ಕೆ ಪೂರ್ತಿಯಾಗಿ ಮಾಸ್ಕ್ ಹಾಕಿಕೊಂಡು ಹೋಗುವೆ. ದಿನಸಿ, ತರಕಾರಿಗಳನ್ನು ಖರೀದಿ ಮಾಡುವಾಗ ದೂರದಲ್ಲಿ ನಿಂತು ಖರೀದಿ ಮಾಡಿ ಆದಷ್ಟು ಬೇಗ ಅಲ್ಲಿಂದ ಹೊರಟು ಮನೆಗೆ ಬರುತ್ತೇನೆ, ಯಾರೊಂದಿಗೂ ಕೂಡಾ ವ್ಯರ್ಥ ಮಾತಿಗೆ ಅವಕಾಶ ಕೊಡುವುದಿಲ್ಲ.ಮನೆಗೆ ಬಂದ ತಕ್ಷಣ ನಾನು ಮೊದಲು ಕೈ ಕಾಲು ತೊಳೆದು ಒಂದು ಸಾರಿ ಉಪ್ಪು ಹಾಕಿದ ಬಿಸಿ ನೀರಲ್ಲಿ ಬಾಯಿ ಮುಕ್ಕಳಿಸಿ, ನಂತರ ಮನೆಗೆ ತಂದ ಪದಾರ್ಥ ಗಳನ್ನು ಚೆನ್ನಾಗಿ ತೊಳೆದು ಇಡುತ್ತೇನೆ. ಇಷ್ಟು ಕೆಲಸ ಮಾಡುವಾಗ ಮನೆಯಲ್ಲಿ ಯಾರೊಂದಿಗೂ ಕೂಡಾ ಮಾತು ಆಡುವುದಿಲ್ಲ.

ಪರಿಣಾಮಕಾರಿಯಾದ ಔಷಧಿ ನಿರೀಕ್ಷೆಯಿದೆ

ಪರಿಣಾಮಕಾರಿಯಾದ ಔಷಧಿ ನಿರೀಕ್ಷೆಯಿದೆ

2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

ಇದೊಂದು ಇಡೀ ಜಗತ್ತಿನ ವೈದ್ಯಲೋಕದಲ್ಲಿ ಅತಿಯಾದ ಭಯ ಹುಟ್ಟಿಸಿದ ಕೆಟ್ಟ ವೈರಸ್ ಆಗಿದೆ. ಜೀವ ಉಳಿಸುವ ಮತ್ತು ಉಳಿಸಿದಂತ ಎಷ್ಟೋ ವೈದ್ಯರು ಇದರಿಂದ ಸಾವಿಗೆ ತುತ್ತಾಗಿದ್ದಾರೆ. ರೋಗಿಗಳನ್ನು ಮುಟ್ಟದೆ ಅವರಿಗೆ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಮುಟ್ಟಿದರೆ ಆ ಭಯಾನಕ ಸೋಂಕು ವೈದ್ಯರಿಗೇ ಹರಡುವ ಸಾಧ್ಯತೆ ಹೆಚ್ಚು ಹೀಗಿರುವಾಗ ಹೇಗೆ ಚಿಕಿತ್ಸೆ ಕೊಡಬೇಕು ಎನ್ನುವುದೇ ಒಂದು ದೊಡ್ಡಸವಾಲಾಗಿದೆ. ಎಷ್ಟು ಮುಂಜಾಗ್ರತಾ ಕ್ರಮ ವಹಿಸಿದರೂ ಕೂಡಾ ಕೆಲವು ವೈದ್ಯರು ಇದಕ್ಕೆ ಬಲಿಯಾಗಿದ್ದಾರೆ. ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರತರಾಗಿರುವ ಎಲ್ಲಾ ವೈದ್ಯರು ಇಂದು ಲೋಕದ ಒಳಿತಿಗಾಗಿ ಧರೆಗೆ ಇಳಿದು ಬಂದ ಭಗವಂತ ನಂತೆ ಕಾಣುತ್ತಿದ್ದಾರೆ. ಅವರೆಲ್ಲರಿಗೂ ನನ್ನ ವಿನಮ್ರ ನಮನಗಳು 🙏🙏🙏. ಇಲ್ಲಿ ವೈದ್ಯರ ಕುಟುಂಬಗಳೂ ಕೂಡಾ ತ್ಯಾಗ ಮಾಡುತ್ತಿದ್ದಾರೆ ಅನಿಸುತ್ತದೆ.

