ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#LifeAfterCorona: ಕೊಳ್ಳುಬಾಕತನ ಕಮ್ಮಿ ಮಾಡಿ, ಪ್ರೀತಿ ಬಾಂಧವ್ಯ ಬೆಳೆಸಿ

By ಶಾರದಾ ಮೂರ್ತಿ, ಬೆಂಗಳೂರು
|
Google Oneindia Kannada News

'ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸಿದೆ. ಈ ಸರಣಿಯಲ್ಲಿ 9ನೇ ಲೇಖನವಾಗಿ ಹಿರಿಯ ಗೃಹಿಣಿ ಶಾರದಾ ಮೂರ್ತಿ ಅವರ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಕೊರೊನಾ ಸುತ್ತ ಸುಳ್ಳು ಸುದ್ದಿಗಳು, ಅಸಹ್ಯಕರ ರೀತಿಯಲ್ಲಿ ಮಾಹಿತಿ ಹಂಚಿಕೆಯಿಂದಾಗಿ ಗೋಜಲಾಗಿರುವ ಸನ್ನಿವೇಶದಲ್ಲಿ ಸಮುದಾಯಕ್ಕೆ ಮುನ್ನೋಟಗಳು ಬೇಕಿವೆ. ದೂರದೃಷ್ಟಿಯಿಂದ ಕೂಡಿರುವ ಸಲಹೆ, ಸೂಚನೆಗಳು ಜನರಲ್ಲಿ ಆತ್ಮವಿಶ್ವಾಸ ತುಂಬಬಹುದು, ಅತ್ಯಂತ ಕೆಟ್ಟ ಸನ್ನಿವೇಶವನ್ನು ಎದುರಿಸಲು ಜನರನ್ನು ಸಜ್ಜುಗೊಳಿಸಬಹುದು.

#LifeAfterCorona: ನಿಮಗಾಗಿ, ನಿಮ್ಮವರ ಒಳಿತಿಗಾಗಿ ಮುಂಜಾಗ್ರತೆ ವಹಿಸಿ#LifeAfterCorona: ನಿಮಗಾಗಿ, ನಿಮ್ಮವರ ಒಳಿತಿಗಾಗಿ ಮುಂಜಾಗ್ರತೆ ವಹಿಸಿ

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?
3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?
4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮ್ಮ ಬರಹ/ವಿಡಿಯೋವನ್ನು ಇಮೇಲ್ ([email protected]) ಮಾಡಿ
ನಿಮ್ಮ ಉತ್ತರಗಳನ್ನು ಸರಣಿ ರೂಪದಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.

ಹರಟೆ ಸುತ್ತಾಟ, ಸಭೆ ಸಮಾರಂಭಗಳು ಎಲ್ಲಾ ಬಂದ್

ಹರಟೆ ಸುತ್ತಾಟ, ಸಭೆ ಸಮಾರಂಭಗಳು ಎಲ್ಲಾ ಬಂದ್

ಕೊರೋನಾ ಎಂಬ ಅಘಾತಕಾರಿ ಖಾಯಿಲೆಯ ಬಗ್ಗೆ ಮೊತ್ತ ಮೊದಲು ಕೇಳಿದಾಗ ವೈಯುಕ್ತಿಕವಾಗಿ ನನಗೆ ಬಹಳಾ ಗಾಬರಿ ,ಆತಂಕ, ಭಯ ಆದದ್ದು ಸಹಜ. ಆದರೆ ಹೊರಗಡೆ ಹೋಗಲಿಕ್ಕಿಲ್ಲ, ಬಂಧು ಬಾಂಧವರ ಜೊತೆಗೆ , ಸ್ನೇಹಿತರ ಒಟ್ಟಿಗೆ ಹರಟೆ ಸುತ್ತಾಟ, ಸಭೆ ಸಮಾರಂಭಗಳು ಎಲ್ಲವೂ ಬಂದ್ ಎಂದಾಗ ಬೇರೆ ರೀತಿಯ ಕೊರಗು .

