ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#LifeAfterCorona: Science is God ಎಂದ ಮಠ ಗುರುಪ್ರಸಾದ್

|
Google Oneindia Kannada News

ಲಾಕ್ಡೌನ್ ಪರಿಸ್ಥಿತಿಯಲ್ಲಿರುವ ನಮ್ಮ ಜನ ಸಮುದಾಯಕ್ಕೆ ನಿಯಮ ಪಾಲನೆ ಸಂಕಲ್ಪ ನಿಷ್ಠ ಬೇಕಿದೆ. ಮುಂದೇನು ಎಂಬುದರ ಬಗ್ಗೆ ಮುನ್ನೋಟಗಳು ಬೇಕಿವೆ. ದೂರದೃಷ್ಟಿಯಿಂದ ಕೂಡಿರುವ ಸಲಹೆ, ಸೂಚನೆಗಳು ಜನರಲ್ಲಿ ಆತ್ಮವಿಶ್ವಾಸ ತುಂಬಬಹುದು, ಅತ್ಯಂತ ಕೆಟ್ಟ ಸನ್ನಿವೇಶವನ್ನು ಎದುರಿಸಲು ಜನರನ್ನು ಸಜ್ಜುಗೊಳಿಸಬಹುದು ಎಂಬ ನಂಬಿಕೆ, ವಿಶ್ವಾಸ ನಮ್ಮಲಿದೆ. ಈ ನಿಟ್ಟಿನಲ್ಲಿ ಒನ್ಇಂಡಿಯಾ ಕನ್ನಡ #LifeAfterCorona ಸರಣಿ ಆರಂಭಿಸಿದ್ದು, ಈ ಸರಣಿಯ ಮೂರನೇ ಲೇಖನ/ವಿಡಿಯೋದಲ್ಲಿ ಮಠ ಚಿತ್ರ ಖ್ಯಾತಿಯ ಗುರುಪ್ರಸಾದ್ ಅವರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

Recommended Video

Lifeaftercorona Science is God -ಮಠ ಗುರುಪ್ರಸಾದ್ | Oneindia Kannada

ಕೊರೊನಾವೈರಸ್‌ ಭೀತಿಯಿಂದ ಬದುಕು ಉಳಿಸಿಕೊಳ್ಳಲು ಜನ ಹೆಣಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬುಡಮೇಲಾಗುತ್ತಿರುವುದು ಗೋಚರವಾಗುತ್ತಿದೆ. ಈಗಾಗಲೇ ಪರಿಣಿತರು, ಕೊರೊನಾ ನಂತರದ ಬದುಕು ಮೊದಲಿನ ಸ್ಥಿತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಕೊರೊನಾ ನಂತರ ಜನಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ನಿರೀಕ್ಷೆಯೂ ಕಷ್ಟ ಎನ್ನುವ ಮಾತುಗಳಿವೆ. ಈ ಕುರಿತು ಇನ್ನಷ್ಟು ಆಳವಾದ ಒಳನೋಟಗಳು ಈ ಕಾಲದ ಅಗತ್ಯ.

#LifeAfterCorona: ಪಲ್ಲಟಗಳನ್ನು ಗಮನಿಸಬೇಕು- ಬಿ. ಸುರೇಶ#LifeAfterCorona: ಪಲ್ಲಟಗಳನ್ನು ಗಮನಿಸಬೇಕು- ಬಿ. ಸುರೇಶ

#LifeAfterCorona: Director Mata Guruprasad says Science is God

ಸಿನಿಮಾ ನಿರ್ದೇಶಕ, ಸಂಭಾಷಣೆಕಾರ, ಗೀತರಚನೆಕಾರ ಹಾಗೂ ನಟ 'ಮಠ' ಗುರುಪ್ರಸಾದ್ ಅವರು ತಮ್ಮ ಮುಂದಿನ ಸಿನಿಮಾ 'ರಂಗನಾಯಕ' ಚಿತ್ರಕಥೆ ಮಾಡಿಕೊಳ್ಳುವಲ್ಲಿ ಬಿಜಿಯಾಗಿದ್ದಾರೆ. ಅದರ ಜತೆ ಜತೆಗೆ ಆಗಾಗ ಫೇಸ್ ಬುಕ್ ಲೈವ್ ಬರುತ್ತಿದ್ದು, ಸ್ಕ್ರಿಪ್ಟ್ ಬರವಣಿಗೆ ಬಗ್ಗೆ ಆನ್ ಲೈನ್ ಕ್ಲಾಸ್ ಮಾಡುವ ಉಮೇದಿನಲ್ಲಿದ್ದಾರೆ. ಈ ಮಧ್ಯೆ ಒನ್ಇಂಡಿಯಾ ಕನ್ನಡದ ಅಭಿಯಾನದ ಪ್ರಶ್ನೆಗಳಿಗೆ ತಮ್ಮದೇ ಧಾಟಿಯ ಉತ್ತರ ನೀಡಿದ್ದಾರೆ. ಇದರಲ್ಲಿ ಗುರು 'ಪಂಚ್' ಇದೆ. ಕೊಂಚ ಎಮೋಷನ್ ಇದೆ. ಅದೆಲ್ಲಕ್ಕಿಂತ ಸೈನ್ಸ್ ಇಸ್ ಗಾಡ್ ಎಂಬ ಸ್ಟೇಟ್ ಮೆಂಟ್ ಇದೆ. 'ಮುಚ್ಚಿಕೊಂಡು', ಅಂದರೆ 'ಕಿಟಕಿ ಮುಚ್ಚಿಕೊಂಡು' ಮನೆಯಲ್ಲಿದ್ದು ಬಿಡಿ ಎಂಬ ಆಗ್ರಹಪೂರ್ವಕ ಸಲಹೆಯನ್ನೂ ನೀಡಿದ್ದಾರೆ. ನಮ್ಮ ಪ್ರಶ್ನೆಗಳಿಗೆ 'ಗುರು ಉಪದೇಶ' ಅಲ್ಲ, ಉತ್ತರ ಇದೆ.

#LifeAfterCorona: 'ನಾಜೂಕಾಗಿ ದಿನ ದೂಡುವ ಕಾಲ'- ಸತೀಶ್ ಚಪ್ಪರಿಕೆ#LifeAfterCorona: 'ನಾಜೂಕಾಗಿ ದಿನ ದೂಡುವ ಕಾಲ'- ಸತೀಶ್ ಚಪ್ಪರಿಕೆ

ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಮುಖ್ಯ ಪ್ರಶ್ನೆ ಜೊತೆಗೆ ಈ ಕೆಳಗಿನ ನಾಲ್ಕು ಪ್ರಶ್ನೆಗಳಿಗೆ ಉತ್ತರವನ್ನು ನೀವು ಕಳಿಸಬಹುದು

#LifeAfterCorona: Director Mata Guruprasad says Science is God

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?
3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?
4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮ್ಮ ಬರಹ/ವಿಡಿಯೋವನ್ನು ಇಮೇಲ್ [email protected] ಮಾಡಿ, ಅಥವಾ ವಾಟ್ಸಾಪ್ ಸಂಖ್ಯೆಗೆ ಕಳಿಸಿ.

English summary
#LifeAfterCorona: How will be life after Corona menance gets over. Director Mata Guruprasad insights on how to fight Coronavirus, he is confident Scientist will come up with a solution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X