Life After Corona:ಎಲ್ಲವೂ ಶಾಶ್ವತ ಎನ್ನುವ ಭ್ರಮೆ ಅಳಿಸಿದೆLife After Corona:ಎಲ್ಲವೂ ಶಾಶ್ವತ ಎನ್ನುವ ಭ್ರಮೆ ಅಳಿಸಿದೆ

ಎಲ್ಲರಿಗೂ ಗೊತ್ತಿರುವ ಹಾಗೆ ಇಂದಿನ ಈ ಆಧುನಿಕ ಯುಗದಲ್ಲಿ ಮಡಿವಂತಿಕೆ ತುಂಬಾ ಕಮ್ಮಿ ಆಗಿ, ಎಲ್ಲರೂ ವಿದೇಶಿ ಸಂಸ್ಕೃತಿ ಯನ್ನು ಅನುಸರಿಸಿ, ಅದರಂತೆ ಕೈ ಕುಲುಕುವುದು, ಅಪ್ಪಿಕೊಂಡು ಶುಭಾಶಯ ತಿಳಿಸುವುದು ಸಾಮಾನ್ಯ ವಾಗಿದೆ. ಇದನ್ನು ಮಾಡದೇ ಇರುವ ಜನರನ್ನು ಹಳ್ಳಿ ಜನಾ, ಹಳೇ ಕಾಲದ ಜನಾ ಅಂತ ಆಡಿಕೊಂಡು ನಗ್ತಾ ಅವಮಾನ ಮಾಡುವ ಕಾಲ ಈಗಿನ ಕಾಲ.

ಅನೇಕ ದೈತ್ಯರ ಸಂಹಾರಕ್ಕೋಸ್ಕರ ದೇವರು ಅವತಾರ ತಾಳಿದಂತೆ ಈ ಕೊರೊನಾ ದೈತ್ಯನ ಸಂಹಾರಕ್ಕಾಗಿ ಎಲ್ಲಾ ದೇಶದ ಅಧ್ಯಕ್ಷರು, ಮಂತ್ರಿಗಳು, ವೈದ್ಯರು ಅಸ್ತ್ರ ವನ್ನು ತಯಾರು (ಇಲ್ಲಿ ಅಸ್ತ್ರ ಎಂದರೆ ಔಷದಿ )ಮಾಡುವಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಮಗೆ ಗೊತ್ತು ಬಹುತೇಕ ರಾಷ್ಟ ಗಳು ಸಫಲತೆ ಹೊಂದುವತ್ತ ಸಾಗುತ್ತಿವೆ. ಯಾವುದಾದರೂ ಒಂದು ಅತ್ಯಂತ ಪರಿಣಾಮ ಕಾರಿಯಾದ ಔಷಧಿ ಬಂದ ನಂತರ ಮತ್ತು ಜಗತ್ತಿನ ಎಲ್ಲಾ ಜನರು ಸ್ವಲ್ಪ ದಿವಸ ಸಾಮಾಜಿಕ ಅಂತರ ಕಾಯ್ದು ಕೊಂಡು ಜೀವನ ನಡೆಸಿದರೆ, ಆವಾಗ ಈ ಮಹಾಮಾರಿಯ ಅಂತ್ಯ ವಾಗಬಹುದು ಅಂತ ನನ್ನ ಅನಿಸಿಕೆ. ಜನರು ವಿದೇಶಿ ವ್ಯಾಮೋಹ ಕ್ಕೆ, ಸಂಸ್ಕೃತಿಗೆ ಬಲಿಯಾಗದೆ ನಮ್ಮ ಸಂಸ್ಕೃತಿ ಯನ್ನು ನಂಬಿ, ಉಳಿಸಿ ಬೆಳೆಸಿಕೊಂಡು ಹೋದರೆ ಎಲ್ಲದಕ್ಕೂ ಉತ್ತಮ ಎಂದು ನನ್ನ ಅನಿಸಿಕೆ.