ಸರಿ..ಬಂದದ್ದನ್ನೆಲ್ಲಾ ಎದುರಿಸಬೇಕಲ್ಲವೇ..? ಮನೆಯಲ್ಲಿಯೇ ಕುಳಿತು ಮಾಡಬಹುದಾದ ಕೆಲಸಗಳ ಪಟ್ಟಿ ತಯಾರಿಸಿದೆ . ಮನೆಯೆಲ್ಲಾ ಶುಚಿಗೊಳಿಸುವ ಕಾರ್ಯದಲ್ಲಿ ಒಂದೆರಡು ದಿನ ಹಿಡಿಯಿತು .ಎಷ್ಟೋ ವರ್ಷಗಳ ಹಿಂದೆ ಅಮ್ಮ ಮಾಡುವಾಗ ನೋಡಿ ಮಾತ್ರ ತಿಳಿದಿದ್ದ ಹಪ್ಪಳ ,ಸಂಡಿಗೆ ಗಳನ್ನು ಮಾಡಲು ಪ್ರಯತ್ನಿಸಿ ಯಶಸ್ವಿಯಾದೆ.

ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಬಹಳಾ ಪ್ರಿಯವಾದ ಓದು , ಬರಹಕ್ಕೆ ಬಹಳ ಸಮಯ ಸಿಕ್ಕಿದ್ದು ತುಂಬಾ ಖುಷಿಯಾಯಿತು. ಓದದೆ ಬಾಕಿ ಇದ್ದ ಪುಸ್ತಕಗಳ ಓದು , ಬರೆಯಲು ಬಾಕಿ ಇಟ್ಟ ಬರಹಗಳು ಇದರ ಕಡೆಗೆ ಗಮನ ಕೊಡಲು ಸಮಯ ಸಿಕ್ಕಂತಾಯಿತು .ಸಮಾನ ಮನಸ್ಕರ ಗುಂಪೊಂದರ ಸದಸ್ಯೆಯಾದ ನನಗೆ ದಿನವೂ ಒಂದು ಗಂಟೆ ಒಂದು ವಿಷಯದ ಬಗ್ಗೆ ಚರ್ಚೆ ಮಾಡುವ ಭಾಗ್ಯವೂ ದೊರೆತಿದೆ. ದಿನಸಿ ,ತರಕಾರಿಗೆ ಏನೂ ತೊಂದ್ರೆ ಆಗುತ್ತಿಲ್ಲ .ಹೀಗೆಲ್ಲಾ ಇರುವಾಗ ಜೀವನ ಬಿಕ್ಕಟ್ಟು ಎನಿಸಲಿಲ್ಲ. ಹಿತಮಿತವಾಗಿ ಜೀವನ ನಡೆಯುತ್ತಿದೆ.

ವೈದ್ಯಲೋಕದ ಮೇಲೆ ಬಲವಾದ ನಂಬಿಕೆಯಿದೆ

ವೈದ್ಯಲೋಕದ ಮೇಲೆ ಬಲವಾದ ನಂಬಿಕೆಯಿದೆ

ಈ ಸಮಸ್ಯೆ ಇಡೀ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ. ಪ್ರತಿಯೊಂದು ಕಾಯಿಲೆಗೂ ಸಹಾ ಔಷಧ ಇದ್ದೇ ಇರುತ್ತದೆ. ಇಡೀ ವಿಶ್ವದಾದ್ಯಂತ ಪಸರಿಸಿರುವ ಈ ಮಹಾಮಾರಿಯನ್ನು ಓಡಿಸುವ ಸಲುವಾಗಿ ವೈದ್ಯರು, ಸಂಶೋಧಕರು, ವಿಜ್ಞಾನಿಗಳು ಸತತ ಪ್ರಯತ್ನ ನಡೆಸುತ್ತಲೇ ಇದ್ದಾರೆ . ದೊಡ್ಡ ಮಟ್ಟದಲ್ಲಿ ಆಗಿರುವುದರಿಂದ ಪರಿಹಾರ ಕಂಡು ಹಿಡಿಯಲು ಸಮಯ ಬೇಕಾಗುತ್ತದೆ ಅಷ್ಟೇ..! ಅವರುಗಳ ನಿರಂತರ ಸಂಶೋಧನೆ, ಪ್ರಯತ್ನಗಳಿಗೆ ನಾವು ತಾಳ್ಮೆಯಿಂದ, ಸಹನೆಯಿಂದ ಕಾಯಬೇಕು.