ಶ್ರೀಮಂತರಿಗೆ ತೊಂದರೆಯಾಗುವುದಿಲ್ಲ

ಶ್ರೀಮಂತರಿಗೆ ತೊಂದರೆಯಾಗುವುದಿಲ್ಲ

3.'ಕರೋನ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆ ಗಳು ಇನ್ನಷ್ಟು ಪ್ರಬಲರಾಗುತ್ತಾರೆ ಎಂಬ ವಿಶ್ಲೇಷಣೆ ಇದೆ, ' ನಿಮಗೆ ಏನು ಅನಿಸುತ್ತದೆ?

ಈ ಮೇಲಿನ ಹೇಳಿಕೆ ಸತ್ಯವಾಗಬಹುದು ಅಂತ ನನ್ನ ಅನಿಸಿಕೆ. ಈಗಾಗಲೇ ಕೊರೊನಾ ಹಾವಳಿಯಿಂದ ಎಲ್ಲಾ ದೇಶಗಳು ಸಾಕಷ್ಟು ನಷ್ಟ ಅನುಭವಿಸಿವೆ, ಎಲ್ಲಾ ದೇಶಗಳ ಆರ್ಥಿಕ ಸ್ಥಿತಿ ಕೆಳಮಟ್ಟಕ್ಕೆ ಇಳಿದಿದೆ. ಈ ಮಹಾಮಾರಿಯಿಂದ ಜನರು ತಮ್ಮ ಜೀವವನ್ನು ಉಳಿಸಿ ಕೊಳ್ಳಲು ದೇಶದಲ್ಲಿ, ಪ್ರತೀ ರಾಜ್ಯಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದಾರೆ. ಯಾರನ್ನೂ ಮನೆಯಿಂದ ಹೊರಗೆ ಬರದಂತೆ ಆದೇಶ ಹೊರಡಿಸಿದ್ದಾರೆ, ಹೀಗಿರುವಾಗ ಕೂಲಿ ಕಾರ್ಮಿಕರಿಂದ ಹಿಡಿದು ಮಾಲೀಕನಾದವನೂ ಕೂಡಾ ಮನೆಯಿಂದ ಹೊರ ಹೋಗುವಂತಿಲ್ಲ. ಇಂತಹ ಪರಿಸ್ಥಿತಿ ಯಲ್ಲಿ ಸರಕಾರದ ಆದೇಶ ಎಲ್ಲಾ ವರ್ಗದ ಜನರಿಗೂ ಒಂದೇ ಆಗಿದೆ, ಏಕೆಂದರೆ ಕರೋನ ಮಾರಿ ಬರುವಾಗ "ಬಡವ, ಬಲ್ಲಿದ "ಎಂದು ಭೇದ ಮಾಡಿಲ್ಲ. ಇಲ್ಲಿ ಕಾಯಿಲೆ ಎಲ್ಲರಿಗೂ ಒಂದೇ ರೀತಿ ಪರಿಣಾಮ ಬೀರುವುದು. ಆದರಿಂದ ಸರಕಾರದ ಆದೇಶ ಎಲ್ಲರೂ ಪಾಲಿಸಬೇಕು. ಸಿರಿವಂತ ಜನರು ದುಡ್ಡನ್ನು ದುಪ್ಪಟ್ಟು ಮಾಡಿ ಇಟ್ಟು ಕೊಂಡಿರುತ್ತಾರೆ, ಇಂತಹ ಸಮಯದಲ್ಲಿ ಅವರಿಗೆ ಯಾವ ತೊಂದರೆ ಆಗುವುದಿಲ್ಲ.