#LifeAfterCorona: ದೇಶಿ ಉತ್ಪನ್ನ, ದೇಶಿ ಪ್ರತಿಭೆಗೆ ಬೆಲೆ ಸಿಗುವಂತಾಗಲಿ#LifeAfterCorona: ದೇಶಿ ಉತ್ಪನ್ನ, ದೇಶಿ ಪ್ರತಿಭೆಗೆ ಬೆಲೆ ಸಿಗುವಂತಾಗಲಿ

ತುಂಬಾ ಮುಂಚಿನ ಕಾಲದಲ್ಲಿ ಪ್ಲೇಗ್, ಕಾಲರಾ ಬಂದಾಗ ಹಳ್ಳಿ, ಹಳ್ಳಿಗಳೇ ಸಾವಿನ ತಾಣ ಆಗುತ್ತಿತ್ತು....ಉಳಿದ ಜನರು ಗುಂಪಾಗಿ ಗುಳೇ ಎದ್ದು ಹೋಗಿಬಿಡುತ್ತಿದ್ದರು. ಎಂದೆಲ್ಲಾ ನಮ್ಮ ಹಿರಿಯರಿಂದ ಕೇಳಿ ತಿಳಿದಿದ್ದೆವು. ಆಗ ಇಷ್ಟೊಂದು ಸಾಮಾಜಿಕ ಸಂಪರ್ಕ , ಜನಸಂಖ್ಯೆಯ ಹೆಚ್ಚಳ ಇಲ್ಲದಿದ್ದುದರಿಂದ ಒಬ್ಬರಿಂದ ಒಬ್ಬರಿಗೆ ಹರಡುವುದು ಸೀಮಿತ ಮಟ್ಟದಲ್ಲಿ ಇರುತ್ತಿತ್ತು. ವಿಮಾನ, ರೈಲು, ಸಾಮಾಜಿಕ ಜಾಲತಾಣಗಳು ಹೀಗೆ
ಬೇರೆಲ್ಲಾ ಆಧುನೀಕತೆಯನ್ನು ನಾವು ಒಪ್ಪಿದ ಹಾಗೆ..... ...ಮಿಂಚಿನೋಪಾದಿಯಲ್ಲಿ ಹಬ್ಬುತ್ತಿರುವ "ಕೊರೊನಾ " ಮಾರಿಯನ್ನು, ಅದರ ಅಗಾಧತೆಯ ಕೈವಾಡವನ್ನೂ ನಾವು ಒಪ್ಪಲೇಬೇಕು ಅಲ್ಲವೇ ..?

ವಿಜ್ಞಾನಿಗಳು, ಡಾಕ್ಟರ್ ಗಳು , ನರ್ಸ್ ಗಳು ಮಾಡುತ್ತಿರುವ ಪ್ರಯತ್ನಕ್ಕೆ ಖಂಡಿತಾ ಒಳ್ಳೆಯ ಫಲ ಸಿಕ್ಕೇ ಸಿಗುತ್ತದೆ ಎಂಬ ಬಲವಾದ ಆಶಯ ಹೊಂದೋಣ.

ಕೂಡು ಕುಟುಂಬ ಹೆಚ್ಚು ಪ್ರಚಲಿತ ಆಗುವುದು

ಕೂಡು ಕುಟುಂಬ ಹೆಚ್ಚು ಪ್ರಚಲಿತ ಆಗುವುದು

ಕೊರೋನಾ ನಂತರ ಇಡೀ ವಿಶ್ವದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆ ತಂದೇ ತರುತ್ತದೆ. ಅದರಲ್ಲೂ ಪಾರಂಪರಿಕವಾಗಿ ಸಂಸ್ಕೃತಿ ಗೆ ಹೆಚ್ಚಿನ ಮಹತ್ವ ಇರುವ ಭಾರತದ ಜನಜೀವನದಲ್ಲಿ ಬಲು ದೊಡ್ಡ ರೀತಿಯಲ್ಲಿ ಬದಲಾವಣೆ ತರುತ್ತದೆ ಎಂದು ನನ್ನ ಅಭಿಪ್ರಾಯ , ನಂಬಿಕೆ.