ಭವಿಷ್ಯದ ಚಿಂತೆಯಲ್ಲಿ ಕೂಲಿ ಕಾರ್ಮಿಕರು

ಭವಿಷ್ಯದ ಚಿಂತೆಯಲ್ಲಿ ಕೂಲಿ ಕಾರ್ಮಿಕರು

ಕೂಲಿ ಮಾಡಿ, ಅಥವಾ ಇಂತಹ ಬೇರೆ ಅನೇಕ ಕೆಲಸ ಗಳನ್ನು ಮಾಡಿ ಹೊಟ್ಟೆಹೊರೆಯುವ ಜನರ ಪರಿಸ್ಥಿತಿ ತುಂಬ ಕೆಟ್ಟದಾಗಿರುತ್ತದೆ. ಕೆಲಸಕ್ಕೆ ಹೋಗೋ ಹಾಗಿಲ್ಲ, ಮನೆ ನೋಡಿಕೊಳ್ಳಲು ಕೈಯಲ್ಲಿ ದುಡ್ಡು ಇಲ್ಲಾ. ಇಂತವರು ಒಂದೋ ಭಿಕ್ಷೆ ಬೇಡಬೇಕು, ಆದರೂ ನೆರೆ ಹೊರೆ ಯವರು ಎಷ್ಟು ಸಹಾಯ ಮಾಡಿಯಾರು?? ಅವರ ಭವಿಷ್ಯ ದ ಚಿಂತೆ ಅವರಿಗೆ. ಈ ರೀತಿ ಆದಾಗ ಜೀವನವೇ ಬೇಸರವಾಗಿದೆ ಅನೇಕರು ಆತ್ಮಹತ್ಯೆ ಗೆ ಯೋಚನೆ ಮಾಡಬಹುದು.

Life After Corona: ಸರಳ ಜೀವನ ನಡೆಸಿ, ಚಿಂತೆ ಮಾಡೋದು ಬಿಡಿLife After Corona: ಸರಳ ಜೀವನ ನಡೆಸಿ, ಚಿಂತೆ ಮಾಡೋದು ಬಿಡಿ

ಇದು ಒಂದಾದರೆ, ದೊಡ್ಡ ದೊಡ್ಡ ನಗರ ಗಳಿಗೆ ದುಡ್ಡಿಗಾಗಿ, ಕೆಲಸಕ್ಕಾಗಿ ವಲಸೆ ಬರುವ, ಬಂದಿರುವ ಅನೇಕ ಜನರು ತಿರುಗಿ ತಮ್ಮ ತಮ್ಮ ಹಳ್ಳಿ ಗಳಿಗೆ ವಾಪಾಸ್ ಹೋಗಬಹುದು, ನಗರ ಪ್ರದೇಶ ಗಳಿಗಿಂತ ಹಳ್ಳಿಯ ಜೀವನದಲ್ಲಿ ಖರ್ಚು ವೆಚ್ಚ ಗಳು ಕಡಿಮೆ. ಈ ರೀತಿ ನಗರ ಗಳಲ್ಲಿ ಜನಸಂಖ್ಯೆ ಕಡಿಮೆಯಾಗಿ, ಅನೇಕ ಜಾಗ ಗಳು, ಮನೆಗಳು ಖಾಲಿ ಆದಾಗ, ಮತ್ತೆ ಅದೇ ಶ್ರೀಮಂತರು, ದುಡ್ಡಿರುವ ದೊಡ್ಡ ಜನರು ಮನೆ, ಜಾಗ ಗಳನ್ನು ಖರೀದಿ ಮಾಡಿ ತಮ್ಮ ಆಸ್ತಿ ಗಳನ್ನು ಇನ್ನೂ ಜಾಸ್ತಿ ಮಾಡಿಕೊಳ್ಳುವ ಕೆಲಸದಲ್ಲೇ ಸುಖ ಕಾಣುತ್ತಾರೆ. ಬಡವ ಬಡವ ನಾಗಿಯೇ ಉಳಿಯುತ್ತಾನೆ. ಇದು ವಿಪರ್ಯಾಸ. ಜನರನ್ನು ಆಳುವ ಕೈಗಳು ಕೂಡಾ ಇನ್ನಷ್ಟು ಪ್ರಬಲ ವಾಗಿ ತಮ್ಮ ಕೆಲಸ ಕಾರ್ಯ ಗಳನ್ನು ಮುಂದು ವರೆಸುತ್ತವೆ.

ಮಾನಸಿಕವಾಗಿ ಕುಗ್ಗಿ ಹೋಗುವುದು ಕೂಡಾ ಸಾಮಾನ್ಯ

ಮಾನಸಿಕವಾಗಿ ಕುಗ್ಗಿ ಹೋಗುವುದು ಕೂಡಾ ಸಾಮಾನ್ಯ

4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ಕರೋನ ಬಂದಾಗಿನಿಂದಲೂ ಜನರು ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಇದ್ದಕ್ಕಿದ್ದಂತೆ ಜನರ ದೈನಂದಿನ ಚಟುವಟಿಕೆ ಯಲ್ಲಿ ಆಗಿರುವ ವ್ಯತ್ಯಾಸ, ಸೇವಿಸುವ ಆಹಾರ ಪದಾರ್ಥ ಗಳಲ್ಲಿ ಆಗಿರುವ ವ್ಯತ್ಯಾಸ, ಎಂದೂ ಮನೆಯಲ್ಲಿ ಕೆಲಸವಿಲ್ಲದೇ ಖಾಲಿ ಕುಳಿತು ಕೊಳ್ಳದ ಗಂಡಸರ ಜೀವನದಲ್ಲಿ ಮನೆಯಲ್ಲೇ ಬಂಧಿಯಾಗಿರುವ ಪರಿಸ್ಥಿತಿ ತಂದ ವ್ಯತ್ಯಾಸ ಹೀಗೇ ಇನ್ನೂ ಅನೇಕ ವ್ಯತ್ಯಾಸ ಗಳು ಆಗಿ ಇದೆಲ್ಲ ಒಂದು ಸವಾಲಾಗಿ ನಾವೆಲ್ಲ ಈಗಾಗಲೇ ಸ್ವೀಕಾರ ಮಾಡಿ ಆಗಿದೆ. ಹೀಗೇ ಆದಾಗ ಅನೇಕ ಜನರು ತಮ್ಮ ತಮ್ಮಲ್ಲೇ ಏನೋ ಯೋಚನೆ ಮಾಡಿ, ಮನಸ್ಸಿನ ಸ್ಥಿಮಿತ ಕಳೆದುಕೊಂಡು, ಮಾನಸಿಕವಾಗಿ ಕುಗ್ಗಿ ಹೋಗುವುದು ಕೂಡಾ ಸಾಮಾನ್ಯ ವಾಗಿದೆ.ಕೆಟ್ಟದಾಗಿ ಯೋಚನೆ ಮಾಡುವುದು ಬಿಟ್ಟು, ಮುಂದೆ ಒಳ್ಳೆಯ ದಿನಗಳು ನಮಗಾಗಿ ಕಾಯ್ತಾ ಇವೆ ಎಂದು ಯೋಚಿಸಿ, ಮೈ ಮನಸ್ಸನ್ನು ಆದಷ್ಟು ಶುಚಿ ಯಾಗಿ ಇಟ್ಟುಕೊಳ್ಳಲು ಪ್ರಯತ್ನ ಮಾಡಬೇಕು.