ಕೂಡು ಕುಟುಂಬಗಳು ನಿಧಾನವಾಗಿ ಆಧುನಿಕತೆಯತ್ತ ಸರಿದು, ಒಡೆಯುತ್ತಾ ಹೋಗಿ ಕೊನೆಯಲ್ಲಿ ವೃದ್ಧ ತಂದೆತಾಯಿ ಮಾತ್ರಾ ಉಳಿಯುತ್ತಿದ್ದ ಕಾಲ ಇದು. ಛಿದ್ರವಾದ ಕುಟುಂಬದ ಖರ್ಚುಗಳು ಹೆಚ್ಚಾದಾಗ, ಮಾನಸಿಕ ಬೆಂಬಲ, ಆರ್ಥಿಕ ಬೆಂಬಲ, ನೈತಿಕ ಬೆಂಬಲ ಕೌಟುಂಬಿಕ ಬೆಂಬಲ ಎಲ್ಲವನ್ನೂ ನೀಡಿ "ಒಗ್ಗಟ್ಟಿನಲ್ಲಿ ಬಲವಿದೆ " ಎಂಬ ನಾಣ್ಣುಡಿಯಂತೆ ಕೂಡು ಕುಟುಂಬ ಹೆಚ್ಚು ಪ್ರಚಲಿತ ಆಗುವುದು ಖಂಡಿತ. ಇದು ಕುಟುಂಬದ ಎಲ್ಲ ಸದಸ್ಯರು ತಾವಾಗಿ ಒಪ್ಪಿಕೊಳ್ಳಲೇ ಬೇಕಾದ ಬೆಳವಣಿಗೆ ಕಾಣಬಹುದು .

#LifeAfterCorona: ಹೊಸತನ ಸೃಷ್ಟಿಯಾಗುವ ಆಶಯ ಬಲವಾಗಿದೆ#LifeAfterCorona: ಹೊಸತನ ಸೃಷ್ಟಿಯಾಗುವ ಆಶಯ ಬಲವಾಗಿದೆ

ಈ ರೀತಿಯ ಬದಲಾವಣೆಯಿಂದ ದೇಶದ ಆರ್ಥಿಕ ವ್ಯವಸ್ಥೆ. ಸಹಾ ಸದೃಢವಾಗುತ್ತದೆ , ಮತ್ತು ಸಾಮಾಜಿಕ ಬೆಳವಣಿಗೆಯೂ ಆಗುತ್ತದೆ . ಒಂಟಿತನ , ಡಿಪ್ರೆಷನ್ ಇವೆಲ್ಲಕ್ಕೂ ಮದ್ದಾಗಿ ಪರಸ್ಪರ ಪ್ರೀತಿ, ವಾತ್ಸಲ್ಯ , ಸಹಬಾಳ್ವೆ, ಇವೆಲ್ಲದರಿಂದ ಪ್ರಾರಂಭವಾಗುವ ಸಂಘಟನೆ , ಒಗ್ಗಟ್ಟು, ಮಾನಸಿಕ ಬಲ ಹೆಚ್ಚಿ ಸಮಾಜಮುಖಿ ಆಗಲು ಮನುಷ್ಯನಿಗೆ ಸಹಕಾರಿ ಆಗುತ್ತದೆ.ನಾನು ,ನನ್ನದು ಎಂಬ ಸ್ವಾರ್ಥ ಭಾವ ಬಿಟ್ಟು ನಮ್ಮ ಸಮಾಜ ,
ನಮ್ಮ ರಾಜ್ಯ , ನಮ್ಮ ರಾಷ್ಟ್ರ ಎಂಬ ವಿಶಾಲ ಭಾವನೆ ಬಲಿಷ್ಠ ವಾಗುತ್ತದೆ.