ಸ್ವಲ್ಪ ತಾಳ್ಮೆ ಇರಬೇಕು ಅಷ್ಟೇ

ಸ್ವಲ್ಪ ತಾಳ್ಮೆ ಇರಬೇಕು ಅಷ್ಟೇ

ಮನೆಯಲ್ಲಿ ಎಲ್ಲರೂ ಆದಷ್ಟು ಶುಚಿತ್ವ ವನ್ನು ಕಾಪಾಡಿಕೊಂಡು ಹೋಗಬೇಕು. ಲಾಕ್ಡೌನ್ ಮುಗಿದು ಎಲ್ಲಾ ಸರಿ ಹೋದರೂ ಕೂಡಾ ಆದಷ್ಟು ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು, ಉತ್ತಮವಾದ, ಆರೋಗ್ಯವಾದ ಜೀವನ ಶೈಲಿಯನ್ನು ಅಳವಡಿಸಿ ಕೊಂಡು ಹೋಗಬೇಕು. ಆದಷ್ಟು ಶುದ್ಧ ಆಹಾರವನ್ನು ಅನುಸರಿಸಿ, ಅದರ ಉಪಯೋಗ ವನ್ನು, ಅದರಿಂದ ಆಗುವ ಲಾಭ ವನ್ನು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಿ ಕೊಡಬೇಕು. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರದ ಅರಿವು ನಮ್ಮ ಮಕ್ಕಳಲ್ಲಿ ಮೂಡುವಂತೆ ಮಾಡಬೇಕು. ದೇಹದಲ್ಲಿ ರೋಗನಿರೋಧಕ ಶಕ್ತಿ ಯನ್ನು ಹೆಚ್ಚು ಮಾಡುವ ಆಹಾರ ಪದಾರ್ಥಗಳನ್ನು ಹೆಚ್ಚು ಉಪಯೋಗಿಸುವಂತೆ ನೋಡಿ ಕೊಳ್ಳಬೇಕು. ಈಗಿನ ಮಕ್ಕಳು ತುಂಬ ಚುರುಕು ಅವರಿಗೂ ಕೂಡಾ ಈ ಕೊರೊನಾದ ಬಗ್ಗೆ ಚೆನ್ನಾಗಿ ತಿಳಿದಿದೆ, ಅವರಿಗೂ ಕೂಡಾ ಅದರ ಲಕ್ಷಣ ಗಳನ್ನು ತಿಳಿಸಿ, ಮುಂಜಾಗ್ರತಾ ಕ್ರಮಗಳನ್ನು ತಿಳಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳು ಭಯ ಪಡುವಂತೆ ಮಾಡಬಾರದು. ಯಾವುದೇ ಕಷ್ಟ ಬಂದರೂ ಕೂಡಾ ಅದನ್ನು ಸಮರ್ಥ ವಾಗಿ ಎದುರಿಸುವ ಜಾಣ್ಮೆ ಯನ್ನು ಕಲಿಸಿಕೊಡಬೇಕು. ಕತ್ತಲೆ ಮುಗಿದ ಮೇಲೆ ಹೇಗೆ ಬೆಳಕು ಮೂಡುತ್ತದೆಯೋ ಹಾಗೆಯೇ ಕೆಟ್ಟ ದಿನಗಳು ಕಳೆದ ಮೇಲೆ ಒಳ್ಳೇ ದಿನಗಳು ಬಂದೇ ಬರುತ್ತವೆ ಸ್ವಲ್ಪ ತಾಳ್ಮೆ ಇರಬೇಕು ಅಷ್ಟೇ ಎಂದು ಎಲ್ಲರಿಗೂ ತಿಳಿಸಿ ಹೇಳಬೇಕು.

ಧೈರ್ಯವಾಗಿ ಎದುರಿಸಿ ಬಾಳುವ ಮನಸ್ಥಿತಿ ಬೆಳೆಸಿ

ಧೈರ್ಯವಾಗಿ ಎದುರಿಸಿ ಬಾಳುವ ಮನಸ್ಥಿತಿ ಬೆಳೆಸಿ

ಇನ್ನು ಎಲ್ಲವೂ ಸರಿ ಹೋದ ಮೇಲೂ ಕೂಡಾ ಅನಗತ್ಯವಾಗಿ ಹೊರಗೆ ಹೋಗುವುದು, ಮೈ ಕೈ ಮುಟ್ಟಿ ಮಾತಾಡುವುದು ಎಲ್ಲಾ ನಿಲ್ಲಿಸಬೇಕು. ಆದಷ್ಟು ಅಂತರ ಕಾಯ್ದು ಕೊಂಡು ಬದುಕಬೇಕು. ನಮ್ಮ ನಾಲಿಗೆಗೆ ರುಚಿ ಕೊಡುವ ಆಹಾರ ಕ್ಕಿಂತ ಹೊಟ್ಟೆಗೆ, ಆರೋಗ್ಯಕ್ಕೆ ಉತ್ತಮವಾದ ಆಹಾರಗಳನ್ನು ಸೇವಿಸಬೇಕು. ಬಿಸಿನೀರು ಮತ್ತು ನಿಂಬೆ ಬೆರೆಸಿದ ಬಿಸಿ ನೀರನ್ನು ಕುಡಿಯುತ್ತಿರಬೇಕು.

ಇನ್ನು ಶಾಲೆ, ಕಾಲೇಜು ಗಳಲ್ಲಿ ಪರೀಕ್ಷೆ ಮುಗಿಯದ ಮಕ್ಕಳು ತುಂಬ ಬೇಜಾರಲ್ಲಿ ಇರಬಹುದು ಮುಂದೆ ನಮ್ಮ ಕಥೆ ಏನು ಅನ್ನುವ ಯೋಚನೆ ಎಲ್ಲರಲ್ಲೂ ಇರುವುದು ಸಾಮಾನ್ಯ ಅಂತಹ ಮಕ್ಕಳಿಗೆ ಆದಷ್ಟು ಧೈರ್ಯ ತುಂಬಿ, ಪುಸ್ತಕದ ಪಾಠಕ್ಕಿಂತ, ಜೀವನದ ಪಾಠದಲ್ಲಿ ಪರೀಕ್ಷೆ ಹೇಗೆ ಎದುರಿಸಿ ಬಾಳಬೇಕು ಎನ್ನುವುದನ್ನು ಹೇಳಿ ಕೊಡಬೇಕು. ಮಕ್ಕಳು ಮುಂದೆ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅವರನ್ನು ಸಿದ್ದ ಗೊಳಿಸಬೇಕು. ಜಗತ್ತಿನಲ್ಲಿ ಎಲ್ಲರೂ ಕಷ್ಟದಲ್ಲಿ ಇರುವಾಗ ನಾವು ಇಷ್ಟಾದರೂ ನೆಮ್ಮದಿಯಾಗಿ ಇರುವಂತೆ ಮಾಡಿದ ಆ ದೇವರಿಗೆ ದಿನಾಲೂ ಪ್ರಾರ್ಥನೆ ಸಲ್ಲಿಸುವ ಅಭ್ಯಾಸವನ್ನು ಮಕ್ಕಳಿಗೆ ಮಾಡಿಸಬೇಕು. ಸಿಕ್ಕಿರುವ ಸಮಯವನ್ನು ಆದಷ್ಟು ಉತ್ತಮವಾದ ವಿಚಾರಗಳೊಂದಿಗೆ, ಸಂತೋಷವಾಗಿ ಕಳೆಯಲು ಪ್ರಯತ್ನ ಮಾಡಬೇಕು. ಏನೇ ಬಂದರೂ ಧೈರ್ಯವಾಗಿ ಎದುರಿಸಿ ಬಾಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.

English summary
#LifeAfterCorona: How will be life after Corona menance gets over. Homemaker From Mysuru, Vanishri R Bhat's insights on how to fight Coronavirus is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X