ನೊಂದವರ ನೋವಲ್ಲಿ ಭಾಗಿಯಾಗಬೇಕು

ನೊಂದವರ ನೋವಲ್ಲಿ ಭಾಗಿಯಾಗಬೇಕು

ಇಂತಹ ಮಹಾಮಾರಿಯಾದ ಕೊರೊನಾವನ್ನೇ ಎದುರಿಸಿದ ಮೇಲೆ ನಂತರದ ದಿನಗಳಲ್ಲಿ ಬರುವ ಅಡೆತಡೆ ಹೆಚ್ಚು ಎನಿಸೋಲ್ಲ .'ಜೀವ ಇದ್ದರೆ ಬೇಡಿ ತಿಂದೇನು' ಎಂಬ ಗಾದೆಯಂತೆ . ಇಡೀ ರಾಷ್ಟ್ರದ ಜನರೇ ನೊಂದವರಿಗೆ ಸಹಾಯ ನೀಡುತ್ತಿರುವಾಗ .... ನಂತರದಲ್ಲಿ ಕೈ ಬಿಡುವುದೇ...! ಸದ್ಯಕ್ಕೆ ಬಂದ ಕಂಟಕ ಪರಿಹರಿಸುವ ಮಾರ್ಗಗಳನ್ನು ಅನುಸರಿಸೋಣ . ಈಗಲೂ ...ಮುಂದೆಯೂ... ಉಳ್ಳವರು ಇಲ್ಲದವರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ನೊಂದವರ ನೋವಲ್ಲಿ ಭಾಗಿಯಾಗಬೇಕು. ಕೊಳ್ಳುಬಾಕತನದ ಸಂಸ್ಕೃತಿ ಕಮ್ಮಿ ಮಾಡಿ. ಬಂಧು ಬಾಂಧವರ, ಸ್ನೇಹಿತರ ವಲಯದಲ್ಲಿ ನೋವುಂಡವರ ಗುರುತಿಸಿ, ಅವರು ನೋವ ಹಂಚಿಕೊಳ್ಳಲು ನಿಮಗೆ ತಿಳಿದಹಾಗೆ ಸಹಾಯ ಮಾಡಿ. ಕಾನೂನಿಗೆ ಕೈ ಜೋಡಿಸಿ.

#LifeAfterCorona: ಇನ್ನಷ್ಟು ಆರ್ಥಿಕ ಕುಸಿತಕ್ಕೆ ಸಿದ್ಧರಾಗಬೇಕಿದೆ#LifeAfterCorona: ಇನ್ನಷ್ಟು ಆರ್ಥಿಕ ಕುಸಿತಕ್ಕೆ ಸಿದ್ಧರಾಗಬೇಕಿದೆ

ಲೇಖಕಿಯ ಪರಿಚಯ

ಲೇಖಕಿಯ ಪರಿಚಯ

ಶಾರದಾ ಮೂರ್ತಿ.
ಮೂಲ ಸ್ಥಳ ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯ. ಪ್ರಸ್ತುತ ವಾಸ ಬೆಂಗಳೂರು.
ಸಂತೃಪ್ತ ಜೀವನ ನಡೆಸುತ್ತಿರುವ ಗೃಹಿಣಿ.
ಕನ್ನಡ M. A. ಪದವೀಧರೆ.
ಲೇಖಕಿ. ಸಾಮಾಜಿಕ ಕಳಕಳಿ ಇರುವ ಹೆಮ್ಮೆಯ ಭಾರತದ ಪ್ರಜೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಅಭಿಮಾನ. ಹಲವಾರು ಕಥೆ, ಲೇಖನಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂತರಾಷ್ಟ್ರೀಯ ಮಟ್ಟದ ಮ್ಯಾಗಝೀನ್ ನಲ್ಲಿಯೂ ಲೇಖನ ಪ್ರಕಟವಾಗಿದೆ.

English summary
#LifeAfterCorona: Homemaker Sharada Murthy says need to Change in Consumer culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X